ಮುಂಬೈ[ಡಿ.12]: ಅಮೆರಿಕದ ಪ್ರಖ್ಯಾತ ಉದ್ಯಮಿ, ವರ್ಜಿನ್‌ ಏರ್‌ಲೈನ್ಸ್‌ ಸಂಸ್ಥಾಪಕ ರಿಚರ್ಡ್‌ ಬ್ರಾನ್ಸನ್‌, ತಮಗೂ ಭಾರತದ ನಂಟಿದೆ ಎಂಬ ಅಚ್ಚರಿಯ ಅಂಶ ಬಹಿರಂಗಪಡಿಸಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ರಾನ್ಸನ್‌, ನಮ್ಮ ಅಜ್ಜಿಯ ಮುತ್ತಜ್ಜಿ ಆರಿಯಾ ತಮಿಳುನಾಡಿನ ಕುಡಲೂರು ಮೂಲದವರು. ಇದೇ ಕಾರಣಕ್ಕಾಗಿ ಮುಂಬೈ ಮತ್ತು ಲಂಡನ್‌ ನಡುವೆ ಸಂಚರಿಸುವ ತಮ್ಮ ಸಂಸ್ಥೆಯ ವಿಮಾನದಲ್ಲಿ ತಮ್ಮ ಅಜ್ಜಿಯ ಫೋಟೋ ಹಾಕಿರುವುದಾಗಿ ಬ್ರಾನ್ಸನ್‌ ತಿಳಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಯೋಜನೆಯೊಂದರ ಸಂಬಂಧ ಮಾತುಕತೆ ನಡೆಸಲು ರಿಚರ್ಡ್‌ ಬ್ರಾನ್ಸನ್‌ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯನ್ನು ಭೇಟಿಯಾಗಲಿದ್ದಾರೆ.