ವಾಷಿಂಗ್ಟನ್‌ (ಏ. 12):  ವಿಶ್ವದಲ್ಲೇ ಸುಸಜ್ಜಿತ ಆರೋಗ್ಯ ಸೇವೆ ಹೊಂದಿರುವ ಅಮೆರಿಕ ದೇಶ ಮಾರಕ ಕೊರೋನಾ ವೈರಸ್‌ನಿಂದ ತೀವ್ರವಾಗಿ ತತ್ತರಿಸಿದೆ. ಶುಕ್ರವಾರ ಒಂದೇ ದಿನ ಅಮೆರಿಕದಲ್ಲಿ ಸಾರ್ವಕಾಲಿಕ ದಾಖಲೆಯ 2100 ಮಂದಿ, ಶನಿವಾರ 1000 ಮಂದಿ ವೈರಾಣುವಿಗೆ ಬಲಿಯಾಗಿದ್ದಾರೆ.

ಈ ಸಂಖ್ಯೆಗಳಿಂದಾಗಿ ಈವರೆಗೆ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಇಟಲಿಯನ್ನು ಅಮೆರಿಕ ಶನಿವಾರ ಹಿಂದಿಕ್ಕಿ, ಪ್ರಥಮ ಸ್ಥಾನಕ್ಕೇರಿದೆ. ಅಮೆರಿಕದಲ್ಲಿನ ಒಟ್ಟು ಸಾವಿನ ಸಂಖ್ಯೆ 20 ಸಾವಿರದ ಗಡಿ ಸನಿಹಕ್ಕೆ ತಲುಪಿದೆ.

ಮತ್ತೊಂದೆಡೆ, ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೂಡ 5 ಲಕ್ಷ ಗಡಿ ದಾಟಿದೆ. ವಿಶ್ವದಲ್ಲೇ ಈ ಸಂಖ್ಯೆಯೂ ಅಧಿಕ. ಹೀಗಾಗಿ ಕೊರೋನಾ ವಿಷಯದಲ್ಲೂ ಅಮೆರಿಕ ವಿಶ್ವಕ್ಕೆ ‘ದೊಡ್ಡಣ್ಣ’ ಆಗಿಬಿಟ್ಟಿದೆ.

ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!

ಏ.7ರಂದು ಅಮೆರಿಕದಲ್ಲಿ ಒಂದೇ ದಿನ 1939 ಮಂದಿ ಸಾವಿಗೀಡಾಗಿದ್ದು ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ 8.30ಕ್ಕೆ (ಅಮೆರಿಕ ಕಾಲಮಾನ) ಕೊನೆಗೊಂಡ 24 ಗಂಟೆಯಲ್ಲಿ ಅಮೆರಿಕದಲ್ಲಿ 2,108 ಮಂದಿ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ ಶನಿವಾರ 1000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಅಮೆರಿಕದ ಸಾವಿನ ಸಂಖ್ಯೆ 19700ಕ್ಕೇರಿಕೆಯಾಗಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆ 19000ದಲ್ಲಿದೆ. ಹೀಗಾಗಿ ಇಟಲಿಯನ್ನು ಅಮೆರಿಕ ಹಿಂದಿಕ್ಕಿದೆ.

ಇಟಲಿ+ಸ್ಪೇನ್‌+ಫ್ರಾನ್ಸ್‌= ಅಮೆರಿಕ!

ಕೊರೋನಾ ಸೋಂಕಿನಲ್ಲಿ ಅಮೆರಿಕ 5 ಲಕ್ಷ ಗಡಿ ದಾಟಿದೆ. ವಿಶ್ವದಲ್ಲೇ ಕೊರೋನಾ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ದೇಶಗಳಾದ ಇಟಲಿ (1.58 ಲಕ್ಷ ಸೋಂಕು), ಸ್ಪೇನ್‌ (1.47 ಲಕ್ಷ ಸೋಂಕು), ಫ್ರಾನ್ಸ್‌ (1.12 ಲಕ್ಷ) ದೇಶಗಳಲ್ಲಿ ಒಟ್ಟು 4.17 ಲಕ್ಷ ಸೋಂಕಿತರು ಇದ್ದಾರೆ. ಆದರೆ ಅಮೆರಿಕ ಮೂರೂ ದೇಶಗಳ ಒಟ್ಟು ಸಂಖ್ಯೆಗಿಂತ ಹೆಚ್ಚು ಸೋಂಕಿತರನ್ನು ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಯೋಧ ಪುತ್ರನ ಅಂತಿಮ ದರ್ಶನಕ್ಕೆ 2600 ಕಿ.ಮೀ. ದೂರದಿಂದ ಬೆಂಗಳೂರಿಗೆ ವೃದ್ಧ ದಂಪತಿ!

ಸೋಂಕಿನಲ್ಲಿ ಇಟಲಿಯನ್ನೂ ಮೀರಿಸಿದ ನ್ಯೂಯಾರ್ಕ್!

