Asianet Suvarna News Asianet Suvarna News

ಗೋಗ್ರಾದಲ್ಲಿ ಚೀನಾ ಸೇನಾ ಹಿಂತೆಗೆತ : ಉಪಗ್ರಹ ಫೋಟೋ ಸಾಕ್ಷಿ

ಭಾರತದ ಪೂರ್ವ ಲಡಾಖ್‌ (Eastern Ladakh)ಗಡಿಯ ವಾಸ್ತವಿಕ ನಿಯಂತ್ರಣ ರೇಖೆ ಸಮೀಪದ ಗೋಗ್ರಾ-ಹಾಟ್‌ ಸ್ಟ್ರಿಂಗ್‌ನಿಂದ (Gogra-Hot Springs) ಚೀನಾ ತನ್ನ ಸೇನೆಯನ್ನು ಹಿಂಪಡೆದುಕೊಂಡಿದ್ದು, ಅಲ್ಲಿದ್ದ ವಿಶಾಲವಾದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿ ಸ್ಥಳವನ್ನು ತೆರವುಗೊಳಿಸಿದೆ ಎಂಬುದನ್ನು ಉಪಗ್ರಹ ಬಿಡುಗಡೆ ಮಾಡಿದ ಚಿತ್ರವು (satellite images)ಖಚಿತಪಡಿಸಿದೆ.

New satellite images confirm that Chinese soldiers have withdrawn Gogra Hot Springs in Eastern Ladakh akb
Author
First Published Sep 18, 2022, 7:10 AM IST

ನವದೆಹಲಿ: ಭಾರತದ ಪೂರ್ವ ಲಡಾಖ್‌ (Eastern Ladakh)ಗಡಿಯ ವಾಸ್ತವಿಕ ನಿಯಂತ್ರಣ ರೇಖೆ ಸಮೀಪದ ಗೋಗ್ರಾ-ಹಾಟ್‌ ಸ್ಟ್ರಿಂಗ್‌ನಿಂದ (Gogra-Hot Springs) ಚೀನಾ ತನ್ನ ಸೇನೆಯನ್ನು ಹಿಂಪಡೆದುಕೊಂಡಿದ್ದು, ಅಲ್ಲಿದ್ದ ವಿಶಾಲವಾದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿ ಸ್ಥಳವನ್ನು ತೆರವುಗೊಳಿಸಿದೆ ಎಂಬುದನ್ನು ಉಪಗ್ರಹ ಬಿಡುಗಡೆ ಮಾಡಿದ ಚಿತ್ರವು (satellite images)ಖಚಿತಪಡಿಸಿದೆ. ಮಾಧ್ಯಮವೊಂದು ಸೇನಾ ಹಿಂಗೆತಕ್ಕೂ ಮುನ್ನ ಹಾಗೂ ನಂತರದ ಉಪಗ್ರಹ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಆ.12ರ ಉಪಗ್ರಹ ಆಧಾರಿತ ಚಿತ್ರದಲ್ಲಿ ಭಾರತದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ಸೇನೆಯ ಬಹಳಷ್ಟು ದೊಡ್ಡ ಕಟ್ಟಡಗಳನ್ನು, ಸೇನಾ ನೆಲೆಗಳನ್ನು ಕಾಣಬಹುದಾಗಿದೆ. ಇದರ ಸುತ್ತಲೂ ಸೈನಿಕರು ಅಡಗಿಕೊಳ್ಳುವ ಕಂದಕಗಳೂ ಇದ್ದವು.

ಆದರೆ ಅದೇ ಸೆ.12ರ ಉಪಗ್ರಹ ಬಿಡುಗಡೆಗೊಳಿಸಿದ ಚಿತ್ರದಲ್ಲಿ ಚೀನಾ ಸೇನಾ ಕಟ್ಟಡಗಳು ಆ ಸ್ಥಳದಲ್ಲಿರುವುದು ಪತ್ತೆಯಾಗಿದೆ. ಆದರೆ ಸೆ.12ರಂದು ಬಿಡುಗಡೆ ಮಾಡಿದ ಫೋಟೋದಲ್ಲಿ ಈ ಕಟ್ಟಡಗಳು ಯಾವುದು ಕಾಣಿಸುತ್ತಿಲ್ಲ. ಕಟ್ಟಡ ಅವಶೇಷಗಳನ್ನೂ ಅಲ್ಲಿಂದ ಸಾಗಿಸಲಾಗಿದೆ. ಒಪ್ಪಂದದಂತೆ ಚೀನಾ ಸೇನೆ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದು ಕಂಡು ಬಂದಿದೆ. ಈ ಪ್ರದೇಶವನ್ನು ಬಫರ್‌ ವಲಯ ಎಂದು ಘೋಷಿಸಲಾಗಿದೆ. ಹೀಗಾಗಿ ಇಲ್ಲಿ ಎರಡೂ ದೇಶಗಳ ಸೇನೆಗಳು ಗಸ್ತು ಹೊಡೆಯುವುದನ್ನು ನಿರ್ಬಂಧಿಸಲಾಗಿದೆ ಎಂದು ಸೇನೆ ತಿಳಿಸಿದೆ. ಗೋಗ್ರಾದಿಂದ ಸೇನಾ ಹಿಂತೆಗೆತದ ಪ್ರಕ್ರಿಯೆ ಸೆ. 12ರಂದು ಪೂರ್ಣಗೊಂಡಿದ್ದು, ಭಾರತ ಹಾಗೂ ಚೀನಾ ಎರಡೂ ದೇಶಗಳು ಸೇನೆಯನ್ನು (Indian Army) ಹಿಂಪಡೆದುಕೊಂಡಿವೆ.

