Asianet Suvarna News Asianet Suvarna News

Maryland plane crash: ವಿದ್ಯುತ್‌ ತಂತಿಗೆ ಸಿಕ್ಕಿಬಿದ್ದ ವಿಮಾನ: 6 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತ..!

ಭಾನುವಾರ ರಾತ್ರಿ ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ ಸಣ್ಣ ವಿಮಾನವೊಂದು ವಿದ್ಯುತ್ ತಂತಿಗಳಿಗೆ ಅಪ್ಪಳಿಸಿದೆ. ಇದರಿಂದ ಮಾಂಟ್ಗೊಮೆರಿ ಕೌಂಟಿಯಲ್ಲಿ ಅಪಾರ ಪ್ರಮಾಣದ ವಿದ್ಯುತ್ ಕಡಿತ ಉಂಟಾಗಿದೆ. 

maryland plane crash small plane crashes into power lines in us triggers major blackout ash
Author
First Published Nov 29, 2022, 11:13 AM IST

ಗೈತೆ​ರ್ಸ್‌ಬರ್ಗ್‌: ಇಬ್ಬರು ಪ್ರಯಾಣಿಸಬಹುದಾದಂತಹ ಚಿಕ್ಕ ವಿಮಾನವೊಂದು (Small Plane) ವಿದ್ಯುತ್‌ ತಂತಿಗೆ (Power Lines) ಸಿಲುಕಿಕೊಂಡ ಘಟನೆ ಅಮೆರಿಕದ (United States) ಮೇರಿಲ್ಯಾಂಡ್‌ನಲ್ಲಿ (Maryland) ಭಾನುವಾರ ನಡೆದಿದೆ. ಸುಮಾರು 6 ಗಂಟೆಗಳ ಕಾರ್ಯಾಚರಣೆಯ ಬಳಿಕ ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ವಿಮಾನ (Flight) ವಿದ್ಯುತ್‌ ತಂತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾರಣ ಮೇರಿಲ್ಯಾಂಡ್‌ನ ಬಹುತೇಕ ಪ್ರದೇಶಗಳಲ್ಲಿ 6 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್‌ ವ್ಯತ್ಯಯ (Power Outage) ಉಂಟಾಗಿತ್ತು. 

ನ್ಯೂಯಾರ್ಕ್‌ನಿಂದ (New York) ಹೊರಟ ಏಕ ಎಂಜಿನ್‌ ವಿಮಾನ ಮೂನಿ ಎಂ20ಜೆ ಎಚ್‌ಮ್ಯಾಡ್‌ ಗೈತೆ​ರ್ಸ್‌ಬರ್ಗ್‌ (Gaithersburg) ಬಳಿ, ಭೂ ಮಟ್ಟದಿಂದ 100 ಅಡಿ ಎತ್ತರದಲ್ಲಿದ್ದ ವಿದ್ಯುತ್‌ ತಂತಿಗೆ ಭಾನುವಾರ ಸಾಯಂಕಾಲ 5.40ರ ಸುಮಾರಿಗೆ ಸಿಲುಕಿಕೊಂಡಿತ್ತು. ಸತತವಾಗಿ 6 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ ಮಧ್ಯರಾತ್ರಿ 12.16 ಸುಮಾರಿಗೆ ವಿಮಾನದಲ್ಲಿದ್ದವರನ್ನು ಸುರಕ್ಷಿತವಾಗಿ ಕೆಳಗೆ ಕರೆತಂದರು. ಈ ದುರಂತದಿಂದಾಗಿ ಸುಮಾರು 1.2 ಲಕ್ಷ ಜನ ಹಲವು ಗಂಟೆಗಳ ಕಾಲ ವಿದ್ಯುತ್‌ ಇಲ್ಲದೆ ಪರದಾಡುವಂತಾಗಿತ್ತು.

