* ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸತತ ಐದನೇ ದಿನ ಮುಂದುವರಿಕೆ* ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ವಿಶ್ವದ ಎಲ್ಲಾ ದೇಶಗಳ ವಿರೋಧ* ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹುಡುಗಿಯ ಜೊತೆ ನೃತ್ಯ ಮಾಡುತ್ತಿರುವ ಝೆಲೆನ್ಸ್ಕಿ

ಮಾಸ್ಕೋ(ಫೆ.28): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸೋಮವಾರ ಸತತ ಐದನೇ ದಿನವೂ ಮುಂದುವರಿದಿದೆ. ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಎರಡನೇ ದೊಡ್ಡ ನಗರ ಖಾರ್ಕಿವ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವೆ ಭೀಕರ ಕಾಳಗ ಮುಂದುವರಿದಿದೆ. ಏತನ್ಮಧ್ಯೆ, ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ವಿಶ್ವದ ಎಲ್ಲಾ ದೇಶಗಳು ವಿರೋಧಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಷಯಗಳು ವೈರಲ್ ಆಗುತ್ತಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಮೇಲೆ ನಡೆಯುತ್ತಿರುವ ರಷ್ಯಾದ ಆಕ್ರಮಣದ ಮಧ್ಯೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಏತನ್ಮಧ್ಯೆ, ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಅವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹುಡುಗಿಯ ಜೊತೆ ನೃತ್ಯ ಮಾಡುತ್ತಿರುವ ದೃಶ್ಯಗಳಿವೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ 2006 ರ ವರ್ಷದ್ದು, ಝೆಲೆನ್ಸ್ಕಿ ಟಿವಿ ಜಗತ್ತಿನಲ್ಲಿ ಬಹಳ ಜನಪ್ರಿಯರಾಗಿದ್ದರು. ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ನೆಟ್ಟಿಗರು "ಆದ್ದರಿಂದ, ಸ್ಪಷ್ಟವಾಗಿ ಝೆಲೆನ್ಸ್ಕಿ 2006 ರಲ್ಲಿ ಡ್ಯಾನ್ಸಿಂಗ್ ವಿಥ್ ದಿ ಸ್ಟಾರ್ಸ್‌ನ ಉಕ್ರೇನಿಯನ್ ಆವೃತ್ತಿಯನ್ನು ಗೆದ್ದರು ಮತ್ತು ಟೇಪ್ ನೀವು ಊಹಿಸಿದ್ದಕ್ಕಿಂತ ಉತ್ತಮವಾಗಿದೆ" ಎಂದಿದ್ದಾರೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ ಎಂಬುವುದು ಉಲ್ಲೇಖನೀಯ. ಇವರ ವಿಡಿಯೋ ಈಗ ವೇಗವಾಗಿ ಶೇರ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಜೋಡಿಯಾಗಿದ್ದ ಒಲೆನಾ ಶಾಪ್ಟೆಂಕೊ ಅವರೊಂದಿಗೆ ಪ್ರದರ್ಶನದಲ್ಲಿ ತನ್ನ ನೃತ್ಯದಿಂದ ಎಲ್ಲರನ್ನೂ ಮೆಚ್ಚಿಸುವುದನ್ನು ಕಾಣಬಹುದು. ಇಷ್ಟು ಮಾತ್ರವಲ್ಲದೆ, ಮೊದಲ ಸೀಸನ್‌ನಲ್ಲಿ ಅವರನ್ನು ಕಾರ್ಯಕ್ರಮದ ವಿಜೇತರೆಂದು ಘೋಷಿಸಲಾಯಿತು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಈ ವೀಡಿಯೊ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಬಗ್ಗೆ ಜನ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ "ನಾನು ಪ್ರಾಮಾಣಿಕವಾಗಿರುತ್ತೇನೆ ಮತ್ತು ಹೆಚ್ಚಿನ ಮಹಿಳೆಯರಿಗೆ ಝೆಲೆನ್ಸ್ಕಿಯ ಮೇಲೆ ಮೋಹವಿದೆ ಎಂದು ನಾನು ಭಾವಿಸುತ್ತೇನೆ" ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು ಬರೆದರು "ಡ್ಯೂಡ್ ಅವರು ಲೆಜೆಂಡ್" ಎಂದಿದ್ದಾರೆ.

ಫೆಬ್ರವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಕ್ರೇನ್ ಉದ್ವಿಗ್ನ ಪರಿಸ್ಥಿತಿಯಲ್ಲಿದೆ ಎಂಬುವುದು ಉಲ್ಲೇಖನೀಯ. ಈ ಯುದ್ಧದಿಂದಾಗಿ ಈಗ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾಗಿದೆ. ಆದಾಗ್ಯೂ, ಸೋಮವಾರ ಉಕ್ರೇನ್ ಮತ್ತು ರಷ್ಯಾದ ನಿಯೋಗಗಳು ಬೆಲಾರಸ್ ಮತ್ತು ಉಕ್ರೇನ್ ಅನ್ನು ಸಂಪರ್ಕಿಸುವ ಗಡಿಯಲ್ಲಿ ಮಾತುಕತೆ ನಡೆಸಲಿವೆ.