ಈ ದೇಶದಲ್ಲಿ 200 ದಿನಗಳಿಂದ ಕೊರೋನಾ ಸೋಂಕಿಲ್ಲ
ಇಡೀ ವಿಶ್ವವೇ ಕೊರೋನಾ ಎಂಬ ಮಾಹಾಮಾರಿಗೆ ತತ್ತರಿಸಿ ಹೋಗಿದೆ. ಏನು ಮಾಡುವುದು ತಿಳಿಯದೇ ಮತ್ತೆ ಲಾಕ್ಡೌನ್ ಮೊರೆ ಹೋಗುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿಲ್ಲ. ಆದರೆ, ಈ ದ್ವೀಪ ರಾಷ್ಟ್ರದಲ್ಲಿ ಕಳೆದ 200 ದಿನಗಳಿಂದ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ಅಷ್ಟಕ್ಕೂ ಅಲ್ಲಿ ಮಾಡಿದ್ದೇನು?
ತೈವಾನ್ (ಅ.31): ಮಾರ್ಚ್-ಏಪ್ರಿಲ್‌ನಲ್ಲಿ ಕೊರೋನಾ ರಣಕೇಕೆಯಿಂದ ನಲುಗಿ ಹೋಗಿ, ಬಳಿಕ ಚೇತರಿಸಿಕೊಂಡಿದ್ದ ಯುರೋಪ್ ಇದೀಗ ಮತ್ತೆ ಕೊರೋನಾ ಹಾಟ್ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸಾವಿನ ಸಂಖ್ಯೆಯೂ ವಿಶ್ವವನ್ನು ಚಿಂತೆಗೀಡು ಮಾಡಿದೆ. ಒಟ್ಟಿನಲ್ಲಿ ಇಡೀ ವಿಶ್ವವೇ ಕೊರೋನಾ ವೈರಸ್ ಸೋಂಕಿನ 2 ಹಾಗೂ 3ನೇ ಅಲೆಯಿಂದ ತತ್ತರಿಸಿದೆ. ಆದರೆ, ಆಸ್ಟ್ರೇಲಿಯಾದಷ್ಟೇ ಜನಸಂಖ್ಯೆ ಹೊಂದಿರುವ ತೈವಾನ್‌ನಲ್ಲಿ ಮಾತ್ರ ಕಳೆದ 200 ದಿನಗಳಿಂದ ಒಂದೇ ಒಂದು ಸೋಂಕೂ ದಾಖಲಾಗಿಲ್ಲ!
ಹಾಗಂತ ಇಲ್ಲಿಯ ಜನರು ಮೈ ಮರೆತಿಲ್ಲ. ಅಪ್ಪಿತಪ್ಪಿಯೂ ಮಾಸ್ಕ್ ತಪ್ಪಿಸೋಲ್ಲ. ಮೊದ ಮೊದಲು ಮಾಸ್ಕ್ ಇರಲಿಲ್ಲ ಈ ರಾಷ್ಟ್ರದಲ್ಲಿ. ನಂತರ ತಾನೇ ಉತ್ಪಾದನೆ ಆರಂಭಿಸಿ, ಉತ್ತಮ ಕ್ವಾಲಿಟಿಯ ಮಾಸ್ಕ್ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸಾಮಾಜಿಕ ಅಂತರದ ಅರಿವು ಪ್ರತಿಯೊಬ್ಬರಿಗೂ ಇದೆ. ತುಸು ಜ್ವರ, ಶೀತದ ಲಕ್ಷಣವಿದ್ದರೂ ಕ್ವಾರಂಟೈನ್ ಕಡ್ಡಾಯ. ಅಪ್ಪಿ ತಪ್ಪಿ ನಿಯಮ ಉಲ್ಲಂಘನೆಯಾಯಿತೋ, ಭಾರಿ ದಂಡ ತೆತ್ತಬೇಕಾಗುತ್ತದೆ. 21 ದಶಲಕ್ಷ ಜನಸಂಖ್ಯೆ ಇರುವ ಈ ರಾಷ್ಟ್ರದಲ್ಲಿ ಮೊದಲು 523 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಏಳು ಮಂದಿ ಅಸುನೀಗಿದ್ದರು.
ಅಷ್ಟಕ್ಕೂ ತೈವಾನ್ ಮಾಡಿದ್ದೇನು?
