ವಾಷಿಂಗ್ಟನ್(ನ.28): ಯಥಾ ರಾಜ ತಥಾ ಪ್ರಜೆ ಎಂಬ ನಾಣ್ಣುಡಿಗೆ ಉದಾಹರಣೆಯೆಂಬಂತೆ ಡೊನಾಲ್ಡ್ ಟ್ರಂಪ್‌ ಬೆಂಬಲಿಗ ವರ್ತಿಸಿದ್ದಾನೆ.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಅದನ್ನು ಬಯಲಿಗೆಳೆಯಲು ಸಂಸ್ಥೆಯೊಂದಕ್ಕೆ ನೀಡಿದ್ದ ಎರಡೂವರೆ ಮಿಲಿಯನ್ ಡಾಲರ್ ನೆರವು ನೀಡಿದ್ದ ಟ್ರಂಪ್ ಅಭಿಮಾನಿ, ಈಗ ಅದನ್ನು ವಾಪಾಸು ಕೊಡುವಂತೆ ದಾವೆ ಹೂಡಿದ್ದಾನೆ!  

ಸೋಲೊಪ್ಪಿಕೊಳ್ಳಲ್ಲ, ಮುಂದುವರೆದ ಟ್ರಂಪ್ ಚುನಾವಣಾ ಕ್ಯಾತೆ!

ಚುನಾವಣಾ ಅಕ್ರಮವನ್ನು ತನಿಖೆ ನಡೆಸಲು, ಕಾನೂನು ಕ್ರಮ ಕೈಗೊಳ್ಳಲು ಹ್ಯೂಸ್ಟನ್‌ನ 'ಟ್ರು ದಿ ವೋಟ್ ಇಂಕ್' ಎಂಬ ಸಂಸ್ಥೆಗೆ ಫ್ರೆಡ್ ಎಶೆಲ್‌ಮ್ಯಾನ್  ಎರಡೂವರೆ ಮಿಲಿಯನ್ ಡಾಲರ್ (ಅಂದ್ರೆ ಭಾರತದ ಸುಮಾರು 18 ಕೋಟಿ ರೂ.) ನೆರವು ನೀಡಿದ್ದ. 

ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ  ದಾಖಲಿಸಿದ್ದ 4 ದಾವೆಗಳನ್ನು ಕಳೆದೊಂದು ವಾರದಲ್ಲಿ ಆ ಸಂಸ್ಥೆಯು ವಾಪಾಸು ಪಡೆದಿದೆ. ಆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಟ್ರಂಪ್ ಕಟ್ಟಾ ಬೆಂಬಲಿಗ ತನ್ನ ಹಣ ವಾಪಾಸು ಕೊಡಿ ಅಂತಾ ಹಠ ಹಿಡಿದಿದ್ದಾನೆ. 

ಕ್ಯಾಬಿನೆಟ್‌ ಸದಸ್ಯರ ಘೋಷಿಸಿದ ಅಮೆರಿಕ ಭಾವಿ ಅಧ್ಯಕ್ಷ ಬೈಡನ್‌: ಬ್ಲಿಂಕನ್ ವಿದೇಶಾಂಗ ಸಚಿವ!

ಆದರೆ ಆ ಸಂಸ್ಥೆಯು ಆತನ ರಂಪಕ್ಕೆ ಮಣಿಯದಿದ್ದಾಗ, ತನಗೆ ಮೋಸವಾಗಿದೆ ಎಂದು ಆತ ಈಗ ನ್ಯಾಯಾಲಯದ ಮೊರೆ ಹೋಗಿದ್ದಾನೆ. ನನ್ನ 2.5 ಮಿಲಿಯನ್ ಡಾಲರ್ ಹಣ ವಾಪಾಸು ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.