Asianet Suvarna News Asianet Suvarna News

ರಾಜಮನೆತನದ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆಗೂ ಚಿಂತನೆ: ಮೇಘನ್ ಮರ್ಕೆಲ್

ರಾಜಮನೆತನದ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆಗೂ ಚಿಂತನೆ: ಮೇಗನ್‌ ಮರ್ಕೆಲ್‌| ರಾಜಪ್ರಭುತ್ವದಿಂದ ಹೊರಬಂದಿದ್ದಕ್ಕೆ ವಿಸ್ತೃತ ಕಾರಣ ನೀಡಿದ ಹ್ಯಾರಿ, ಮೇಘನ್‌| ಜನಾಂಗೀಯ ನಿಂದನೆ, ಆರ್ಥಿಕ ನೆರವು ಕಡಿತ, ಇತ್ಯಾದಿ ನೋವಿನ ಬಗ್ಗೆ ಮಾತು

Meghan Markle Reveals Suicidal Thoughts Over Royal Treatment in Interview pod
Author
Bangalore, First Published Mar 9, 2021, 7:25 AM IST

ಲಾಸ್‌ ಏಂಜಲೀಸ್(ಮಾ.09)‌: ಬ್ರಿಟನ್‌ ರಾಜಮನೆತನದ ಎಲ್ಲಾ ಕರ್ತವ್ಯ, ಹುದ್ದೆಗಳಿಂದ ಕೆಲ ತಿಂಗಳ ಹಿಂದೆ ಹೊರಬಿದ್ದಿದ್ದ ಮಾಜಿ ಯುವರಾಜ ಹ್ಯಾರಿ ಮತ್ತು ಅವರ ಪತ್ನಿ ಅಮೆರಿಕ ಮೂಲದ ಮೇಘನ್‌ ಮರ್ಕೆಲ್‌, ತಾವು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದರ ಹಿಂದಿನ ಎಲ್ಲಾ ವಿಷಯಗಳನ್ನು ಸ್ಫೋಟಕ ಸಂರ್ದಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಓಪ್ರಾ ವಿನೆ್ೊ್ರೕ ನಡೆಸಿದ ಈ ಸಂದರ್ಶನವು, ಹ್ಯಾರಿ- ಮೇಘನ್‌ ದಂಪತಿ ಎದುರಿಸಿದ ಸಂಕಷ್ಟಗಳ ಜೊತೆಜೊತೆಗೆ ಬ್ರಿಟನ್‌ ರಾಜಮನೆತನದನದಲ್ಲಿ ಕಾನೂನು ಕಟ್ಟಳೆ ನಿರ್ಬಂಧಗಳ ಕುರಿತೂ ಬೆಳಕು ಚೆಲ್ಲಿದೆ.

ಮೇಘನ್‌ ಹೇಳಿದ್ದೇನು? ನಿಷ್ಕಪಟಿಯಾಗಿ ಪ್ರವೇಶ:

ಅಮೆರಿಕದಲ್ಲಿ ಹುಟ್ಟಿಬೆಳೆದ ನನಗೆ ರಾಜಮನೆತನದ ರೀತಿ ರಿವಾಜುಗಳು ಪೂರ್ಣ ಹೊಸದು. ಆದರೆ ಅಲ್ಲಿಗೆ ಬಂದ ಮೇಲೆ ನನಗೆ ಹೊಸ ಜಗತ್ತು ಪ್ರವೇಶಿಸಿದಂತೆ ಆಗಿತ್ತು. ರಾಜಮನೆತನದ ಗೌರವ ಮತ್ತು ಅದನ್ನು ಕಾಪಾಡಿಕೊಳ್ಳಲು ಹೇರುತ್ತಿದ್ದ ಒತ್ತಡಗಳು ಭಯಂಕರವಾಗಿದ್ದವು. ಬ್ರಿಟನ್‌ ಪತ್ರಿಕೆಗಳು ದಿನಕ್ಕೊಂದು ಗಾಳಿ ಸುದ್ದಿ ವರದಿ ಮಾಡಿ ನನ್ನನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದವು.

