ವಾಶಿಂಗ್ಟನ್ ಡಿಸಿ(ಜೂ.27): ಕೊರೋನಾ ವೈರಸ್ ನಿಯಂತ್ರಣ ಹಾಗೂ ನಿರ್ಮೂಲನೆ ಮಾಡಲು ಎಲ್ಲಾ ದೇಶಗಳು ಪ್ರಯತ್ನ ಪಡುತ್ತಿದೆ. ಲಸಿಕೆ ಕಂಡು ಹಿಡಿಯಲು ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಆದರೆ ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಜನರ ನಿರ್ಲಕ್ಷ್ಯ, ಅರಿವಿಲ್ಲದೆ ಮಾಡುವ ತಪ್ಪುಗಳಿಂದ ಕೊರೋನಾ ವೈರಸ್ ಹರಡುತ್ತಿದೆ. ಇದಕ್ಕಾಗಿ ಅಮೆರಿಕದ ನಾಸಾ ಜೆಪಿಎಲ್ ಹೊಸ ನೆಕ್ಲೇಸ್ ಕಂಡು ಹಿಡಿದಿದೆ. 

ನೆಕ್ಲೇಸ್ ಪೆಂಡೆಂಟ್ ಇಲ್ಲಿ ಕೊರೋನಾ ತಡೆಯಲು ಸಹಾಯ ಮಾಡಲಿದೆ. ಸಹಜವಾಗಿ ಮುಖ, ಕಿವಿ, ಕಣ್ಣು ಮುಟ್ಟುವ ಅಭ್ಯಾಸಗಳು ಎಲ್ಲರಿಗೂ ಇರುತ್ತದೆ. ಆದರೆ ಕೊರೋನಾ ವೈರಸ್ ಸಂದರ್ಭದಲ್ಲಿ ಇದ್ಯಾವುದು ಉಚಿತವಲ್ಲ. ಮಾರುಕಟ್ಟೆ, ವಸ್ತುಗಳ ಖರೀದಿ, ಪ್ರಯಾಣ ಸೇರಿದಂತೆ ಹಲವೆಡೆ ಸಂಚರಿಸುವ ನಾವು, ಗೊತ್ತಿಲ್ಲದೆ ಮುಖ, ಮೂಗು, ಕಿವಿ , ಕಣ್ಣು ಮುಟ್ಟುತ್ತೇವೆ. ಇದೀಗ ನಾಸಾ ಬಿಡುಗಡೆ ಮಾಡಿರುವ ಈ ನೆಕ್ಲೇಸ್ ಪೆಂಡೇಟ್ ಧರಿಸಿದರೆ, ಇದು ವಾರ್ನಿಂಗ್ ನೀಡಲಿದೆ.

ಕೈ ಮೇಲಿತ್ತಿ ಮುಖದತ್ತ ತಂದಾಗ ಈ ಪೆಂಡೆಂಟ್ ವೈಬ್ರೇಟ್ ಆಗಲಿದೆ. ಈ ಮೂಲಕ ವಾರ್ನಿಂಗ್ ನೀಡಲಿದೆ. ಕೈಗಳನ್ನು ಮುಖ, ಬಾಯಿ, ಕಣ್ಣು , ಕಿವಿ ಮುಟ್ಟುವುದರಿಂದ ವೈರಸ್ ಬಹುಬೇಗನೆ ದೇಹದೊಳಕ್ಕೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ನಾಸಾ ಜೆಪಿಎಲ್ ಇದೀಗ ನೂತನ ನೆಕ್ಲೇಸ್ ಪೆಂಡೆಂಟ್ ಬಿಡುಗಡೆ ಮಾಡಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"