ಕರಾಚಿ(ಏ.26): ಕೊರೋನಾ ವೈರಸ್ ಕುರಿತು ಸರ್ಕಾರದ ಜೊತೆಗೆ ಧರ್ಮಗುರುಗಳು, ಮೌಲ್ವಿಗಳು ಕೈಜೋಡಿಸಿದರೆ ಇಷ್ಟು ಕಷ್ಟವಾಗುತ್ತಿರಲಿಲ್ಲ. ಇದೀಗ ಪಾಕಿಸ್ತಾನ ಮೌಲ್ವಿ ತಾರಿಕ್ ಜಮೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೊರೋನಾ ವೈರಸ್‌ಗೆ ವಿಶ್ವದಲ್ಲಿ ಹೆಚ್ಚುತ್ತಿರುವ ಅಶ್ಲೀಲತೆ ಹಾಗೂ ನಗ್ನತೆ ಕಾರಣ ಎಂದಿದ್ದಾರೆ. ಅಶ್ಲೀಲತೆ, ನಗ್ನತೆ ಹೆಚ್ಚಾದ ಕಾರಣ ಅಲ್ಲಾ ಕೋಪಗೊಂಡಿದ್ದಾನೆ. ಹೀಗಾಗಿ ಕೊರೋನಾ ಶಿಕ್ಷೆ ನೀಡಿದ್ದಾನೆ ಎಂದು ಮೌಲ್ವಿ ಹೇಳಿದ್ದಾರೆ.

ಕಾಲನ್ನು ಮುಚ್ಚಿ, ಇಲ್ದಿದ್ರೆ ಕೊರೋನಾ ಕೆಳಗಿಂದ ಅಟ್ಯಾಕ್ ಮಾಡುತ್ತೆ: ಪಾಕ್ ಸಚಿವೆ

ಪಾಕ್ ಪ್ರಧಾನಿ ಇಮ್ರಾನ್ ಖಾನ್, ದೇಶ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ದೇಣಿಗೆ ಮೂಲಕ ನೆರವಾಗಬೇಕು ಎಂದು ಪಾಕಿಸ್ತಾನ ಉದ್ದೇಶಿಸಿ ಮಾತನಾಡಿದ್ದರು. ಇಮ್ರಾನ್ ಖಾನ್ ಹೇಳಿಕೆ ಕುರಿತು ಖಾಸಗಿ ಮಾಧ್ಯಮ ಚರ್ಚಾಕೂಟ ಏರ್ಪಡಿಸಿತ್ತು. ಈ ಚರ್ಚೆಯಲ್ಲಿ ಪಾಲ್ಗೊಂಡ ಮೌಲ್ವಿ ಖಾರಿಕ್ ಜಮೀಲ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ತುಂಡುಗೆಯಲ್ಲಿ ನೃತ್ಯ, ಅಶ್ಲೀಲತೆಗೆ ಅಲ್ಲಾ ಸಹನೆ ಮೀರಿ ಹೋಗಿದೆ. ಹೀಗಾಗಿ ಕೊರೋನಾ ವಕ್ಕರಿಸಿದೆ ಎಂದಿದ್ದಾರೆ. ಪಾಕಿಸ್ತಾನ ಕಾನೂನು ಹಾಗೂ ನ್ಯಾಯ ಇಲಾಖೆ ತಾರಿಕ್ ಹೇಳಿಕೆಯನ್ನು ಖಂಡಿಸಿತು. ಮಹಿಳೆಯರ ಟಾರ್ಗೆಟ್ ಮಾಡುವುದು ಸರಿಯಲ್ಲ. ಇಷ್ಟೇ ಅಲ್ಲ ಕೊರೋನಾ ಸೋಂಕು ಹರಡುವಿಕೆಗೂ ಮಹಿಳೆಯರ ಡ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ಚೀನಾ ಹಾದಿಯಲ್ಲಿ ಪಾಕ್: ಕರಾಚಿಯಲ್ಲೇ 3 ಸಾವಿರಕ್ಕೂ ಅಧಿಕ ಶವ!

ತಾರಿಕ್ ಜಮೀಲ್ ಹೇಳಿಕೆಯನ್ನು ಪಾಕಿಸ್ತಾದ ಬಹುತೇಕರು ಬೆಂಬಲಿಸಿದ್ದರು. ಆದರೆ ಕೆಲ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಮಂತ್ರಿಗಳೂ ಅಸಂಬದ್ದ ಹೇಳಿಕೆ ಎಂದು ಟ್ವಿಟರ್ ಮೂಲಕ ಪೋಸ್ಟ್ ಮಾಡಿದೆ. ಮೌಲ್ವಿ ಹೇಳಿಕೆ ಅಸಬಂದ್ದವಾಗಿದೆ. ಕೊರೋನಾ ಸೋಂಕು ಹರಡುವಿಕೆ ದೇಶದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿಗೆ ಮೌಲ್ವಿ  ಹೇಳಿದ ಯಾವ ಕಾರಣವೂ ಅಲ್ಲ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ ಹೇಳಿದೆ.