ರೋಮ್ (ಮಾ.16] : ಮಾರಕ ಕೊರೋನಾ ವೈರಸ್‌ನಿಂದ ಸಾವು ಸಂಭವಿಸುವುದಿಲ್ಲ ಎಂದು ಹೇಳುವವರಿಗೆ ಶಾಕಿಂಗ್ ನ್ಯೂಸ್. ಚೀನಾ ನಂತರ ಕೊರೋನಾ ವೈರಸ್ ಅತಿ ಹೆಚ್ಚು ತಾಂಡವವಾಡುತ್ತಿರುವ ಇಟಲಿಯಲ್ಲಿ ಭಾನುವಾರ ಒಂದೇ ದಿನ ಬರೋಬ್ಬರಿ 368  ಜನ  ಬಲಿಯಾಗಿದ್ದಾರೆ. 
 
80 ವರ್ಷ ದಾಟಿದವರಿಗೆ ಚಿಕಿತ್ಸೆ ಇಲ್ಲ : ಕೊರೋನಾ ವೈರಸ್ ನಿಂದ ತತ್ತರಿಸಿರುವ ಇಟಲಿ, ಸೋಂಕಿತರಿಗೆ ಚಿಕಿತ್ಸೆ ನೀಡಲೂ ಒದ್ದಾಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 80 ವರ್ಷ ದಾಟಿರುವ ಕೊರೋನಾ ಪೀಡಿತರಿಗೆ ತುರ್ತು ನಿಗಾಘಟಕದಲ್ಲಿ ಅವಕಾಶ ನಿರಾಕರಿಸುತ್ತಿದೆ.

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ.

ಇಟಲಿಯ ಟ್ಯೂರಿನ್ ಬಿಕ್ಕಟ್ಟು ನಿರ್ವಹಣಾ ಘಟಕ ಸಿದ್ಧಪಡಿಸಿರುವ ವರದಿಯಲ್ಲಿ ಸ್ಫೋಟಕ ಮಾಹಿತಿ ಇದೆ.