3 ದಿನ ಮೊದಲೇ ರಹಸ್ಯ ಮದುವೆ:

ವಿಶ್ವದ ಕಣ್ಣಿಗೆ ನಾವು ಅರಮನೆಯಲ್ಲಿ ವೈಭೋವಪೇತ ಮದುವೆಯಾಗುವ 3 ದಿನಗಳ ಮೊದಲೇ ನಾವು ರಹಸ್ಯವಾಗಿ ಮದುವೆಯಾಗಿದ್ದೆವು. ಅಲ್ಲಿ ಇದ್ದಿದ್ದು ನಾನು, ಹ್ಯಾರಿ ಮತ್ತು ಕ್ಯಾಂಟರ್‌ಬರಿಯ ಆಚ್‌ರ್‍ಬಿಷಪ್‌. ಮನೆಯ ಹಿಂಭಾಗದಲ್ಲೇ ನಡೆದಿತ್ತು ಈ ವಿವಾಹ.

ಆತ್ಮಹತ್ಯೆಗೂ ಯೋಚಿಸಿದ್ದೆ:

ಒಂದು ಹಂತದಲ್ಲಂತೂ ನನಗೆ ಜೀವನವೇ ಸಾಕಾಗಿ ಆತ್ಮಹತ್ಯೆಯ ಯೋಚನೆಗಳು ಬಂದಿದ್ದವು. ಈ ಕುರಿತು ನಾನು ಅರಮನೆಯ ಮಾನವಸಂಪನ್ಮೂಲ ವಿಭಾಗದಿಂದ ನೆರವನ್ನೂ ಯಾಚಿಸಿದ್ದೆ. ಆದರೆ ನೀವು ಅದರ ವ್ಯಾಪ್ತಿಗೆ ಬರುವುದಿಲ್ಲ ಎಂದು ನಿಷ್ಕರುಣೆಯಿಂದ ನನ್ನ ಕೋರಿಕೆಯಲ್ಲಿ ಎಸೆದುಬಿಟ್ಟಿದ್ದರು. ನಾನೇ ವೈಯಕ್ತಿಕವಾಗಿ ಆಸ್ಪತ್ರೆಗೆ ಹೋಗುವುದೂ ರಾಜಮನೆತನದ ನಿಯಮಗಳ ಅನ್ವಯ ಸಾಧ್ಯವಿರಲಿಲ್ಲ. ನಾನು ರಾಜಮನೆತನಕ್ಕೆ ಸೇರಿದ ದಿನವೇ ಕಡೆಯ ಬಾರಿಗೆ ನಾನು ನನ್ನ ಪಾಸ್‌ಪೋರ್ಟ್‌, ಚಾಲಕನ ಪರವಾನಗಿ, ಕೀ ಎಲ್ಲವನ್ನೂ ಕಳೆದುಕೊಂಡಿದ್ದೆ.

ಜನಾಂಗೀಯ ತಾರತಮ್ಯ:

ಈಗ 2 ವರ್ಷದವನಾಗಿರುವ ನನ್ನ ಮಗ ಆರ್ಚಿ ನನ್ನ ಗರ್ಭದಲ್ಲಿದ್ದಾಗ, ನನಗೆ ಹುಟ್ಟುವ ಮಗು ಯಾವ ಬಣ್ಣದ್ದಾಗಿರಬಹುದು? ಅದು ಎಷ್ಟುಕಪ್ಪಗಿರಬಹುದು ಎಂದೆಲ್ಲಾ ಅರಮನೆಯಲ್ಲಿ ಚರ್ಚೆ ನಡೆದಿದ್ದು ನನ್ನ ಗಮನಕ್ಕೆ ಬಂದಿತ್ತು. ಬಹುಶಃ ಇದೇ ಕಾರಣಕ್ಕಾಗಿಯೇ ನನ್ನ ಮಗುವಿಗೆ ಯುವರಾಜನ ಪಟ್ಟನೀಡುವುದಿಲ್ಲ ಮತ್ತು ಭದ್ರತೆಯನ್ನೂ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ರಾಜಮನೆತನ ಬಂದಿತ್ತು.

