ನವ​ದೆ​ಹ​ಲಿ(ಮಾ.22): ವಿಶ್ವದ 185ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿ, 12000 ಜನರನ್ನು ಬಲಿಪಡೆದಿರುವ ಕೊರೋನಾ ಸೋಂಕು ಅಕ್ಷರಶಃ ಇಡೀ ವಿಶ್ವವನ್ನೇ ಆತಂಕದ ಮಡುವಿಗೆ ತಳ್ಳಿದೆ. ಹೀಗಾಗಿಯೇ ಸೋಂಕು ನಿಗ್ರಹಕ್ಕಾಗಿ 40ಕ್ಕೂ ಹೆಚ್ಚು ದೇಶಗಳು, ಕರ್ಫ್ಯೂ ಹೇರಿಕೆ ಸೇರಿದಂತೆ ಜನರ ಸಂಚಾರಕ್ಕೆ ಪೂರ್ಣ ನಿಷೇಧ ಹೇರಿವೆ. ಪರಿಣಾಮ ಈ ದೇಶಗಳ 100 ಕೋಟಿಗೂ ಹೆಚ್ಚಿನ ಜನ ಗೃಹಬಂಧನಕ್ಕೆ ಒಳಪಡುವಂತೆ ಆಗಿದೆ.

ಇನ್ನು ಭಾನು​ವಾ​ರ​ದಂದು ಭಾರ​ತ​ದಲ್ಲಿ ಜನತಾ ಕರ್ಫ್ಯೂ ಘೋಷಿ​ಸಿ​ರುವ ಕಾರ​ಣ 130 ಕೋಟಿ ಜನರು ಮನೆ​ಯಲ್ಲೇ ಉಳಿ​ಯ​ಲಿ​ದ್ದಾರೆ. ಒಟ್ಟಾರೆ ವಿಶ್ವ​ದೆ​ಲ್ಲೆಡೆ 230 ಕೋಟಿ ಜನರು ಗೃಹ ಬಂಧ​ನಕ್ಕೆ ಒಳ​ಗಾ​ಗ​ಲಿ​ದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

186: ಸೋಂಕು ಹರಡಿರುವ ದೇಶಗಳು

2.88 ಲಕ್ಷ: ವಿಶ್ವದಾದ್ಯಂತ ಸೋಂಕಿತರು

11950: ಕೊರೋನಾಗೆ ಬಲಿಯಾದವರು

93620: ಸೋಂಕಿಂದ ಗುಣಮುಖರಾದವರು

ಶನಿವಾರ ಅತಿ ಹೆಚ್ಚು ಸಾವು

ಇಟಲಿ: 793

ಸ್ಪೇನ್‌: 285

ಇರಾನ್‌: 123

ಹಾಲೆಂಡ್‌: 30