Asianet Suvarna News Asianet Suvarna News

ಪುರುಷ ಉದ್ಯೋಗಿಗಳಿಗೆ ಸ್ಪೂರ್ತಿ ತುಂಬಲು ಮಹಿಳಾ ಸ್ಟಾಫ್‌ಗೆ ಮೇಕಪ್‌ ಮಾಡ್ಕೊಂಡು ಬನ್ನಿ ಎಂದ ಕಂಪನಿ!

ಕಂಪನಿಯಲ್ಲಿ ಕೆಲಸ ಮಾಡುವ ಪುರುಷ ಸಹೋದ್ಯೋಗಿಗಳ ಸ್ಫೂರ್ತಿಯನ್ನು ಹೆಚ್ಚಿಸುವ ಸಲುವಾಗಿ ಕಂಪನಿಯಲ್ಲಿರುವ ಮಹಿಳಾ ಸ್ಟಾಫ್‌ಗಳು ಪ್ರತಿ ಕಚೇರಿಗೆ ಮೇಕಪ್‌ ಮಾಡಿಕೊಂಡೇ ಬರಬೇಕು ಎಂದು ವ್ಯವಸ್ಥಾಪಕ ಅಧಿಕಾರಿಯೊಬ್ಬರು ಹೇಳಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
 

motivate male colleagues Chinese company faces criticism for requesting women to wear makeup san
Author
First Published Dec 28, 2023, 11:59 PM IST

ಬೀಜಿಂಗ್‌ (ಡಿ.28): ಚೀನಾ ಮೂಲದ ಕಂಪನಿಯೊಂದರ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಕಂಪನಿಯೊಂದರ ವ್ಯವಸ್ಥಾಪಕ ಅಧಿಕಾರಿ ನೀಡಿರುವ ಸೂಚನೆ. ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಪುರುಷ ಉದ್ಯೋಗಿಗಳಿಗೆ ಕೆಲಸದ ಮೇಲೆ ಶ್ರದ್ಧೆ ಇನ್ನಷ್ಟು ಹೆಚ್ಚಾಗುವ ನಿಟ್ಟಿನಲ್ಲಿ ಕಂಪನಿಯಲ್ಲಿರುವ ಮಹಿಳಾ ಉದ್ಯೋಗಿಗಳು ಪ್ರತಿದಿನವೂ ಲೈಟ್‌ ಮೇಕಪ್‌ ಮಾಡಿಕೊಂಡು ಬರಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯ ವಿರುದ್ಧ ಈಗ ಚೀನಾದ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಚೀನಾದ  ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಕೂಡ ವರದಿ ಪ್ರಕಟಿಸಿದೆ. ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಲುವೊ ಅವರು ನವೆಂಬರ್ 30 ರಂದು ತಮ್ಮ ಕಂಪನಿಯಲ್ಲಿರವ ಐವರು ಮಹಿಳೆಯರ ತಂಡದೊಂದಿಗೆ ವೀಚಾಟ್‌ನಲ್ಲಿ ಗ್ರೂಪ್‌ ಚಾಟ್‌ ನಡೆಸಿದ್ದ ವೇಳೆ ಈ ವಿವಾದ ಉದ್ಭವವಾಗಿದೆ. ಮಾತಿನ ಸಂದರ್ಭದಲ್ಲಿ, ಲುವೋ ಮಹಿಳಾ ಸಿಬ್ಬಂದಿಗೆ ಪ್ರತಿದಿನವೂ ಕಚೇರಿಗೆ ಲೈಟ್‌ ಮೇಕಪ್‌ ಮಾಡಿಕೊಂಡು ಬರುವಂತೆ ವಿನಂತಿ ಮಾಡಿದ್ದರು. ಇದು "ನಮ್ಮ ತಂಡವನ್ನು ಪ್ರೇರೇಪಿಸುತ್ತದೆ' ಎಂದೂ ಅವರು ಹೇಳಿದ್ದರು.