- ಈವರೆಗೆ 7800 ಮಂದಿ ಸಾವು

ನ್ಯೂಯಾರ್ಕ್ವೊಂದರಲ್ಲೇ 1.7 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೊಂಕು ತಗುಲಿದೆ. ಅತ್ಯಧಿಕ ಸಾವು ಸಂಭವಿಸಿರುವ ಇಟಲಿ ಸೇರಿದಂತೆ ವಿಶ್ವದ ಯಾವುದೇ ದೇಶವನ್ನು ಪರಿಗಣಿಸಿದರೂ ನ್ಯೂಯಾರ್ಕ್ನಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ನ್ಯೂಯಾರ್ಕ್ನಲ್ಲಿ ಕೊರೋನಾ ಸೋಂಕಿಗೆ 7,800ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ನ್ಯೂಜೆರ್ಸಿಯಲ್ಲಿ 2000 ಮಂದಿ ಸಾವನ್ನಪ್ಪಿದ್ದು, 54,000 ಜನರಿಗೆ ಸೊಂಕು ತಗುಲಿದೆ.

ನ್ಯೂಯಾರ್ಕ್ನಲ್ಲಿ ಸೋಂಕು ಹೆಚ್ಚಳ ಏಕೆ?

- ಅಮೆರಿಕದ ಇತರ ನಗರಗಳಿಗೆ ಹೋಲಿಸಿದರೆ ನ್ಯೂಯಾರ್ಕ್ನಲ್ಲಿ ಜನಸಂದಣಿ ಮತ್ತು ವಿದೇಶಿಗರ ಸಂಖ್ಯೆ ಹೆಚ್ಚಿದೆ

- ನ್ಯೂಯಾರ್ಕ್ನಲ್ಲಿ 1 ಚದರ ಕಿ.ಮೀ. ವ್ಯಾಪ್ತಿಯಲ್ಲಿ 10000 ಮಂದಿ ವಾಸಿಸುತ್ತಿದ್ದಾರೆ. ಇದು ಕೂಡ ಸೊಂಕು ಹೆಚ್ಚಲು ಕಾರಣ

- ಜನದಟ್ಟಣೆಯ ರೈಲು ನಿಲ್ದಾಣ, ತುಂಬಿ ತುಳುಕುವ ರಸ್ತೆಗಳಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ

- ನ್ಯೂಯಾರ್ಕ್ಗೆ ಪ್ರತಿವರ್ಷ ಸುಮಾರು 6 ಕೋಟಿ ಪ್ರವಾಸಿಗರು ನ್ಯೂಯಾರ್ಕ್ಗೆ ಭೇಟಿ ನೀಡುತ್ತಾರೆ. ವಿದೇಶಿಗರಿಂದಲೂ ಸೋಂಕು ಹಬ್ಬಿದೆ

- ಮಾ.1ರಂದೇ ಮೊದಲ ಸೋಂಕು ಕಾಣಿಸಿಕೊಂಡರೂ ಲಾಕ್‌ಡೌನ್‌ ಘೋಷಣೆ ಮಾಡಿದ್ದು ಮಾ.22ರಂದು. ಇದು ಕೂಡ ವೈರಸ್‌ ಹೆಚ್ಚಳಕ್ಕೆ ಕಾರಣ

ಅಮೆರಿಕದಲ್ಲಿ 40 ಭಾರತೀಯರು ಬಲಿ

ವಾಷಿಂಗ್ಟನ್‌: ಅಮೆರಿಕವನ್ನು ಸ್ಮಶಾನ ಭೂಮಿಯನ್ನಾಗಿ ಮಾಡಿರುವ ಕೊರೋನಾ ವೈರಸ್‌ಗೆ 40 ಮಂದಿ ಭಾರತೀಯ ಮೂಲದ ಅಮೆರಿಕನ್ನರು ಕೂಡ ಪ್ರಾಣ ತೆತ್ತಿದ್ದಾರೆ. 1500ಕ್ಕೂ ಹೆಚ್ಚು ಮಂದಿಗೆ ಸೋಂಕು ತಟ್ಟಿದೆ. ಮೃತರ ಪೈಕಿ ಹೆಚ್ಚಿನವರು ಕೇರಳದವಾಗಿದ್ದು, ಅಲ್ಲಿನ 17 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಗುಜರಾತ್‌ನ 10, ಪಂಜಾಬಿನ 4, ಆಂಧ್ರಪ್ರದೇಶದ ಇಬ್ಬರು ಹಾಗೂ ಒಡಿಶಾದ ಒಬ್ಬರು ಸಾವಿಗೀಡಾಗಿದ್ದಾರೆ.

ಸತ್ತವರಲ್ಲಿ ಒಬ್ಬರು ಮಾತ್ರ 21 ವರ್ಷದವರಾಗಿದ್ದು, ಉಳಿದವರು 60 ವರ್ಷಕ್ಕೂ ಮೇಲ್ಪಟ್ಟವರು. ನ್ಯೂಜೆರ್ಸಿಯಲ್ಲಿ ಅತೀ ಹೆಚ್ಚು ಅಂದರೆ 12ಕ್ಕೂ ಅಧಿಕ ಮಂದಿ ಭಾರತೀಯ ಮೂಲದ ನಿವಾಸಿಗಳು ಸಾವನ್ನಪ್ಪಿದ್ದು, ನ್ಯೂಯಾರ್ಕ್ನಲ್ಲಿ 15, ಪೆನ್ಸಿಲ್ವೆನಿಯಾ ಹಾಗೂ ಫೆä್ಲೕರಿಡಾದಲ್ಲಿ ತಲಾ 4, ಟೆಕ್ಸಾಸ್‌ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ತಲಾ ಒಬ್ಬರು ಮರಣ ಹೊಂದಿದ್ದಾರೆ.