ಲಂಡನ್(ಆ. 12)  ಇನ್ನು ಮುಂದೆ  ಪಾಕಿಸ್ತಾನಕ್ಕೆ  ಸಾಲ ಕೊಡಲ್ಲ ತೈಲ ಪೂರೈಕೆ ಮಾಡಲ್ಲ ಎಂದು ಸೌದಿ ಅರೇಬಿಯಾ  ಕಡ್ಡಿ ತುಂಡು ಮಾಡಿದಂತೆ ಹೇಳಿದೆ.

ಮಿಡ್ಲ್ ಈಸ್ಟ್ ಮಾನಿಟರ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ದಶಕಗಳ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹ ಸಂಬಂಧ  ಅಂತ್ಯವಾಗಿದೆ. 

2018ರ ನವೆಂಬರ್ ನಲ್ಲಿ ಸೌದಿ ಅರೇಬಿಯಾ ಘೋಷಣೆ ಮಾಡಿದ್ದ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ನ ಭಾಗದಲ್ಲಿ ಸಾಲವು ಇತ್ತು. ಅದರಲ್ಲಿ 3 ಬಿಲಿಯನ್ ಡಾಲರ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್  ಡಾಲರ್ ಮೊತ್ತದ ತೈಲ ನೀಡುವ ಒಪ್ಪಂದ ಎರಡು ರಾಷ್ಟ್ರಗಳು ಮಾಡಿಕೊಂಡಿದ್ದವು. 

ಕೆಲಸವಿಲ್ಲದ ಬ್ರಿಟನ್ ಸಂಸದೆ ಪತ್ರ ಬರೆದು 'ಭಾರತ ಆಕ್ರಮಿತ ಕಾಶ್ಮೀರ' ಎಂದ್ಲು

ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಈಗ ಪಾಕಿಸ್ತಾನಕ್ಕೆ ತಾನು ಹಣದ ಸಾಲ ಮತ್ತು ಇಂಧನ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಘೋಷಣೆ ಮಾಡಿದೆ. 

ಕಾಶ್ಮೀರ ವಿಚಾರದಲ್ಲಿ ಸೌದಿ ಅರೇಬಿಯಾ ಏನನ್ನು ಮಾತನಾಡುತ್ತಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿದ್ದೇ ಈ ಒಪ್ಪಂದ ಮುರಿದು ಬೀಳಲು ಕಾರಣವಾಗಿದೆ.  ಸೌದಿ ಪಾರಮ್ಯ ಇರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (OIC) ಕಾಶ್ಮೀರ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಿಲ್ಲ.  ಕಾಶ್ಮೀರ ವಿಚಾರವಾಗಿಯೇ ಪ್ರತ್ಯೇಕ ಸೆಷನ್ ಮಾಡದಿದ್ದಲ್ಲಿ OICಯನ್ನೇ ವಿಭಜಿಸುವುದಾಗಿ ಪಾಕಿಸ್ತಾನದ ವಿದೇಶಾಂಗ  ಸಚಿವ ಶಾ ಮಹ್ಮೂದ್ ಖುರೇಷಿ ಕಿಡಿಕಾರಿದ್ದು ಈಗ ಪಾಕ್‌ ಗೆ ದೊಡ್ಡ ಮುಖಭಂಗವಾಗುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ.

ಆದರೆ ಇನ್ನೊಂದು ಕಡೆ   ಭಾರತದೊಂಗಿನ ಸ್ನೇಹ ಕಾಪಾಡಿಕೊಂಡಿರುವ ಸೌದಿ ಅರೇಬಿಯಾವು ಕಾಶ್ಮೀರ ವಿಚಾರಕ್ಕೆ ಪ್ರತ್ಯೇಕ ಚರ್ಚೆ ಆಯೋಜಿಸುವುದಕ್ಕೆ ಸಾಧ್ಯವಿಲ್ಲ ಎಂದಿತ್ತು. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಮಾಧ್ಯಮಗಳೊಂದಿಗೆ ಇದೇ ವಿಚಾರ ಮಾತನಾಡಿದ್ದರು.