ಪಾಕ್‌ ಮೂಲದ ಭಾರತದ Most Wanted Terrorist ಅನ್ನು ಕಪ್ಪು ಪಟ್ಟಿಗೆ ಸೇರಿಸುವ ಮನವಿಗೆ ಚೀನಾ ಮತ್ತೆ ನಿರ್ಬಂಧ

2020ರಲ್ಲಿ ಭಾರತೀಯ ಸೇನೆಯು ಗಸ್ತು ತಿರುಗುತ್ತಿದ್ದ ಪ್ರದೇಶದ ಬಳಿ ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದ ಸೇನೆಯು ಪ್ರಮುಖ ನೆಲೆಯನ್ನು ಉರುಳಿಸಿರುವುದನ್ನು ಉಪಗ್ರಹ ಚಿತ್ರ ತೋರಿಸುತ್ತಿದೆ. ಈ ಸೇನಾ ಹಿಂತೆಗೆದುಕೊಳ್ಳುವಿಕೆಯು ಪರಸ್ಪರ ನಿರ್ಲಿಪ್ತ ಪ್ರಕ್ರಿಯೆಯ ಭಾಗವಾಗಿದೆ.ಉಪಗ್ರಹ ಚಿತ್ರಣ ತಜ್ಞರಿಂದ ಲಭ್ಯವಿರುವ ಮೊದಲು ಮತ್ತು ನಂತರದ ಚಿತ್ರಗಳು ಮ್ಯಾಕ್ಸರ್ ಚೀನೀ ಸ್ಥಾನಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತವೆ ಮತ್ತು ಒಪ್ಪಂದದ ಭಾಗವಾಗಿ ಎರಡೂ ಕಡೆಯ ಸೇನೆಗಳ ನಡುವೆ ರಚಿಸಲಾದ ಬಫರ್-ಜೋನ್ ಅಥವಾ ನೋ-ಮ್ಯಾನ್ಸ್ ಲ್ಯಾಂಡ್ ಅನ್ನು ತೋರಿಸುವುದಿಲ್ಲ. ವಿಶ್ವಾಸ-ವರ್ಧನೆಯ ಕ್ರಮವಾಗಿ ಈ ವಲಯದಲ್ಲಿ ಯಾವುದೇ ಗಸ್ತು ತಿರುಗುವಿಕೆಗೆ ಅನುಮತಿ ಇಲ್ಲ.

ಲಡಾಖ್‌ನ ಸ್ಥಳೀಯ ಕೌನ್ಸಿಲರ್‌ಗಳ (Local councillors) ಪ್ರಕಾರ,  ಒಪ್ಪಂದದ ಭಾಗವಾಗಿ ಭಾರತೀಯ ಸೇನೆಯು ಭಾರತೀಯ ಭೂಪ್ರದೇಶದೊಳಗೆ ತಮ್ಮದೇ ಆದ ಪೋಸ್ಟ್‌ಗಳನ್ನು ತೆಗೆದು ಹಾಕುವುದನ್ನು ಕೂಡ ಒಳಗೊಂಡಿತ್ತು ಎಂದು ಹೇಳಿದ್ದಾರೆ, ಆದರೆ ಅದರ ವಿವರಗಳನ್ನು ನವದೆಹಲಿಯ ಸೇನಾ ಅಧಿಕಾರಿಗಳು ಖಚಿತಪಡಿಸಿಲ್ಲ. ನಮ್ಮ ಪಡೆಗಳು ಪೆಟ್ರೋಲ್ ಪಾಯಿಂಟ್ 15 (Patrol Point) ಮಾತ್ರವಲ್ಲದೆ ಕಳೆದ 50 ವರ್ಷಗಳಿಂದ ನಾವು ಹೊಂದಿದ್ದ ಪೆಟ್ರೋಲ್ ಪಾಯಿಂಟ್ 16 ನಿಂದ ಹಿಂದೆ ಸರಿದಿವೆ ಎಂದು ಚುಶುಲ್‌ನ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಹೇಳಿದ್ದಾರೆ. ಲಡಾಖ್‌ನ ಚುಶುಲ್‌ ಪ್ರದೇಶ. ಇದೊಂದು ದೊಡ್ಡ ಹಿನ್ನಡೆಯಾಗಿತ್ತು. ನಮ್ಮ ಹುಲ್ಲುಗಾವಲು (ಈ ಪ್ರದೇಶದ ಅಲೆಮಾರಿ ಹುಲ್ಲುಗಾವಲು) ಈಗ ಬಫರ್ ವಲಯವಾಗಿ ಮಾರ್ಪಟ್ಟಿದೆ. ಇದು ಚಳಿಗಾಲದ ಮುಖ್ಯ ಹುಲ್ಲುಗಾವಲು (graziers) ಆಗಿತ್ತು. ಈಗ ಬಫರ್ ಝೋನ್ ಆಗಿದೆ ಎಂದರು.

