ಮಾನವ ಶವವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ನ್ಯೂಯಾರ್ಕ್‌ ಒಪ್ಪಿಗೆ..!

ಮಾನವ ಮಿಶ್ರಗೊಬ್ಬರಕ್ಕಾಗಿ, ಮೃತದೇಹಗಳನ್ನು ಮರುಬಳಕೆ ಮಾಡಬಹುದಾದ ಪಾತ್ರೆಗಳಲ್ಲಿ ಇರಿಸಲಾಗುತ್ತದೆ. ಅದರ ಸುತ್ತಲೂ ಒಣಹುಲ್ಲಿನ, ಆಲ್ಫಾಲ್ಫಾ ಸಸ್ಯಗಳು ಮತ್ತು ಮರದ ಚಿಪ್ಸ್ ಅನ್ನು ಇರಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಸೂಕ್ಷ್ಮಜೀವಿಗಳು ಒಂದು ತಿಂಗಳಲ್ಲಿ ಮಾನವನ ದೇಹವನ್ನು ಕೊಳೆಯುವಂತೆ ಮಾಡುತ್ತವೆ.

new york approves composting of human bodies what is it how is it done ash

ಮಾನವ ಶವವನ್ನು (Human Dead Body) ಮಿಶ್ರಗೊಬ್ಬರವನ್ನಾಗಿ (Compost Manure) ಪರಿವರ್ತಸಲು ಅಮೆರಿಕದ ನ್ಯೂಯಾರ್ಕ್ ಅನುಮತಿ (Permission) ನೀಡಿದೆ. ಈ ಮೂಲಕ, ಈ ಅನುಮತಿ ನೀಡಿದ ಅಮೆರಿಕದ (United States) 6ನೇ ರಾಜ್ಯವಾಗಿದೆ. ಇದು ಪರಿಸರ (Environment) ಪ್ರಜ್ಞೆಯ ರೂಪವಾಗಿದೆ. ಇನ್ನು, ಮಾನವನ ಶವವನ್ನು ಗೊಬ್ಬರವನ್ನಾಗಿ ಹೇಗೆ ಪರಿವರ್ತನೆ ಮಾಡಲಾಗುತ್ತದೆ ಗೊತ್ತಾ..?  ಮಾನವ ಮಿಶ್ರಗೊಬ್ಬರಕ್ಕಾಗಿ, ಮೃತದೇಹಗಳನ್ನು ಮರುಬಳಕೆ ಮಾಡಬಹುದಾದ ಪಾತ್ರೆಗಳಲ್ಲಿ (Vessel) ಇರಿಸಲಾಗುತ್ತದೆ. ಅದರ ಸುತ್ತಲೂ ಒಣಹುಲ್ಲಿನ, ಆಲ್ಫಾಲ್ಫಾ ಸಸ್ಯಗಳು ಮತ್ತು ಮರದ ಚಿಪ್ಸ್ ಅನ್ನು ಇರಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಸೂಕ್ಷ್ಮಜೀವಿಗಳು (Microbes) ಒಂದು ತಿಂಗಳಲ್ಲಿ ಮಾನವನ ದೇಹವನ್ನು ಕೊಳೆಯುವಂತೆ ಮಾಡುತ್ತವೆ.

ಇನ್ನು, ಮಿಶ್ರಗೊಬ್ಬರದ ಮೂಲಕ, ಪ್ರತಿ ಮಾನವನ ದೇಹವು ಒಂದು ಕ್ಯೂಬಿಕ್‌ ಯಾರ್ಡ್‌ನಷ್ಟು ಮಣ್ಣಿನ ಕಂಡೀಷನರ್ ಅನ್ನು ರಚಿಸಬಹುದು ಎಂದು ತಿಳಿದುಬಂದಿದೆ. ನಂತರ ಈ ವಸ್ತುವನ್ನು ಪಾತ್ರೆಯಿಂದ ತೆಗೆದುಹಾಕಲಾಗುತ್ತದೆ ಮತ್ತು ಸುಮಾರು 6 ವಾರಗಳವರೆಗೆ ಇದನ್ನು ಕ್ಯೂರ್‌ ಮಾಡಲು ಬಿಡಲಾಗುತ್ತದೆ. ಬಳಿಕ ಇದನ್ನು ತೋಟಗಳು ಮತ್ತು ಕಾಡುಗಳನ್ನು ಪೋಷಿಸಲು ಹಾಗೂ ಮರಗಳನ್ನು ನೆಡಲು ಬಳಸಬಹುದು ಎಂದೂ ತಿಳಿದುಬಂದಿದೆ.

ಇದನ್ನು ಓದಿ: Recycling Ideas : ತರಕಾರಿ ತಂದ ಪೇಪರ್ ಬ್ಯಾಗ್ ಎಸೆಯಬೇಡಿ

ಮಾನವ ಗೊಬ್ಬರವನ್ನು ಬಳಕೆ ಮಾಡುವುದರಿಂದ ಮಾಲಿನ್ಯ ಉಂಟು ಮಾಡುವ ಶವಸಂಸ್ಕಾರ ಪದ್ಧತಿಗಳಿಂದ ದೂರ ಸರಿಯುವ ಪ್ರಕ್ರಿಯೆ ಎಂದೂ ನೋಡಬಹುದು.  ಈ ಬೆಳವಣಿಗೆ ಬಗ್ಗೆ ಮಾನವ ಕಾಂಪೋಸ್ಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಶವಸಂಸ್ಕಾರ ನಡೆಯುವ ಸ್ಥಳ ರೀಕಂಪೋಸ್ ಪ್ರತಿಕ್ರಿಯೆ ನೀಡಿದ್ದು, ‘’ಸಾಂಪ್ರದಾಯಿಕ ಸಮಾಧಿಯು ಬೆಲೆಬಾಳುವ ನಗರ ಭೂಮಿಯನ್ನು ಬಳಸುತ್ತದೆ, ಮಣ್ಣನ್ನು ಕಲುಷಿತಗೊಳಿಸುತ್ತದೆ ಮತ್ತು ಕ್ಯಾಸ್ಕೆಟ್‌ಗಳು, ಹೆಡ್‌ಸ್ಟೋನ್‌ಗಳು ಮತ್ತು ಸಮಾಧಿ ಲೈನರ್‌ಗಳ ಸಂಪನ್ಮೂಲ ತೀವ್ರ ತಯಾರಿಕೆ ಮತ್ತು ಸಾಗಣೆಯ ಮೂಲಕ ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ’’ ಎಂದು ಹೇಳಿದೆ.

