ಇಸ್ಲಾಮಾಬಾದ್(ಡಿ.24): ಕಾಶ್ಮೀರ ವಿಷಯದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರ್’ ಬಾದ್’ನ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಬಜ್ವಾ, ಪಾಕ್ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ಮತ್ತೆ ನಮ್ಮ ಮೇಲೆ ದಾಳಿ ಮಾಡಬಹುದು: ವಿಶ್ವಸಂಸ್ಥೆಗೆ ಪಾಕ್‌

ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ. ಶಾಂತಿಗಾಗಿನ ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು ಎಂದು ಬಜ್ವಾ ಭಾರತಕ್ಕೆ ಎಚ್ಚರಿಕೆ ನೀಡಿದರು.

ಕಾಶ್ಮೀರ ಗಡಿಗೆ ಇಮ್ರಾನ್‌, ಪಾಕ್‌ ಯುದ್ಧ ಸಿದ್ಧತೆ?

ನಮ್ಮ ತಾಯ್ನಾಡಿನ ರಕ್ಷಣೆಗಾಗಿ ಯಾವುದೇ  ಆಕ್ರಮಣವನ್ನು ತಡೆಯಲು ನಾವು ಸಮರ್ಥರಾಗಿದ್ದೇವೆ ಎಂದು ಇದೇ ವೇಳೆ ಬಜ್ವಾ ಸ್ಪಷ್ಟಪಡಿಸಿದರು. 

ಗುಂಡು, ಉಸಿರಿರುವವರೆಗೂ ಕಾಶ್ಮೀರಕ್ಕಾಗಿ ಹೋರಾಟ: ಪಾಕ್ ಸೇನಾ ಮುಖ್ಯಸ್ಥ!