ನವಾಜ್ ಷರೀಫ್ ಕಾರಿನ ಬಳಿ ಹೋದ ಮಹಿಳೆ ಪಾಕ್ ಮಾಜಿ ಪ್ರಧಾನಿಯನ್ನು ಭ್ರಷ್ಟ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ನವಾಜ್ ಷರೀಫ್ ಚಾಲಕ ಆಕೆಯ ಮುಖಕ್ಕೆ ಉಗಿದು, ಕಾರಿನ ಕಿಟಕಿ ಹಾಕಿಕೊಂಡು ಕಾರನ್ನು ಮುಂದೆ ಓಡಿಸಿದ್ದಾರೆ.
ಲಂಡನ್ (ಸೆಪ್ಟೆಂಬರ್ 19, 2023): ಇಂಗ್ಲೆಂಡ್ ರಾಜಧಾನಿ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನದ ಮುಂಭಾಗದ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ 73 ವರ್ಷದ ರಾಜಕಾರಣಿಯ ವಾಹನವನ್ನು ಮಹಿಳೆಯೊಬ್ಬರು ಸಮೀಪಿಸುತ್ತಿರುವುದನ್ನು ಸಹ ಈ ವಿಡಿಯೋ ತೋರಿಸುತ್ತದೆ.
ನವಾಜ್ ಷರೀಫ್ ಕಾರಿನ ಬಳಿ ಹೋದ ಮಹಿಳೆ ಪಾಕ್ ಮಾಜಿ ಪ್ರಧಾನಿಯನ್ನು ಭ್ರಷ್ಟರೇ ಎಂದು ಪ್ರಶ್ನಿಸಿದ್ದಾರೆ. "ನೀವು ತುಂಬಾ ಭ್ರಷ್ಟ ಪಾಕಿಸ್ತಾನಿ ರಾಜಕಾರಣಿ ಎಂದು ನಾನು ಕೇಳಿದ್ದೇನೆ," ಎಂದೂ ಡ್ರೈವರ್ ಕಾರಿನ ಕಿಟಕಿಯನ್ನು ತೆರೆದಾಗ ಆಕೆ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ನವಾಜ್ ಷರೀಫ್ ಚಾಲಕ ಆಕೆಯ ಮುಖದ ಮೇಲೆ ಉಗುಳಿ, ಕಾರಿನ ಕಿಟಕಿ ಹಾಕಿಕೊಂಡು ಕಾರನ್ನು ಮುಂದೆ ಓಡಿಸಿದ್ದಾರೆ.
ಇದನ್ನು ಓದಿ: 41 ಕೋಟಿ ಉಳಿತಾಯ ಮಾಡಿ 35 ವರ್ಷಕ್ಕೇ ನಿವೃತ್ತಿಯಾಗ್ತೀನಿ ಎಂದಿದ್ದ ಗೂಗಲ್ ಟೆಕ್ಕಿಗೆ ದೊಡ್ಡ ಶಾಕ್!
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಾರ್ಟಿಯ ಸದಸ್ಯೆ ಡಾ.ಫಾತಿಮಾ ಕೆ, ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿರುವ ಮಹಿಳೆ ಪತ್ರಕರ್ತೆ ಎಂದು ಅವರು ಉಲ್ಲೇಖಿಸಿದ್ದಾರೆ. ''ಪ್ರಶ್ನೆ ಕೇಳಿದ ಪತ್ರಕರ್ತನ ಮುಖದ ಮೇಲೆ ನವಾಜ್ ಷರೀಫ್ ಚಾಲಕ ಉಗುಳಿದ್ದಾನೆ! ಉದಾರವಾದಿಗಳು, ಬುದ್ಧಿಜೀವಿಗಳು ಅಥವಾ ಸ್ತ್ರೀವಾದಿಗಳು ಯಾರೂ ಇದರ ವಿರುದ್ಧ ಮಾತನಾಡುವುದಿಲ್ಲ. Sick of this selective morality!! ಅಸಹ್ಯಕರ ಎಂದು ಹೇಳಿದ್ದಾರೆ.