ಸಮಾಧಿ ಸ್ಥಳ ಈಗಾಗಲೇ ಸೀಮೀತವಾಗಿರುವ ನ್ಯೂಯಾರ್ಕ್ ನಗರದಂತಹ ಸ್ಥಳಗಳಲ್ಲಿ ಮಾನವ ಮಿಶ್ರಗೊಬ್ಬರವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸುದ್ದಿ ಸಂಸ್ಥೆ ಅಸೋಸಯೆಟೆಡ್‌ ಪ್ರೆಸ್‌ ವರದಿ ಮಾಡಿದೆ. ಕೆಲವು ನಿವಾಸಿಗಳು ಈಗಾಗಲೇ ಈ ಪ್ರಕ್ರಿಯೆಯನ್ನು ಪರಿಗಣಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Bharat ಬ್ರ್ಯಾಂಡ್‌ ಯೂರಿಯಾ ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಜೀವನದಲ್ಲಿ ಪರಿಸರ ಪ್ರಜ್ಞೆಯ ತನ್ನ ತತ್ವಕ್ಕೆ ಈ ಕಲ್ಪನೆಯು ಹೊಂದಿಕೆಯಾಗಿದೆ ಎಂದು ಅಮೆರಿಕದ ನ್ಯೂಯಾರ್ಕ್‌ ನಗರದ ಹೂಡಿಕೆದಾರರು ಹೇಳಿದ್ದಾರೆ. ಆದರೆ, ತಾನು ಮೃತಪಟ್ಟ ಬಳಿಕ ತಮ್ಮ ಅವಶೇಷಗಳನ್ನು ಏನು ಮಾಡಬೇಕೆಂದು ನಿರ್ಧರಿಸುವುದನ್ನು ತಮ್ಮ ಕುಟುಂಬಕ್ಕೆ ಬಿಡುತ್ತೇನೆ ಎಂದೂ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗೆ ಹೇಳಿದರು. ಮತ್ತೊಂದೆಡೆ, ಧಾರ್ಮಿಕ ಗುಂಪುಗಳು ಮಾನವ ಮಿಶ್ರಗೊಬ್ಬರ ಕಲ್ಪನೆಗೆ ವಿರೋಧ ವ್ಯಕ್ತಪಡಿಸಿವೆ. ಭೂಮಿಯ ಅವಶೇಷಗಳನ್ನು ಮನೆಯ ತ್ಯಾಜ್ಯದಂತೆ ಪರಿಗಣಿಸಬಾರದು ಎಂದು ನ್ಯೂಯಾರ್ಕ್ ಸ್ಟೇಟ್ ಕ್ಯಾಥೋಲಿಕ್ ಕಾನ್ಫರೆನ್ಸ್ ಹೇಳಿದೆ.

"ಆದರೆ ಮಾನವ ದೇಹಗಳು ದಿನಬಳಕೆ ತ್ಯಾಜ್ಯವಲ್ಲ, ಮತ್ತು ಈ ಪ್ರಕ್ರಿಯೆಯು ನಮ್ಮ ಭೂಮಿಯ ಅವಶೇಷಗಳ ಪೂಜ್ಯ ಚಿಕಿತ್ಸೆಯ ಮಾನದಂಡವನ್ನು ಪೂರೈಸುತ್ತದೆ ಎಂದು ನಾವು ನಂಬುವುದಿಲ್ಲ" ಎಂದು ನ್ಯೂಯಾರ್ಕ್‌ ಗವರ್ನರ್ ಕೇಥಿ ಹೋಚುಲ್‌ ಹೇಳಿದರು.

ಇದನ್ನೂ ಓದಿ: Asianet Suvarna News impact: ರೈತರ ಜೀವ ಹಿಂಡುತ್ತಿದ್ದ ಆಗ್ರೋ ಏಜೆನ್ಸಿಗಳಿಗೆ ಸ್ಟಾಪ್ ಸೇಲ್ ನೋಟಿಸ್

ವಾಷಿಂಗ್ಟನ್ 2019 ರಲ್ಲಿ ಮಾನವ ಮಿಶ್ರಗೊಬ್ಬರವನ್ನು ಅನುಮತಿಸಿದ ಮೊದಲ ಅಮೆರಿಕದ ರಾಜ್ಯವಾಗಿತ್ತು. ಕೊಲೊರಾಡೋ, ಒರೆಗಾನ್, ಕ್ಯಾಲಿಫೋರ್ನಿಯಾ ಮತ್ತು ವರ್ಮೋಂಟ್‌ ರಾಜ್ಯಗಳು ಸಹ ಮಾನವನ ಮೃತದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಈ ಪ್ರಕ್ರಿಯೆಗೆ ಒಪ್ಪಿಗೆ ನೀಡಿದವು. 

Latest Videos
Follow Us:
Download App:
  • android
  • ios