ಇದನ್ನು ಓದಿ: Dallas Air Show: ಪರಸ್ಪರ ಡಿಕ್ಕಿ ಹೊಡೆದುಕೊಂಡ 2ನೇ ಮಹಾಯುದ್ಧ ಕಾಲದ ವಿಮಾನಗಳು: 6 ಜನರ ಸಾವು..?

ಭಾನುವಾರ ರಾತ್ರಿ ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ ಸಣ್ಣ ವಿಮಾನವೊಂದು ವಿದ್ಯುತ್ ತಂತಿಗಳಿಗೆ ಅಪ್ಪಳಿಸಿದೆ. ಇದರಿಂದ ಮಾಂಟ್ಗೊಮೆರಿ ಕೌಂಟಿಯಲ್ಲಿ ಅಪಾರ ಪ್ರಮಾಣದ ವಿದ್ಯುತ್ ಕಡಿತ ಉಂಟಾಗಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅದೃಷ್ಟವಶಾತ್‌, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇನ್ನು, ಮಾಂಟ್ಗೊಮೆರಿ ಕೌಂಟಿಯಾದ್ಯಂತ ವಿದ್ಯುತ್ ಇಲ್ಲದೆ 90,000ಕ್ಕೂ ಹೆಚ್ಚು ಮನೆಗಳು ಮತ್ತು ವ್ಯಾಪಾರಗಳ ಮೇಲೆ ಪರಿಣಾಮ ಬೀರಿವೆ.

"ರೋತ್‌ಬರಿ ಡಾ ಮತ್ತು ಗೋಶೆನ್ ರಸ್ತೆಯ ಪ್ರದೇಶದಲ್ಲಿ ಒಂದು ಸಣ್ಣ ವಿಮಾನವು ವಿದ್ಯುತ್ ತಂತಿಗಳಿಗೆ ಅಪ್ಪಳಿಸಿತು. ಇದು ಕೌಂಟಿಯ ಕೆಲವು ಭಾಗಗಳಿಗೆ ವಿದ್ಯುತ್ ಅನ್ನು ಕಡಿತಗೊಳಿಸಿದೆ. ದಯವಿಟ್ಟು ಈ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಿ. ಏಕೆಂದರೆ ಇನ್ನೂ ಜೀವಂತ ವೈರ್‌ಗಳು ಇವೆ" ಎಂದು ಮಾಂಟ್ಗೊಮೆರಿ ಕೌಂಟಿ ಪೊಲೀಸರು ಟ್ವಿಟ್ಟರ್‌ನಲ್ಲಿ ಹೇಳಿದರು. 

ಇದನ್ನೂ ಓದಿ: ಗಾಳಿಯಲ್ಲಿ ಹಾರುತ್ತಿದ್ದ ಲಘು ವಿಮಾನಗಳು ಡಿಕ್ಕಿ, ನಾಲ್ವರು ಸಾವು!

ಮಳೆಯ ಸಮಯದಲ್ಲಿ ವಾಣಿಜ್ಯ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ, ಆದರೆ ಘಟನೆ ಬಗ್ಗೆ ನಿಜವಾದ ಕಾರಣವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ವಿಮಾನವು 10ನೇ ಮಹಡಿಯಷ್ಟು ಎತ್ತರದ ವಿದ್ಯುತ್ ತಂತಿಗಳಿಗೆ ಅಪ್ಪಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅದನ್ನು ತಕ್ಷಣವೇ ಖಚಿತಪಡಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ. ಇನ್ನು, ಈ ಅವಘಡದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನು ಓದಿ: Nepal Plane ನಾಪತ್ತೆಯಾದ ನೇಪಾಳ ವಿಮಾನ ಲಮ್ಚೆ ನದಿ ಬಳಿ ಅಪಘಾತ, ಪೈಲೆಟ್ ಫೋನ್‌ನಿಂದ ಸ್ಥಳ ಪತ್ತೆ!

Follow Us:
Download App:
  • android
  • ios