ನವದೆಹಲಿ( ಜ. 01)  ಜನವರಿ ಒಂದು ಹಲವರ ಪಾಲಿಗೆ ವಿಶೇಷ ದಿನ.. ಇದೇ ತಾರೀಕಿನಂದು ಜನ್ಮ ತಾಳಿದರೆ.. ಭಾರತದಲ್ಲಿ 60,000 ಶಿಶುಗಳ ಜನನವಾಗಲಿದೆ. ಪ್ರಂಪಂಚದಲ್ಲಿ ಒಟ್ಟು 3.7  ಕೋಟಿ ಮಕ್ಕಳು ಜನಿಸಲಿದ್ದಾರೆ ಎಂದು ಯುನಿಸೆಫ್  ತಿಳಿಸಿದೆ.

ಫಿಜಿಯಲ್ಲಿ  ವರ್ಷದ ಮೊದಲ ಮಗು ಜನಿಸಿದರೆ ಅಮೆರಿಕದಲ್ಲಿ ಕೊನೆಯ ಮಗು ಜನಿಸಲಿದೆ. (ಜ.1)  2020ರ ಹೊಸ ವರ್ಷಕ್ಕೆ ಹೋಲಿಸಿದರೆ, 7,390 ಕಡಿಮೆ ಶಿಶುಗಳು ಜನಿಸಲಿವೆ.

ಹೊಸ ವರ್ಷಕ್ಕೆ ಡಿಂಲ್ ಕ್ವೀನ್ ಹವಾ

ಜಾಗತಿಕವಾಗಿ, ಈ ಅರ್ಧದಷ್ಟು ಶಿಶುಗಳು ಕೇವಲ ಹತ್ತು ರಾಷ್ಟ್ರಗಳ್ಲಿ ಜನಿಸಲಿವೆ. ಭಾರತ (59,995), ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ (12,336), ಇಥಿಯೋಪಿಯಾ (12,006), ಯುನೈಟೆಡ್ ಸ್ಟೇಟ್ಸ್ (10,312), ಈಜಿಪ್ಟ್ (9,455), ಬಾಂಗ್ಲಾದೇಶ (9,236) ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (8,640)  ದಲ್ಲಿ ಜನಿಸಲಿವೆ.

ಈ ಮಕ್ಕಳ ಸರಾಸರಿ ವಯಸ್ಸು  84  ವರ್ಷ ಎಂಬುದನ್ನು ಯುನಿಸೆಫ್ ತಿಳಿಸಿದೆ. ಈ ಮಕ್ಕಳ ಆರೋಗ್ಯ ಕಾಪಾಡುವುದು ಸಮಾಜದ ಹೊಣೆಗಾರಿಕೆ ಎಂದು ಹೇಳಲು ಮರೆತಿಲ್ಲ.