ಲಾಹೋರ್‌[ಮಾ.19]: ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಿ ಮಾಡಿದ ಪಾಕಿಸ್ಥಾನ ಮತ್ತು ಚೀನಾಕ್ಕೆ, ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್‌’ ಛೀಮಾರಿ ಹಾಕಿದೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಪಾಕ್‌ ಮತ್ತು ಚೀನಾ ಯಾವುದೇ ಅಡಚಣೆ ಮಾಡದೇ ಸೂಕ್ತ ಸಹಕಾರ ನೀಡಬೇಕು. ಉಗ್ರರಲ್ಲಿ ‘ಒಳ್ಳೆಯ ಮತ್ತು ಕೆಟ್ಟ’ ಎಂಬುದಿಲ್ಲ, ದೇಶಕ್ಕೆ ತೊಂದರೆ ಅಥವಾ ಅಪಾಯ ಉಂಟು ಮಾಡಿದಾಗ ಕ್ರಮ ಕೈಗೊಳ್ಳಲೇ ಬೇಕೆಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದಿದೆ.

ಇನ್ನು ಪ್ರಧಾನಿ ಇಮ್ರಾನ್‌ಖಾನ್‌ ಮಾತು ಕೊಟ್ಟಂತೆ, ಉಗ್ರರ ಮಟ್ಟಹಾಕಲು ತುರ್ತಾಗಿ ಮುಂದಾಗಿ ಕ್ರಮ ಕೈಗೊಂಡಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಗೌರವ ಲಭಿಸುತ್ತದೆ ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.