Asianet Suvarna News Asianet Suvarna News

ಮಗಳ ಸಾವಿಗೆ ಮರುಕಪಡದ ಅಮ್ಮ! ಅಂತ್ಯಸಂಸ್ಕಾರಕ್ಕೂ ಹೊಸ ಡ್ರೆಸ್ ಧರಿಸಿ ರೀಲ್ಸ್ ಮಾಡಿಕೊಂಡೇ ಹೋದ ತಾಯಿ

ಮಗಳ ಸಾವಿಗೆ ಕಿಂಚಿತ್ತೂ ಮರುಕಪಡದ ಮಹಿಳೆ ಚೆಂದದ ಡ್ರೆಸ್ ಧರಿಸಿ ರೆಡಿಯಾಗಿರುವ ವಿಡಿಯೋ ವೈರಲ್ ಆಗಿದೆ. ಲೈಕ್ಸ್, ಕಮೆಂಟ್‌ಗಾಗಿ ಮಗಳ ಸಾವು ಮರೆತಳಾ  ಅಮ್ಮಾ?

Mother Getting Ready For daughter Funeral mrq
Author
First Published Aug 21, 2024, 8:12 PM IST | Last Updated Aug 21, 2024, 8:12 PM IST

ತಾಯಿ ಅಂದ್ರೆ ಪ್ರೀತಿ. ತನ್ನ ಮಕ್ಕಳಕ್ಕಾಗಿ ಆಕೆ ಜೀವವನ್ನೇ ಮುಡಿಪಾಗಿಡುತ್ತಾಳೆ. ಒಂದು ವೇಳೆ ಆಕೆಯ ಕಣ್ಮುಂದೆಯೇ ಮಕ್ಕಳು ಪ್ರಾಣಬಿಟ್ಟರೆ, ಕೊನೆಯುಸಿರು ಇರುವರೆಗೂ ಕೊರಗುತ್ತಿರುತ್ತಾಳೆ. ತನ್ನ ಮಕ್ಕಳಿಗೆ ಏನು ಆಗಿದರಲಿ ಎಂದು ತಾಯಿ ಹೃದಯ ದೇವರಲ್ಲಿ ಪ್ರಾರ್ಥಿಸುತ್ತಿರುತ್ತದೆ. ತನಗೆ ಎಷ್ಟೇ ಕಷ್ಟ ಆದ್ರೂ ಮಕ್ಕಳ ಆಸೆಯನ್ನು ಪೂರೈಸಲು ಮುಂದಾಗುತ್ತಾಳೆ. ಮಕ್ಕಳ ಸಂತೋಷ ಕಂಡು ತಾಯಿ ಸಂತಸವಾಗಿರುತ್ತಾಳೆ. ತಾಯಿಯ ಪಾಲಿಗೆ ಮಕ್ಕಳೇ ಎಲ್ಲ. ಮಕ್ಕಳ ಸಂತೋಷದ ಮುಂದೆಯೇ ತಾಯಿಗೆ ಯಾವುದೂ ಮುಖ್ಯ ಆಗಲ್ಲ. ಆದ್ರೆ ಇಲ್ಲೊಬ್ಬ ತಾಯಿ ತನ್ನ ಮಗಳ ಅಂತಿಮ ಸಂಸ್ಕಾರಕ್ಕಾಗಿ ರೆಡಿಯಾಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಪ್ಲೋಕಾ ಡಾಟ್ ಡ್ರೆಸ್ ಧರಿಸಿ ಚೆಂದವಾಗಿ ರೆಡಿಯಾಗಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆ ತಾನು ಧರಿಸಿರುವ ಡ್ರೆಸ್ ಹೇಗೆ ಎಂದು ವೀಕ್ಷಕರಿಗೆ ತೋರಿಸುವ ಪ್ರಯತ್ನಿಸುತ್ತಿದ್ದಾರೆ. ಮೊದಲಿಗೆ ವಿಡಿಯೋ ನೋಡಿದವರು ಮಹಿಳೆ ಯಾವುದೇ ಮದುವೆ ಅಥವಾ  ಶುಭ ಸಮಾರಂಭಕ್ಕೆ ತೆರಳಲು ರೆಡಿಯಾಗುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದ್ರೆ ಅಸಲಿಯತ್ತು ಗೊತ್ತಾಗುತ್ತಿದ್ದಂತೆ ನೆಟ್ಟಿಗರು ಮಹಿಳೆಗೆ ಛೀಮಾರಿ ಹಾಕಿದ್ದಾರೆ. ಈ ವಿಡಿಯೋ 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. 

ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!

ವಿಡಿಯೋ ನೋಡಿದ ನೆಟ್ಟಿಗರು ಅಮೆರಿಕ ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಡಿಟ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಮಹಿಳೆಯ ವಿಡಿಯೋ ವೈರಲ್ ಆಗುತ್ತಿದೆ. ಲೈಕ್ಸ್ ಮತ್ತು ಕಮೆಂಟ್‌ಗಾಗಿ ನಿನ್ನ ಬುದ್ಧಿಯನ್ನು ಮಾರಿಕೊಂಡಿದ್ದಿಯಾ? ಎಲ್ಲಿದೆ ವಿವೇಚನೆ? ಶೋಕ ಕಾರ್ಯಕ್ರಮಕ್ಕೆ ತೆರಳುವುದನ್ನು ಯಾರು ವಿಡಿಯೋ ಮಾಡಿ ಹಂಚಿಕೊಳ್ತಾರಾ? ಅದು ಸ್ವಂತ ಮಗಳ ಅಂತಿಮ ಸಂಸ್ಕಾರಕ್ಕೆ ರೆಡಿ ಆಗುತ್ತಿರೋದನ್ನು ಕಂಡು ನಮಗೆ ಆಶ್ಚರ್ಯವಾಗುತ್ತಿದೆ. ತಾಯಿ ಎಂಬ ಪದಕ್ಕೂ ನೀನು ಕಳಂಕ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Karissa (@karissawidder)

 
 
 
 
 
 
 
 
 
 
 
 
 
 
 

A post shared by Karissa (@karissawidder)

Latest Videos
Follow Us:
Download App:
  • android
  • ios