Asianet Suvarna News Asianet Suvarna News

ಚೀನಾದಿಂದ ಮತ್ತೊಂದು ಆತಂಕ, ಶಾಂಘೈನಗರದಲ್ಲಿ ಹೊಸ ಓಮಿಕ್ರಾನ್ ವೈರಸ್ ಪತ್ತೆ!

  • ಚೀನಾದಲ್ಲಿ BA.5.2.1 ಓಮಿಕ್ರಾನ್ ಉಪತಳಿ ಪತ್ತೆ
  • ಓಮಿಕ್ರಾನ್ ರೂಪಾಂತರಿ ತಳಿ ಕುರಿತು ಹೆಚ್ಚಿನ ಅಧ್ಯಯನ
  • ಮತ್ತೆ ಕಠಿಣ ನಿರ್ಬಂಧ ಜಾರಿ,  ಮತ್ತೆ ವಿಶ್ವಕ್ಕೆ ಆತಂಕ
New Omicron subvariant found in Shanghai China impose tough restrictions to curb covid ckm
Author
Bengaluru, First Published Jul 10, 2022, 6:05 PM IST

ಬಿಜಿಂಗ್(ಜು.10): ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಓಮಿಕ್ರಾನ್ ರೂಪಾಂತರಿ ತಳಿಗಳು ಪತ್ತೆಯಾಗಿದೆ. ಇದರ ನಡುವೆ ಚೀನಾದಿಂದ ಮತ್ತೊಂದು ಆತಂಕ ಎದುರಾಗಿದೆ. ಶಾಂಘೈ ನಗರದಲ್ಲಿ ಹೊಸ ಒಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಇದು ಓಮಿಕ್ರಾನ್ ರೂಪಾಂತರಿ ವೈರಸ್ಆಗಿದೆ. ನೂತನ ವೈರಸ್ BA.5.2.1 ಅಪಾಯ ಸೃಷ್ಟಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಶಾಂಘೈನಲ್ಲಿ ಹೊಸ ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ ಕಠಿಣ ನಿರ್ಬಂಧಗಳು ಮತ್ತೆ ಜಾರಿಯಾಗಿದೆ. ಕಳೆದ ಜೂನ್ ತಿಂಗಳಲ್ಲಿ ಕೋವಿಡ್ ಪ್ರಕರಣ ಏರಿಕೆಯಾದ ಬೆನ್ನಲ್ಲೇ ಹಲವು ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿತ್ತು.  ಇದೀಗ ಹೊಸ ವೈರಸ್ ಪತ್ತೆಯಿಂದ ಮತ್ತೆ ನಿರ್ಬಂಧ ಜಾರಿಯಾಗುತ್ತಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗೆ ತೀವ್ರ ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಜುಲೈ 8 ರಂದು ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಓಮಿಕ್ರಾನ ರೂಪಾಂತರಿ ವೈರಸ್ BA.5.2.1 ಪತ್ತೆಯಾಗಿದೆ.

 

ಶಾಲೆ ಶುರು, ಮುಗಿಯದ ಜ್ವರ; ಮಕ್ಕಳಲ್ಲೂ ದೀರ್ಘಾವಧಿಯ ಕೋವಿಡ್ !

ಉಗಾಂಡದಿಂದ ಚೀನಾಗೆ ಆಗಮಿಸಿದ 37 ವರ್ಷದ ಮಹಿಳೆಯಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಶಾಂಘೈನಗರದಲ್ಲಿ ಇದೀಗ ಪ್ರತಿಯೊಬ್ಬರು ಎರಡೆರಡು ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಹೊಸ ರೂಪಾಂತರಿ ತಳಿ ಅತೀ ವೇಗದಲ್ಲಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಚೀನಾದಲ್ಲಿ ಪತ್ತೆಯಾದ ಕೋವಿಡ್ ಇಡೀ ವಿಶ್ವವನ್ನೇ ಸತತ 2 ವರ್ಷ ಕಾಡಿದೆ. ಈಗಲೂ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಚೀನಾದಲ್ಲಿ ಪ್ರಬಲ ರೂಪಾಂತರಿ ತಳಿ ಪತ್ತೆಯಾಗಿರುವುದು ಮತ್ತೆ ಆತಂಕ ಎದುರಾಗಿದೆ. ಕಾರಣ ಭಾರತದಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ 18 ಸಾವಿರಗಡಿ ದಾಟಿದೆ. 

ದೇಶದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 18,840 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 43 ಸೋಂಕಿತರು ಬಲಿಯಾಗಿದ್ದಾರೆ. ಅಲ್ಲದೇ ಸಕ್ರಿಯ ಪ್ರಕರಣ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, 1.25 ಲಕ್ಷಕ್ಕೆ ತಲುಪಿದೆ. ಇದರ ಪ್ರಮಾಣ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಶೇ.0.29ರಷ್ಟಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.4.14ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.4.09ರಷ್ಟಿದೆ. ಈವರೆಗೆ ದೇಶದಲ್ಲಿ 198.65 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

 

ಮಳೆಗಾಲ ಶುರು, ಕೊರೋನಾ ಹೆಚ್ಚಳ; ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ

ಬೆಂಗಳೂರಿನಲ್ಲಿ ಶನಿವಾರ 932 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5ಕ್ಕೆ ಏರಿಕೆಯಾಗಿದೆ. 750 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 6,239 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 81 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20,553 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2505 ಮಂದಿ ಮೊದಲ ಡೋಸ್‌, 8746 ಮಂದಿ ಎರಡನೇ ಡೋಸ್‌ ಮತ್ತು 9302 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಶನಿವಾರ ನಗರದಲ್ಲಿ ಹೊಸದಾಗಿ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿಲ್ಲ. ನಗರದಲ್ಲಿ ಒಟ್ಟು 21 ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Follow Us:
Download App:
  • android
  • ios