ಪ್ಯೋಂಗ್ಯಾಂಗ್‌  (ಫೆ. 15): ಕೊರೋನಾ ವೈರಸ್‌ ಮುನ್ನೆಚ್ಚರಿಕಾ ಕ್ರಮವಾಗಿ ಯಾರೂ ಶಂಕಿತರು ಮನೆಯಿಂದ ಹೊರಗೆ ಬರಬಾರದು ಎನ್ನುವ ಆಜ್ಞೆ ಉಲ್ಲಂಘಿಸಿ ಹೊರ ಬಂದ ಶಂಕಿತನೋರ್ವನನ್ನು ಉತ್ತರ ಕೊರಿಯಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!

ಆ ಮೂಲಕ ಸರ್ವಾಧಿಕಾರಿ ಕಿಮ್‌ ಜೋಂಗ್‌ ದೇಶದಲ್ಲಿ ಕೊರೋನಾಗೆ ಮೊದಲ ಬಲಿ ಆದಂತಾಗಿದೆ. ಇತ್ತೀಚೆಗೆ ಚೀನಾದಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿರಬಹುದೆಂಬ ಶಂಕೆಯಿಂದ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು.

ಆತ ಸ್ನಾನಕ್ಕಾಗಿ ಹೊರ ಬಂದಿದ್ದು, ತಕ್ಷಣವೇ ಆತನನ್ನು ಬಂಧಿಸಿ ಗುಂಡಿಕ್ಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಉತ್ತರ ಕೊರಿಯಾದಲ್ಲಿ ಈವರೆಗೆ ಯಾರಿಗೂ ಕೊರೋನಾ ಅಂಟದಿದ್ದರೂ, ಕಿಮ್‌ ಜೋಂಗ್‌ ದೇಶಾದ್ಯಂತ ಸೇನಾ ಕಾನೂನು ಹೇರಿದ್ದಾರೆ.