Asianet Suvarna News Asianet Suvarna News

ನ್ಯೂಜೆರ್ಸಿಯ ಒಂದೇ ಶಾಲೆಯ 100 ವಿದ್ಯಾರ್ಥಿಗಳಿಗೆ ಕ್ಯಾನ್ಸರ್‌!

* ಅತ್ಯಂತ ವಿರಳವಾದ ಗ್ಲಿಯೋಬ್ಲಾಸ್ಟೋಮಾ ಪತ್ತೆ

* 1ಅತ್ಯಂತ ವಿರಳವಾದ ಗ್ಲಿಯೋಬ್ಲಾಸ್ಟೋಮಾ ಪತ್ತೆ

*102 ಜನರಿಗೆ ಕ್ಯಾನ್ಸರ್‌: ತನಿಖೆಗೆ ಆದೇಶ

Over 100 Former Students Staff Of New Jersey School Get Rare Cancer Probe Launched pod
Author
Bangalore, First Published Apr 18, 2022, 6:57 AM IST

ನ್ಯೂಜೆರ್ಸಿ(ಏ.18): ನ್ಯೂಜೆರ್ಸಿಯ ವುಡ್‌ಬ್ರಿಡ್ಜ್‌ನಲ್ಲಿರುವ ಕೊಲೋನಿಯಾ ಹೈ-ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿರುವ ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಅತ್ಯಪರೂಪದ ಗ್ಲಿಯೋಬ್ಲಾಸ್ಟೋಮಾ ಹೆಸರಿನ ಕ್ಯಾನ್ಸರ್‌ ರೋಗ ಕಾಣಿಸಿಕೊಳ್ಳುತ್ತಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಶಾಲೆಯ ಹಳೆಯ ವಿದ್ಯಾರ್ಥಿ, ಕ್ಯಾನ್ಸರ್‌ನಿಂದ ಗುಣಮುಖರಾದ ಅಲ್‌ ಲುಪಿಯಾನೋ ಎಂಬವರು ಈ ರಹಸ್ಯ ಬೇಧಿಸಲು ಅಧ್ಯಯನ ನಡೆಸಿದ ಬಳಿಕ ಈ ಬೆಳವಣಿಗೆ ಬಹಿರಂಗಗೊಂಡಿದೆ. ಲುಪಿಯಾನೋ ಸಹೋದರಿ, ಪತ್ನಿ ಸಹ ಗ್ಲಿಯೋಬ್ಲಾಸ್ಟೋಮಾಗೆ ತುತ್ತಾಗಿದ್ದರು. ಅಲ್ಲದೆ 1975ರಿಂದ 2000ರ ವರೆಗೆ ವುಡ್‌ಬ್ರಿಡ್ಜ್‌ ಶಾಲೆಯಲ್ಲಿ ಅಧ್ಯಯನ ಮಾಡಿರುವ 102 ಮಂದಿಯಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡಿದೆ. ಹೀಗಾಗಿ ಈ ರೋಗದ ಹಿಂದಿನ ಕಾರಣವನ್ನು ಪತ್ತೆ ಮಾಡೇ ಮಾಡುತ್ತೇನೆ ಎಂದು ಅವರು ಸವಾಲೆಸೆದಿದ್ದಾರೆ.

ತಜ್ಞರ ಪ್ರಕಾರ ಗ್ಲಿಯೋಬ್ಲಾಸ್ಟೋಮಾ ಎಂಬುದು ತೀರಾ ವಿರಳವಾಗಿ ಕಂಡುಬರುವ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌. ಒಂದು ಲಕ್ಷದ ಪೈಕಿ ಕೇವಲ ಶೇ.3.21ರಷ್ಟುಜನರಲ್ಲಿ ಮಾತ್ರ ಪತ್ತೆಯಾಗುತ್ತದೆ. ಹೀಗಾಗಿ ವುಡ್‌ಬ್ರಿಡ್ಜ್‌ನಲ್ಲಿ ವ್ಯಾಪಕವಾಗಿ ಕ್ಯಾನ್ಸರ್‌ ಹರಡಲು ಕಾರಣವೇನೆಂದು ಪತ್ತೆಹಚ್ಚಲು ಅಲ್ಲಿನ ಮೇಯರ್‌ ತನಿಖೆಗೆ ಆದೇಶಿಸಿದ್ದಾರೆ. ಈ ಬೆನ್ನಲ್ಲೇ ಅಧಿಕಾರಿಗಳು ಶಾಲೆಯ 28 ಎಕರೆ ಪ್ರದೇಶದಲ್ಲಿ ರೇಡಿಯೊಲಾಜಿಕಲ… ಪರೀಕ್ಷೆ ನಡೆಸುತ್ತಿದ್ದಾರೆ.

ಮಕ್ಕಳಲ್ಲಿ ಪತ್ತೆಯಾಗುತ್ತಿದೆ ವಿಚಿತ್ರ ಪಿತ್ತಜನಕಾಂಗದ ಕಾಯಿಲೆ, ರೋಗಲಕ್ಷಣಗಳೇನು ?

