ರಷ್ಯಾ ದಾಳಿ ಆರಂಭಿಸಿದ ಬಳಿಕ ನ್ಯಾಟೋ ದೇಶಗಳು ಸೇರಿದಂತೆ ಯಾವುದೇ ದೇಶದಿಂದ ತಮಗೆ ನೆರವು ಸಿಗದೆ ಏಕಾಂಗಿಯಾಗಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ಮಾಡಿದ್ದ ಭಾವುಕ ಭಾಷಣ ಫಲ ನೀಡಿದೆ.

ಕೀವ್‌/ಮಾಸ್ಕೋ (ಮಾ.01): ರಷ್ಯಾ (Russia) ದಾಳಿ ಆರಂಭಿಸಿದ ಬಳಿಕ ನ್ಯಾಟೋ ದೇಶಗಳು ಸೇರಿದಂತೆ ಯಾವುದೇ ದೇಶದಿಂದ ತಮಗೆ ನೆರವು ಸಿಗದೆ ಏಕಾಂಗಿಯಾಗಿದ್ದೇವೆ ಎಂದು ಉಕ್ರೇನ್‌ (Ukraine) ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ (Volodymyr Zelensky) ಮಾಡಿದ್ದ ಭಾವುಕ ಭಾಷಣ ಫಲ ನೀಡಿದೆ. ಉಕ್ರೇನ್‌ಗೆ ಅಮೆರಿಕ (America), ನ್ಯಾಟೋ ದೇಶಗಳು ಸೇರಿದಂತೆ ಹಲವು ದೇಶಗಳು ಭಾರೀ ಪ್ರಮಾಣದ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವು ಘೋಷಿಸಿವೆ. ಇದು ರಷ್ಯಾಕ್ಕೆ ಹಲವು ಪ್ರದೇಶಗಳಲ್ಲಿ ತೀವ್ರ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್‌ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿದೆ.

ಯಾವ ದೇಶ, ಏನು ನೆರವು?
ಅಮೆರಿಕ - ಆ್ಯಂಟಿ ಆರ್ಮರ್‌, ಸ್ಮಾಲ್‌ ಆರ್ಮರ್‌, ಬಾಡಿ ಆರ್ಮರ್‌ ಹಾಗೂ 2650 ಕೋಟಿ ರು. ಹಣ

ನ್ಯಾಟೋ ದೇಶಗಳು - ಆ್ಯಂಟಿ ಟ್ಯಾಂಕ್‌ ಶಸ್ತ್ರಾಸ್ತ್ರ, ಕ್ಷಿಪಣಿ ಹಾಗೂ ನೂರಾರು ಕೋಟಿ ರು. ಹಣದ ನೆರವು

ಜರ್ಮನಿ - 1000 ಟ್ಯಾಂಕ್‌ ನಿರೋಧಕ ಕ್ಷಿಪಣಿ, ವಿಮಾನ ಹೊಡೆದುರುಳಿಸುವ 500 ಸ್ಟಿಂಗರ್‌

ಟರ್ಕಿ - ಟ್ಯಾಂಕ್‌ಗಳು ಹಾಗೂ ಬಂಕರ್‌ಗಳನ್ನು ನಾಶಪಡಿಸುವ ಟಿಬಿ2 ಡ್ರೋನ್‌ಗಳು

ನೆದರ್‌ಲೆಂಡ್‌ - 200 ಸ್ಟಿಂಗರ್‌ ಆ್ಯಂಟಿ ಏರ್‌ಕ್ರಾಫ್ಟ್‌ ಡಿಫೆನ್ಸ್‌ ಸಿಸ್ಟಮ್‌

ಬೆಲ್ಜಿಯಂ - 2000 ಮಷಿನ್‌ ಗನ್‌, 38000 ಟನ್‌ ಇಂಧನ

Karnataka Ukraine Students: ಉಕ್ರೇನ್ ನಿಂದ ತವರಿಗೆ ಬಂದ ಕರ್ನಾಟಕದ 37 ವಿದ್ಯಾರ್ಥಿಗಳು

ನ್ಯಾಟೋ ಒಕ್ಕೂಟವು ಸಾವಿರಾರು ಆ್ಯಂಟಿ ಟ್ಯಾಂಕ್‌ ಶಸ್ತ್ರಾಸ್ತ್ರ, ನೂರಾರು ವಾಯುರಕ್ಷಣಾ ಕ್ಷಿಪಣಿ, ಸಾವಿರಾರು ಸಣ್ಣಪುಟ್ಟಶಸ್ತ್ರಾಸ್ತ್ರಗಳನ್ನು ಒದಗಿಸಿವೆ. ಇದಲ್ಲದೆ ಮಾನವೀಯ ನೆರವಿನ ಕಾರ್ಯಕ್ರಮದ ಭಾಗವಾಗಿ ನೂರಾರು ಕೋಟಿ ರು.ಆರ್ಥಿಕ ನೆರವು ಪ್ರಕಟಿಸಿವೆ. ಜೊತೆಗೆ ಬೆಲ್ಜಿಯಂ, ಕೆನಡಾ, ಚೆಕ್‌ ರಿಪಬ್ಲಿಕ್‌, ಈಸ್ಟೀನಿಯಾ, ಫ್ರಾನ್ಸ್‌, ಜರ್ಮನಿ, ಗ್ರಿಸ್‌, ಲಾತ್ವಿಯಾ, ಲಿಥುವೇನಿಯಾ, ನೆದರ್‌ಲೆಂಡ್‌, ಪೋಲೆಂಡ್‌, ಪೋರ್ಚುಗಲ್‌, ರೊಮೇನಿಯಾ, ಸ್ಲೊವಾಕಿಯಾ, ಸ್ಲೊವೇನಿಯಾ, ಬ್ರಿಟನ್‌ ಮತ್ತು ಅಮೆರಿಕ ಸರ್ಕಾರಗಳು ಇನ್ನಷ್ಟುಸೇನಾ ನೆರವಿನ ಘೋಷಣೆ ಮಾಡಿವೆ. ನ್ಯಾಟೋ ದೇಶಗಳಿಂದ ಉಕ್ರೇನ್‌ಗೆ ಈಗಾಗಲೇ ಜಾವೆಲಿನ್‌ ಕ್ಷಿಪಣಿ, ಟ್ಯಾಂಕ್‌ ನಿರೋಧಕ ಕ್ಷಿಪಣಿಗಳು ಬಂದಿವೆ.