ಶಾಂಘೈ ಸಹಕಾರ ಶೃಂಗಕ್ಕಾಗಿ ಉಜ್ಬೇಕಿಸ್ತಾನ ತೆರಳಿದ ಮೋದಿ, ಕ್ಸಿ ಜತೆ ಮಾತುಕತೆ ಇಲ್ಲ

ಈ ವರ್ಷ ಜುಲೈ 17 ರಂದು ಕಾರ್ಪ್ಸ್ ಕಮಾಂಡರ್ ಶ್ರೇಣಿಯ ಎರಡೂ ಕಡೆಯ ಸೇನಾ ಅಧಿಕಾರಿಗಳ ನಡುವಿನ 16 ನೇ ಸುತ್ತಿನ ಮಾತುಕತೆಯ ನಂತರ ಭಾರತ ಮತ್ತು ಚೀನಾದ ಸೇನೆಯ ನಡುವೆ ಈ ಸೇನಾ ಹಿಂತೆಗೆಯುವಿಕೆ ನಡೆದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಎರಡೂ ಕಡೆಯಿಂದ ಪ್ರದೇಶದಲ್ಲಿ ರಚಿಸಲಾದ ಎಲ್ಲಾ ತಾತ್ಕಾಲಿಕ ರಚನೆಗಳು ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳನ್ನು ಕಿತ್ತು ಹಾಕಲಾಗುವುದು ಮತ್ತು ಪರಸ್ಪರ ಪರಿಶೀಲಿಸಲಾಗುವುದು ಎಂದು ಒಪ್ಪಿಕೊಳ್ಳಲಾಗಿತ್ತು. 

ಗೋಗ್ರಾದಲ್ಲಿ ಪ್ರಾರಂಭವಾದ ಈ ಸೇನಾ ತೆರವು ಕಾರ್ಯಾಚರಣೆ ಅದು ಆರಂಭವಾದ ನಾಲ್ಕು ದಿನಗಳGogra-Hot Springs in Eastern Ladakh ನಂತರ ಅಂದರೆ ಸೆಪ್ಟೆಂಬರ್ 12 ರಂದು ಪೂರ್ಣಗೊಂಡಿದೆ. ಈ ಮಧ್ಯೆ, ಈ ವಿಚಾರವು, ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯಲ್ಲಿ (Shanghai Cooperation Organisation ) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಚೀನಾದ ಅಧ್ಯಕ್ಷ ಕ್ಸಿ ಕ್ಸಿನ್‌ಪಿಂಗ್ ನಡುವೆ ಮಾತುಕತೆ ನಡೆಯಬಹುದು ಎಂದು ಊಹಾಪೋಹಾಗಳೆದಿದ್ದವು. ಮೇ 5, 2020 ರಂದು ನಡೆದ ಗಾಲ್ವಾನ್ ಘರ್ಷಣೆಯ ನಂತರ ಉಭಯ ನಾಯಕರು ಇದೇ ಮೊದಲ ಬಾರಿಗೆ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ಭೇಟಿಯಾಗಿದ್ದರು. ಆದರೂ ಈ ಎರಡು ನಾಯಕರು ವೇದಿಕೆಯನ್ನು ಹಂಚಿಕೊಂಡಾಗ ಕೈಕುಲುಕಲಿಲ್ಲ ಅಥವಾ ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ಮಾತುಕತೆ ನಡೆಸಲಿಲ್ಲ.
 

Follow Us:
Download App:
  • android
  • ios