ಕಂಪನಿಯಲ್ಲಿ ಕೆಲಸ ಮಾಡುವ ಯುವತಿಗೆ ಕಳಿಸಿರುವ ಸಂದೇಶದಲ್ಲಿ ಬರೆದಿರುವ ಲುವೋ, 'ಯುವತಿಯರೇ, ತಮ್ಮ ತಂಡಕ್ಕೆ ಸ್ಪೂರ್ತಿ ನೀಡುವ ಸಲುವಾಗಿ ಡಿಸೆಂಬರ್‌ನಿಂದ ನೀವು ಲೈಟ್‌ ಮೇಕಪ್‌ ಮಾಡಿಕೊಂಡು ಬನ್ನಿ. ಮಧ್ಯಾಹ್ನದ ಚಹಾ ಸಮಯದ ವೇಳೆ ಅವರು ನಿಮ್ಮನ್ನು ನೋಡಲು ಖಂಡಿತವಾಗಿ ಕುಳಿತುಕೊಳ್ಳುತ್ತಾರೆ' ಎಂದು ಬರೆದಿದ್ದಾರೆ.

ಹಾಗಿದ್ದರೂ, ಈ ಸಂದೇಶವು ಸ್ವೀಕರಿಸುವವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಲಿಲ್ಲ. ಮುಂದಿನ ಸಂದೇಶದಲ್ಲಿ, "ನೀವು ಸಂದೇಶವನ್ನು ಸ್ವೀಕರಿಸಿದಾಗ ದಯವಿಟ್ಟು ಪ್ರತ್ಯುತ್ತರ ನೀಡಿ, ಇಲ್ಲದಿದ್ದರೆ ನಿಮ್ಮ ಕಾರ್ಯಕ್ಷಮತೆಯ ಬೋನಸ್‌ಗಳನ್ನು ಕಡಿತಗೊಳಿಸಲಾಗುತ್ತದೆ" ಎಂದು ಲುವೋ ಹೇಳಿದ್ದಾರೆ. ಕಂಪನಿಯ ಸಿಬ್ಬಂದಿಯ ಸ್ನೇಹಿತನಾಗಿರುವ ವ್ಯಕ್ತಿಯೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಸಂದೇಶವನ್ನು ಹಂಚಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ. ಆ ಬಳಿಕ ವಿಚಾರ ಇನ್ನಷ್ಟು ಸುದ್ದಿಯಾಗಿದ್ದು, ಚೀನಾದ ಸ್ಥಳೀಯ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ, ಲುವೋ ತನ್ನ ಕಾರ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆ ವಿನಂತಿಯನ್ನು ತಮಾಷೆಗಾಗಿ ಮಾಡಲಾಗಿತ್ತು. ಅದಾಗಲೇ ಇದನ್ನು ತೆಗೆದುಹಾಕಲಾಗಿದೆ. ಅಂಥ ಯಾವುದೇ ವಿಚಾರವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ' ಎಂದು ತಿಳಿಸಿದ್ದಾರೆ.

ಹೆಣ್ಣು ಹೆತ್ತವಳಿಗೆ ನಡುರಸ್ತೆಯಲ್ಲೇ ಕಾಲಿನಿಂದ ಒದ್ದು ಚಿತ್ರಹಿಂಸೆ! ವಿಡಿಯೋ ವೈರಲ್

ಚೀನಾದಲ್ಲಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಲುವೋ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಲುವೋನ ಡಬಲ್‌ ಸ್ಟ್ಯಾಂಡರ್ಡ್‌ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದಾರೆ. "ತಂಡವನ್ನು ಪ್ರೇರೇಪಿಸಲು ಪುರುಷ ಸಿಬ್ಬಂದಿಗೆ ವರ್ಕ್‌ಔಟ್‌ ಮಾಡುವಂತೆ ಅವರು ಏಕೆ ಕೇಳುವುದಿಲ್ಲ?" "ನಿಜವಾಗಿಯೂ ಇದು ತಮಾಷೆಯೇ? ಅವನು ಮಾತ್ರ ನಗುತ್ತಿದ್ದಾನೆ" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹೊಟ್ಟೆಗೆ ಹಿಟ್ಟು ತಿನ್ನೋದು ಬಿಟ್ಟು, ಜಾನ್ಸನ್ಸ್ ಬೇಬಿ ಪೌಡರ್ ತಿನ್ನೋದಕ್ಕೆ 8 ಲಕ್ಷ ಖರ್ಚು ಮಾಡೋ ಮಹಿಳೆಯರು!

Latest Videos
Follow Us:
Download App:
  • android
  • ios