ಕೊರೋನಾ ಸೋಂಕು ಹರಡುತ್ತಿದೆ ಎನ್ನುವಾಗಲೇ ಈ ದ್ವೀಪ ರಾಷ್ಟ್ರ ತನ್ನ ಗಡಿಯನ್ನು ಮುಚ್ಚಿ ಬಿಟ್ಟಿತ್ತು. ಈ ಹಿಂದೆ ಕಾಡಿದ ಸಾರ್ಸ್‌ನಿಂದ ದೇಶ ಉತ್ತಮ ಪಾಠ ಕಲಿತಿತ್ತು. ಆಗ ಬಹಳಷ್ಟು ದೇಶವಾಸಿಗಳನ್ನು ಕಳೆದುಕೊಂಡಿತ್ತು. ಈ ಸಾರಿ ಹಾಗಾಗದಂತೆ ಮೊದಲೇ ಜಾಗೃತವಾಯಿತು. ಸೋಂಕಿತರನ್ನು ಪತ್ತೆ ಹಚ್ಚೆ ಕ್ವಾರಂಟೈನ್ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ಸಂಪರ್ಕಿತರನ್ನು ಟ್ರೇಸ್ ಮಾಡಿ, ಅಗತ್ಯ ಕ್ರಮ ಕೈಗೊಂಡಿತ್ತು. ಸಂಪರ್ಕಿತರನ್ನು ಸೂಕ್ತ ರೀತಿಯಲ್ಲಿ ಐಸೋಲೇಟ್ ಮಾಡಿ, ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿತು. ಕೊರೋನಾ ನೆಗಟಿವ್ ಬಂದರೂ, ಸಂಪರ್ಕಿತರ ಮೇಲೆ ಸದಾ ನಿಗಾ ಇಟ್ಟಿತ್ತು.
ಮೂರನೇ ಹಂತದ ಲಸಿಕೆ ಪರೀಕ್ಷೆಗೆ ಬ್ರೇಕ್
ಇಷ್ಟು ದಿನವಾದರೂ ಜನರು ಇನ್ನೂ ಕೊರೋನಾ ನಿಮಯಗಳನ್ನು ಕಠಿಣವಾಗಿ ಪಾಲಿಸುತ್ತಾರೆ. ಮಾಸ್ಕ್ ಇಲ್ಲದೇ ಹೊರ ಹೋಗಲ್ಲ. ನಾವು ಕೊರೋನಾ ಗೆದ್ದಾಗಿದೆ ಎಂದು ದೇಶ ಬೀಗುತ್ತಿಲ್ಲ. ಮಾಸ್ಕ್ ಕಡ್ಡಾಯ. ಸಾಮಾಜಿಕ ಅಂತರ ಕಾಪಾಡಲೇ ಬೇಕು. ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಸಿಕ್ಕಾಪಟ್ಟೆ ದಂಡ ವಿಧಿಸಲಾಗುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಾರ್ವಜನಿಕರು ಹೆಚ್ಚು ಜಾಗೃತರಾಗಿದ್ದಾರೆ. ಅದಕ್ಕೆ ಏಪ್ರಿಲ್ 12ರ ನಂತರ ಈ ದೇಶದಲ್ಲಿ ಕೊರೋನಾ ಪ್ರಕರಣಗಳೇ ಪತ್ತೆಯಾಗಿಲ್ಲ.
ಸುಧಾರಿಸಿದ ಆರ್ಥಿಕ ಪರಿಸ್ಥಿತಿ:
ಹಾಗಂಥ ಈ ದೇಶ ಮೈ ಮರೆತಿಲ್ಲ. ಅಮೆರಿಕ, ಇಂಡೋನೇಷ್ಯಾ ಹಾಗೂ ಫಿಲಿಪ್ಪೈನ್ಸ್‌ನಿಂದ ಬಂದ ಮೂವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಕಳೆದ ಎರಡು ವಾರಗಳಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿವೆ. ಅವರೆಡೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ದೇಶ ಹಿಂದೆ ಬಿದ್ದಿಲ್ಲ.
ಕೊರೋನಾ ಸೋಂಕಿತ ಸಚಿವರ ಸ್ಥಿತಿ ಗಂಭೀರ
ಒಟ್ಟಿನಲ್ಲಿ ತೈವಾನ್‌ನಲ್ಲಿ ಕೊರೋನಾ ಮಹಾಮಾರಿ ಬೇರೆ ದೇಶಗಳಂತೆ ಸಮುದಾಯಕ್ಕೆ ಹರಡಲೇ ಇಲ್ಲ. ಅಷ್ಟರ ಮಟ್ಟಿಗೆ ದೇಶ ಎಚ್ಚರ ವಹಿಸಿತ್ತು. ವಿಶೇಷವಾಗಿ ಸಂಪರ್ಕಿತರನ್ನು ಟ್ರೇಸ್ ಮಾಡಿ, ಅಗತ್ಯ ಕ್ರಮ ಕೈಗೊಂಡಿದ್ದಕ್ಕೆ ಕೊರೋನಾ ತಡೆಯಲು ದೇಶಕ್ಕೆ ಸಾಧ್ಯವಾಗಿದ್ದು. ಅದಕ್ಕೆ ಇಂಥ ಕಷ್ಟ ಕಾಲದಲ್ಲಿಯೂ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡ ಕೆಲವೇ ಕೆಲವು ರಾಷ್ಟ್ರಗಳಲ್ಲಿ ತೈವಾನ್ ಸಹ ಒಂದು.
ಒಟ್ಟಿನಲ್ಲಿ ಜನ ಜಾಗೃತಿ ಮುಖ್ಯ. ಅವರು ಎಲ್ಲೀವರೆಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಿಲ್ಲವೇ ಅಲ್ಲೀವರೆಗೂ ಈ ಸೋಂಕನ್ನು ತಡೆಗಟ್ಟುವುದು ಸಾಧ್ಯವೇ ಇಲ್ಲ.
"