ಕೇಟ್‌ಳನ್ನು ಅಳಿಸಿರಲಿಲ್ಲ:

ನಾನು ಕೇಟ್‌ ಮಿಡ್ಲಟನ್‌ (ಹ್ಯಾರಿಯ ಸೋದರ ವಿಲಿಯಂನ ಪತ್ನಿ)ಳನ್ನು ಅಳಿಸಿದ್ದೆ ಎಂದ ಕೆಲವು ಟ್ಯಾಬ್ಲಾಯ್ಡ್‌ಗಳು ವರದಿ ಮಾಡಿದ್ದವು. ಆದರೆ ವಾಸ್ತವವಾಗಿ ಅದು ಉಲ್ಟಾ ಆಗಿತ್ತು. ವಿವಾಹಕ್ಕೂ ಕೆಲ ದಿನಗಳ ಮೊದಲು ಅವರು ತಮ್ಮದೇ ಏನೋ ಕಾರಣಕ್ಕೆ ಕೋಪಗೊಂಡಿದ್ದರು. ಹೀಗಾಗಿ ಅಳುವ ಸ್ಥಿತಿ ನನ್ನದಾಗಿತ್ತು. ಆದರೆ ಕೆಲವರನ್ನು ಕಾಪಾಡುವ ಉದ್ದೇಶದಿಂದ ರಾಜಪ್ರಭುತ್ವ ಸುಳ್ಳು ಹೇಳಬೇಕಾಗಿ ಬಂತು.

ಹ್ಯಾರಿ ಹೇಳಿದ್ದೇನು? ಆರ್ಥಿಕ ನೆರವು ಕಡಿತ:

2020ರಲ್ಲಿ ನಾನು ರಾಜಪ್ರಭುತ್ವದ ಕರ್ತವ್ಯದಿಂದ ಹೊರಬರುವ ಘೋಷಣೆ ಮಾಡುತ್ತಲೇ ನನಗೆ ಎಲ್ಲಾ ರೀತಿಯ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲಾಯಿತು. ಭದ್ರತೆಯನ್ನೂ ತೆಗೆದು ಹಾಕಲಾಯಿತು. ನನ್ನ ತಂದೆ ನನ್ನ ಜೊತೆ ಮಾತನಾಡುವುದು ನಿಲ್ಲಿಸಿದರು.

ನಾನು ಸಿಕ್ಕಿ ಹಾಕಿಕೊಂಡಿದ್ದೆ:

ನಾನು ರಾಜಮನೆತನದ ರೀತಿ ರಿವಾಜುಗಳಲ್ಲಿ ಸಿಕ್ಕಿಬಿದ್ದಿದ್ದೆ. ಆದರೆ ಅದು ನನಗೇ ಗೊತ್ತಿರಲಿಲ್ಲ. ನನಗಿಂತ ಮೊದಲು ನನ್ನ ತಂದೆ ಮತ್ತು ಸೋದರ ವಿಲಿಯಂ ಕೂಡಾ ಹಾಗೆಯೇ ಸಿಕ್ಕಿಹಾಕಿಕೊಂಡಿದ್ದರು. ಮೇಘನ್‌ ಹೊರತು ಇನ್ಯಾರೂ ಆಗಿದ್ದರೂ ನಾನು ಆ ಬಲೆಯಿಂದ ಹೊರಬರುವುದು ಸಾಧ್ಯವಿರಲಿಲ್ಲ.

Follow Us:
Download App:
  • android
  • ios