ಆಸ್ಪ್ರೇಲಿಯಾ: ಆಸ್ಪ್ರೇಲಿಯಾ ಸರ್ಕಾರ ನಾನಾ ರೀತಿಯ ಶಸ್ತ್ರಾಸ್ತ್ರಗಳನ್ನು ಒದಗಿಸುವ ಭರವಸೆ ನೀಡಿದೆ.

ಜರ್ಮನಿ: ಯುದ್ಧಪೀಡಿತ ಪ್ರದೇಶಗಳಿಗೆ ಎಂದೂ ಶಸ್ತ್ರಾಸ್ತ್ರ ರವಾನಿಸಲ್ಲ ಎಂಬ ತನ್ನ ಐಸಿಹಾಸಿಕ ನೀತಿಯಲ್ಲೇ ಬದಲಾವಣೆ ಮಾಡಿರುವ ಜರ್ಮನಿ ಸರ್ಕಾರ, ಉಕ್ರೇನ್‌ಗೆ 1000 ಟ್ಯಾಂಕ್‌ ನಿರೋಧಕ ಕ್ಷಿಪಣಿ, 500 ಸ್ಟಿಂಜರ್‌ ಆ್ಯಂಟಿ ಏರ್‌ಕ್ರಾಫ್ಟ್‌ ಡಿಫೆನ್ಸ್‌ ಸಿಸ್ಟಮ್‌ ರವಾನಿಸುವ ಘೋಷಣೆ ಮಾಡಿದೆ.

ಟರ್ಕಿ: ಟರ್ಕಿ ಟಿಬಿ2 ಡ್ರೋನ್‌ಗಳು ನೀಡಿದ್ದು, ಇವು ಯುದ್ಧ ಟ್ಯಾಂಕ್‌ಗಳು ಹಾಗೂ ಬಂಕರ್‌ಗಳನ್ನು ಇವು ದೂರದಿಂದಲೇ ಧ್ವಂಸಗೊಳಿಸುತ್ತವೆ.

ಫ್ರಾನ್ಸ್‌: ಫ್ರಾನ್ಸ್‌ ಸರ್ಕಾರ ಕೂಡಾ ಉಕ್ರೇನ್‌ಗೆ ನಾನಾ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರ ರವಾನಿಸುವ ಘೋಷಣೆ ಮಾಡಿದೆ.

ನೆದರ್‌ಲೆಂಡ್‌: ನೆದರ್‌ಲೆಂಡ್‌ ಸರ್ಕಾರ 200 ಸ್ಟಿಂಜರ್‌ ಆ್ಯಂಟಿ ಏರ್‌ಕ್ರಾಫ್ಟ್‌ ಡಿಫೆನ್ಸ್‌ ಸಿಸ್ಟಮ್‌ ರವಾನಿಸುವುದಾಗಿ ಹೇಳಿದೆ.

ಬೆಲ್ಜಿಯಂ: ಉಕ್ರೇನ್‌ಗೆ 2000 ಮಷಿನ್‌ ಗನ್‌, 38000 ಟನ್‌ ಇಂಧನ ರವಾನಿಸುವುದಾಗಿ ಬೆಲ್ಜಿಯಂ ಪ್ರಕಟಿಸಿದೆ.

Russia Ukraine War ಉಕ್ರೇನ್ ಪರಿಸ್ಥಿತಿ, ಭಾರತೀಯರ ರಕ್ಷಣೆ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

ಇತರೆ ನೆರವು: ಅಲ್ಬೇನಿಯಾ, ಬಲ್ಗೇರಿಯಾ, ಕ್ರೊವೇಷಿಯಾ, ಡೆನ್ಮಾರ್ಕ್, ಹಂಗೇರಿ, ಐಸ್‌ಲ್ಯಾಂಡ್‌, ಉತ್ತರ ಮೆಸಿಡೋನಿಯಾ, ನಾರ್ವೆ, ಪೋಲೆಂಡ್‌, ಪೋರ್ಚುಗಲ್‌, ರೊಮೇನಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್‌, ಬ್ರಿಟನ್‌ ಮತ್ತು ಅಮೆರಿಕ ಸರ್ಕಾರಗಳು ಮಾನವೀಯ ನೆರವು ಮತ್ತು ಉಕ್ರೇನ್‌ ನಿರಾಶ್ರಿತರಿಗೆ ತಮ್ಮ ದೇಶದಲ್ಲಿ ತಾತ್ಕಾಲಿಕ ವಾಸಕ್ಕೆ ಅವಕಾಶ ನೀಡುವ ಸೌಲಭ್ಯ ಪ್ರಕಟಿಸಿವೆ.