* ಬಿಎ.4 ಕೊರೋನಾ ವೈರಸ್ ರೂಪಾಂತರಿ ಬಗ್ಗೆ ಆತಂಕ* ಶರವೇಗದ ಒಮಿಕ್ರೋನ್ ಉಪತಳಿ ರಷ್ಯಾದಲ್ಲಿ ಪತ್ತೆ
ಮಾಸ್ಕೋ(ಜೂ.13): ಸಾಮಾನ್ಯ ಕೊರೋನಾ ವೈರಸ್‌ಗಿಂತ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಒಮಿಕ್ರೋನ್ ರೂಪಾಂತರಿಯ ಉಪತಳಿಯೊಂದು ರಷ್ಯಾದಲ್ಲಿ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಒಮಿಕ್ರೋನ್‌ನ ಬಿಎ.4 ಎಂಬ ಉಪತಳಿ ದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಜಿನೋಮ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಪರೀಕ್ಷಿಸಿದ ಕೊರೋನಾ ಸ್ಯಾಂಪಲ್‌ಗಳಲ್ಲಿ ಈ ಹೊಸ ಉಪತಳಿ ಪತ್ತೆಯಾಗಿದೆ. ಇದು ಸಾಮಾನ್ಯ ಒಮಿಕ್ರೋನ್ ಉಪತಳಿಯಾದ ಬಿಎ.2ಗಿಂತ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದೆ. ರಷ್ಯಾದಲ್ಲಿ ಸದ್ಯ 95% ಕೊರೋನಾ ರೋಗಿಗಳಲ್ಲಿ ಬಿಎ.2 ತಳಿಯ ವೈರಸ್ ಖಚಿತಪಟ್ಟಿದ್ದು, ಬಿಎ.4 ಹೊಸ ತಳಿಯ ಪತ್ತೆಯಿಂದ ಮತ್ತೆ ಕೊರೋನಾ ಹೆಚ್ಚಲಿದೆಯೇ ಎಂಬ ಆತಂಕ ಮೂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಬಿಎ.4 ಒಮಿಕ್ರೋನ್ ಉಪತಳಿಯ ಬಗ್ಗೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.
