ಪೋರ್ಟ್ ಲೂಯಿಸ್[ಜ.15]: ಇಂದು ಸಡಗರದ ಸಂಕ್ರಾಂತಿ ಹಬ್ಬ. ಇದು ಈ ವರ್ಷದ ಮೊದಲ ಹಬ್ಬವಾಗಿದ್ದು, ದೇಶದೆಲ್ಲೆಡೆ ಇದನ್ನು ಬಹಳಷ್ಟು ಸಂಭ್ರಮದಿಂದ ಆಚರಿಸಲಾಗುತ್ತಿದೆ ಹೀಗಿರುವಾಗ ಭಾರತೀಯರ ಈ ಹಬ್ಬಕ್ಕೆ ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಕೂಡಾ ವಿಭಿನ್ನವಾಗಿ ಶುಭ ಕೋರಿದ್ದಾರೆ. 

ಸಂಕ್ರಾಂತಿ ಹಬ್ಬದ ವಿಶೇಷತೆ ಏನು? ಆಚರಣೆ ಹೇಗೆ? ಇಲ್ಲಿದೆ ಎಲ್ಲಾ ಮಾಹಿತಿ

ಹೌದು ಭಾರತದಲ್ಲಿ ಸಂಕ್ರಾಂತಿಗೆ ಬಹಳ ವಿಶೇಷ ಸ್ಥಾನವಿದೆ. ಭಾರತೀಯರೆಲ್ಲರೂ ವರ್ಷದ ಮೊದಲ ಹಬ್ಬವನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಟ್ವೀಟ್ ಮೂಲಕ ಎಲ್ಲರಿಗೂ ಹಬ್ಬಕ್ಕೆ ಶುಭ ಕೋರಿದ್ದಾರೆ. 

ತಮ್ಮ ಪತ್ನಿ ಜೊತೆ ಪೂಜೆ ಮಾಡುವ ಫೋಟೋ ಶೇರ್ ಮಾಡಿರುವ ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ 'ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು' ಎಂದು ಬರೆದಿದ್ದಾರೆ.