ಇಂಟರ್‌ನೆಟ್ ಬಳಕೆದಾರರೂ ಈ ವಿಡಿಯೋದಿಂದ ಆಕ್ರೋಶಗೊಂಡಿದ್ದು, ವಿವಿಧ ಕಾಮೆಂಟ್‌ಗಳನ್ನು ಮಾಡಿದ್ದಾರೆ. ''ಅವನು ಕೇವಲ ಭ್ರಷ್ಟನಲ್ಲ, ದೆವ್ವ ಕೂಡ ಎಂದು ಸಾಬೀತುಪಡಿಸುತ್ತಾನೆ’’ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ''ನೀವು ಪಾಕಿಸ್ತಾನದ ಭ್ರಷ್ಟ ರಾಜಕಾರಣಿ ಎಂದು ನಾನು ಕೇಳಿದ್ದೇನೆ ಎಂದು ಮಹಿಳಾ ಪತ್ರಕರ್ತೆ ಕೇಳಿದರು. ನವಾಜ್ ಷರೀಫ್ ತನ್ನ ಸಿಬ್ಬಂದಿಯನ್ನು ತೋರಿಸಿದನು ಮತ್ತು ಅವನು ಮಹಿಳೆಯ ಮುಖದ ಮೇಲೆ ಉಗುಳಿದನು. ಮತ್ತು ಅಂತಹ ಘೇಂಡಾಮೃಗವನ್ನು ಪಾಕಿಸ್ತಾನಿಗಳ ಮೇಲೆ ಹೇರಲಾಗುತ್ತಿದೆ,’’ ಎಂದು ಇನ್ನೊಬ್ಬರು ಬರೆದಿದ್ದಾರೆ.
ಇದನ್ನೂ ಓದಿ: ಮೆಕ್ಸಿಕೋದಲ್ಲಿ ಪತ್ತೆಯಾದ ಏಲಿಯೆನ್ಸ್ ಅವಶೇಷದ ನಿಜರೂಪ ಬಹಿರಂಗಪಡಿಸಿದ ಎಲಾನ್ ಮಸ್ಕ್!
ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿಯಾಗಿರುವ ನವಾಜ್ ಷರೀಫ್ ವೈದ್ಯಕೀಯ ಚಿಕಿತ್ಸೆಗಾಗಿ 4 ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ನಂತರ ನವೆಂಬರ್ 2019 ರಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.
ಮುಂಬರುವ ಚುನಾವಣೆಗಳಲ್ಲಿ ಪಕ್ಷದ ರಾಜಕೀಯ ಪ್ರಚಾರ ಮುನ್ನಡೆಸಲು ಅವರು ಅಕ್ಟೋಬರ್ 21 ರಂದು ಲಂಡನ್‌ನಿಂದ ದೇಶಕ್ಕೆ ಹಿಂತಿರುಗಲು ನಿರ್ಧರಿಸಿದ್ದಾರೆ. ಇನ್ನು, UK ಯಲ್ಲಿ ಅವರ ನಾಲ್ಕು ವರ್ಷಗಳ ಸ್ವಯಂ-ಹೇರಿದ ದೇಶಭ್ರಷ್ಟತೆಯನ್ನು ಕೊನೆಗೊಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಅಂತ ಬೀದಿಗಿಳಿದ ಪಾಕ್ ಆಕ್ರಮಿತ ಕಾಶ್ಮೀರ ನಿವಾಸಿಗಳು: ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
"ನವಾಜ್ ಷರೀಫ್ ಅಕ್ಟೋಬರ್ 21 ರಂದು ಪಾಕಿಸ್ತಾನಕ್ಕೆ ಮರಳಲಿದ್ದಾರೆ" ಎಂದು ಅವರ ಕಿರಿಯ ಸಹೋದರ ಮತ್ತು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಇದನ್ನೂ ಓದಿ: ಜಗತ್ತಿನ ನಂ. 1 ಶ್ರೀಮಂತ ರಾಜ ಇವ್ರೇ: ಈ ಅರಸನ ಸಂಪತ್ತಿನ ಎದುರು ಅಂಬಾನಿ, ಅದಾನಿ, ಎಲಾನ್ ಮಸ್ಕ್ ಲೆಕ್ಕಕ್ಕೇ ಇಲ್ಲ!