ಮಕ್ಕಳ ಆರೋಗ್ಯ (Health) ತುಂಬಾ ಸೂಕ್ಷ್ಮವಾದ ವಿಚಾರ. ಹೀಗಾಗಿ ಪ್ರತಿ ಹಂತದಲ್ಲು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದುದು ಅಗತ್ಯ. ಅದರಲ್ಲೂ ಇತ್ತೀಚಿಗೆ ಒಂದೊಂದಾಗಿ ಕಾಣಿಸಿಕೊಳ್ಳುತ್ತಿರುವ ಸೋಂಕಿನ ಅಲೆಗಳ ಹಾವಳಿಯಿಂದ ಮಕ್ಕಳ (Children) ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೋವಿಡ್ ಎಕ್ಸ್‌ಇ ವೆರೇಯೆಂಟ್ ಹಲವೆಡೆ ಪತ್ತೆಯಾಗಿರುವ ಬೆನ್ನಲ್ಲೇ ಇಂಗ್ಲೆಂಡ್, ಅಮೇರಿಕಾದಲ್ಲಿ ಮಕ್ಕಳಲ್ಲಿ ವಿಚಿತ್ರ ಕಾಯಿಲೆ (Disease)ಯೊಂದು ಪತ್ತೆಯಾಗುತ್ತದೆ. ಆರಂಭದಲ್ಲಿ ಕೆಲವೇ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದರೂ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಮಕ್ಕಳಲ್ಲಿ ನಿಗೂಢ ಪಿತ್ತಜನಕಾಂಗದ ಕಾಯಿಲೆ ಪತ್ತೆ
ಸದ್ಯ ವಿದೇಶಗಳಲ್ಲಿ ಮಕ್ಕಳಲ್ಲಿ ವಿಚಿತ್ರವಾದ ಲಕ್ಷಣಗಳನ್ನು ಹೊಂದಿರುವ ಪಿತ್ತಜನಕಾಂಗದ ಕಾಯಿಲೆ ಪತ್ತೆಯಾಗುತ್ತಿದೆ. ಯುಎಸ್, ಯುಕೆ, ಸ್ಪೇನ್ ಮತ್ತು ಐರ್ಲೆಂಡ್ ಮಕ್ಕಳಲ್ಲಿ ನಿಗೂಢ ಅನಾರೋಗ್ಯವು ಅವರ ಯಕೃತ್ತಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ ಎಂದು ವರದಿ ಮಾಡಿದೆ, ಇದರಿಂದಾಗಿ ಕೆಲವರಿಗೆ ಯಕೃತ್ತಿನ ಕಸಿ ಅಗತ್ಯ ಎಂದು ವೈದ್ಯರು ಸೂಚಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಕನಿಷ್ಠ 74 ನಿಗೂಢ ಪಿತ್ತಜನಕಾಂಗದ ಕಾಯಿಲೆಯ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಅಲಬಾಮಾದಿಂದ ಮಾತ್ರ 9 ರೀತಿಯ ಪ್ರಕರಣಗಳನ್ನು ವರದಿ ಮಾಡಿದೆ. ಮಕ್ಕಳಲ್ಲಿ ಮಾತ್ರ ಕಂಡುಬರುತ್ತಿರುವ ಈ ನಿಗೂಢ ಪಿತ್ತಜನಕಾಂಗದ ಕಾಯಿಲೆಯನ್ನು ಈ ತಿಂಗಳ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

Parenting Tips : ಫೋನ್‌ನಿಂದ ಮಕ್ಕಳನ್ನು ದೂರವಿಡಲು ಇಲ್ಲಿದೆ ಉಪಾಯ

ಇಂಗ್ಲೆಂಡ್ ಮತ್ತು ಅಮೇರಿಕಾ ಹೊರತುಪಡಿಸಿ, ಸ್ಪೇನ್ ಮತ್ತು ಐರ್ಲೆಂಡ್ ಕೂಡ ಇದೇ ರೀತಿಯ ಕೆಲವು ಪ್ರಕರಣಗಳನ್ನು ತನಿಖೆ ನಡೆಸುತ್ತಿವೆ ಎಂದು ವರದಿ ಹೇಳಿದೆ. ಕಳೆದ ಒಂದು ತಿಂಗಳಲ್ಲಿ ವರದಿಯಾದ ಪ್ರಕರಣಗಳ ಹೆಚ್ಚಳ ಮತ್ತು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ರೋಗ ಲಕ್ಷಣಗಳನ್ನು ಗಮನಿಸಿದರೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ" ಎಂದುವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಆರು ಪ್ರಕರಣಗಳು ತುಂಬಾ ತೀವ್ರವಾಗಿದ್ದು, ಅವರಿಗೆ ಯಕೃತ್ತಿನ ಕಸಿ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ..

ಈ ನಿಗೂಢ ಕಾಯಿಲೆ ಏನು? ರೋಗಲಕ್ಷಣಗಳು ಯಾವುವು ?
ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಈ ಕಾಯಿಲೆ ಮಕ್ಕಳಲ್ಲಿ ಮಾತ್ರ ಕಂಡುಬರುತ್ತಿದೆ. 1 ರಿಂದ 6 ವರ್ಷದೊಳಗಿನ ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ. ಇದು ಹೆಪಟೈಟಿಸ್ ಅಥವಾ ಯಕೃತ್ತಿನ ಉರಿಯೂತದಂತಹ ಸಾಮಾನ್ಯ ಯಕೃತ್ತಿನ ರೋಗಗಳಾಗಿವೆ. ಮಕ್ಕಳಲ್ಲಿ ಮೊದಲಿಗೆ ಕಾಮಾಲೆ, ಅತಿಸಾರ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ವರದಿಗಳ ಪ್ರಕಾರ, ರೋಗವು ಸಾಮಾನ್ಯವಾಗಿ ಶೀತಗಳಿಗೆ ಸಂಬಂಧಿಸಿದ ಕೆಲವು ರೀತಿಯ ವೈರಸ್‌ಗೆ ಸಂಬಂಧಿಸಿರಬಹುದು ಎಂದು ಹೇಳಲಾಗಿದೆ. 

Follow Us:
Download App:
  • android
  • ios