ವಾಷಿಂಗ್ಟನ್(ನ.09)‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅವರ ಪತ್ನಿ ಮೆಲಾನಿಯಾ ಟ್ರಂಪ್‌ (50) ವಿಚ್ಛೇದನ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧ್ಯಕ್ಷೀಯ ಅವಧಿ ಪೂರ್ಣಗೊಂಡು ಟ್ರಂಪ್‌ ಶ್ವೇತಭವನದಿಂದ ಹೊರಬರುತ್ತಿದ್ದಂತೆ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ಇಬ್ಬರು ಮಾಜಿ ಅಧಿಕಾರಿಗಳು ಹೇಳಿದ್ದಾರೆ.

ವಿದೇಶಿ ನಾಯಕರಿಗೆ ತರವಲ್ಲ ತಾಜ್, ಭೇಟಿಯ ಕೆಲವೇ ತಿಂಗಳಲ್ಲಿ ಡೈವೋರ್ಸ್!

ಈಗಲೂ ಶ್ವೇತಭವನದಲ್ಲಿ ಟ್ರಂಪ್‌ ಮತ್ತು ಮೆಲಾನಿಯಾ ಬೇರೆ ಬೇರೆ ಬೆಡ್‌ರೂಂ ಹೊಂದಿದ್ದಾರೆ. ಅವರ ನಡುವೆ ಹೆಸರಿಗಷ್ಟೇ ದಾಂಪತ್ಯವಿದೆ. ವಿಚ್ಛೇದನ ನೀಡಲು ಅಧಿಕಾರಾವಧಿ ಮುಗಿಯುವುದನ್ನೇ ‘ಪ್ರಥಮ ಮಹಿಳೆ’ ಕಾಯುತ್ತಿದ್ದಾರೆ ಎಂದು ಮೆಲಾನಿಯಾಗೆ ಹಿರಿಯ ಸಲಹೆಗಾರ್ತಿಯಾಗಿದ್ದ ಸ್ಟೆಫಾನಿ ವಕಾಫ್‌ ಹೇಳಿದ್ದಾರೆ. ಇನ್ನು, ಟ್ರಂಪ್‌ಗೆ ಸಹಾಯಕರಾಗಿದ್ದ ಒಮರೋಸಾ ಮ್ಯಾನಿಗಾಟ್‌ ನ್ಯೂಮನ್‌ ಕೂಡ ಮೆಲಾನಿಯಾ ವಿಚ್ಛೇದನ ನೀಡಲು ಒಂದೊಂದು ಕ್ಷಣವನ್ನೂ ಲೆಕ್ಕ ಹಾಕುತ್ತಿದ್ದಾರೆ ಎಂದಿದ್ದಾರೆ.

74 ವರ್ಷದ ಟ್ರಂಪ್‌ಗೆ ಮೆಲಾನಿಯಾ ಮೂರನೇ ಪತ್ನಿ. ಮೊದಲ ಇಬ್ಬರು ಪತ್ನಿಯರಾದ ಇವಾನಾ ಹಾಗೂ ಮಾರ್ಲಾ ಬಹಳ ಹಿಂದೆಯೇ ವಿಚ್ಛೇದನ ನೀಡಿದ್ದಾರೆ. 15 ವರ್ಷದ ಹಿಂದೆ ಮೆಲಾನಿಯಾರನ್ನು ಟ್ರಂಪ್‌ ಮದುವೆಯಾಗಿದ್ದರು. ಅವರ ನಡುವಿನ ವಿರಸ ಅನೇಕ ಬಾರಿ ಬಹಿರಂಗವಾಗಿತ್ತು.