Asianet Suvarna News Asianet Suvarna News

ವೈರಲ್‌ ಆಗೋದಕ್ಕೋಸ್ಕರನೇ ಹೆಣ್ಣು ಆಡಿನೊಂಡಿಗೆ ಮದುವೆಯಾದ ಗಂಡು

ಇಂಡೊನೇಷಿಯಾದ ವ್ಯಕ್ತಿಯೊಬ್ಬ ವೈರಲ್ ಆಗೋದಕ್ಕೋಸ್ಕರ ಹೆಣ್ಣು ಮೇಕೆಯೊಂದಿಗೆ ಮದುವೆಯಾಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದೆ. 

man married female goat in Indonesia akb
Author
Indonesia, First Published Jun 10, 2022, 3:06 PM IST

ಇಂಡೊನೇಷಿಯಾದ ವ್ಯಕ್ತಿಯೊಬ್ಬ ವೈರಲ್ ಆಗೋದಕ್ಕೋಸ್ಕರ ಹೆಣ್ಣು ಮೇಕೆಯೊಂದಿಗೆ ಮದುವೆಯಾಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದೆ. 

ಜನ ವೈರಲ್‌ ಆಗೋದಕೋಸ್ಕರ ಏನೇನೋ ಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ನೋಡಿದ್ದೇವೆ. ಸೋಶಿಯಲ್ ಮೀಡಿಯಾ ಯುಗ ಇದಾಗಿದ್ದು, ಇದರಲ್ಲಿ ಬರುವ ಒಂದು ಲೈಕ್‌ ಒಂದು ಕಾಮೆಂಟ್‌ಗೋಸ್ಕರ ಯುವ ಸಮೂಹ ಏನೇನೋ ಕಿತಾಪತಿಗಳನ್ನು ಮಾಡಿದ್ದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಕೆಲ ದಿನಗಳ ಹಿಂದೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ತರಹ ಕಾಣಿಸುವ ಸೋಶಿಯಲ್ ಮೀಡಿಯಾ ಸ್ಟಾರ್‌ ಒಬ್ಬ ಉತ್ತರಪ್ರದೇಶದ ರಸ್ತೆಯಲ್ಲಿ ಆತನಂತೆಯೇ ಸ್ಟಂಟ್ ಹಾಗೂ ಡಾನ್ಸ್‌ ಮಾಡಲು ಹೋಗಿದ್ದು, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. 

ಅದೇ ರೀತಿ ಈಗ ಇಂಡೋನೇಷಿಯಾದ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಮೇಕೆಯ ಜೊತೆ ಮದುವೆಯಾಗಿದ್ದಾನೆ. 44 ವರ್ಷದ  ಪ್ರಾಯದ ಸೈಫುಲ್ ಆರಿಫ್ (Saiful Arif) ಎಂಬ ವ್ಯಕ್ತಿ ಜೂನ್ 5 ರಂದು ಬೆಂಜೆಂಗ್ ಜಿಲ್ಲೆಯ (Benjeng district) ಗ್ರೆಸಿಕ್‌ನಲ್ಲಿರುವ (Gresik) ಕ್ಲಾಂಪೋಕ್ ಗ್ರಾಮದಲ್ಲಿ (Klampok village) ಶ್ರೀ ರಹಾಯು ಬಿನ್ ಬೆಜೊ (Sri Rahayu bin Bejo) ಎಂಬ ಮೇಕೆಯನ್ನು ಮದುವೆಯಾಗಿದ್ದಾನೆ. 

ವಿದ್ಯಾರ್ಥಿನಿಯೊಂದಿಗೆ ಕಳೆದ ಮಧುರ ಕ್ಷಣಗಳ ಫೋಟೊ ವೈರಲ್‌: ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ..!

ಈ ಮದುವೆ ಸಮಾರಂಭದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಡೋನೇಷಿಯಾದ ಸೂರ್ಯ ಟಿವಿ (SuryaTV) ಕೂಡ ಇದರ ವಿಡಿಯೋವನ್ನು ರಿಪೋಸ್ಟ್ ಮಾಡಿದೆ. ವೀಡಿಯೋದಲ್ಲಿ ವಧು ಮೇಕೆ ಶಾಲು ಹೊದ್ದುಕೊಂಡಿರುವುದು ಕಂಡು ಬಂದಿದೆ. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನು(traditional Javanese costumes) ಧರಿಸಿದ ಸ್ಥಳೀಯರ ಗುಂಪು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ವರದಿಯ ಪ್ರಕಾರ, ಸೈಫುಲ್ ವರದಕ್ಷಿಣೆ ಎಂದು ಹೇಳುವ 22,000 ರೂಪಾಯಿ (ರೂ. 117) ಎಂದು ಉಲ್ಲೇಖಿಸಿದ 'ಅಕಾದ್ ನಿಕಾಹ್' ಅನ್ನು ಜೋರಾಗಿ ಪಠಿಸಿದ್ದಾರೆ. ಈ ವಿಚಿತ್ರ ಮದುವೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಕೋಪಕ್ಕೆ ಕಾರಣವಾಯಿತು.

Haveriಯಲ್ಲಿ ಹಾಲು ಕೊಡೋ ಗಂಡು‌ ಮೇಕೆ!

ಈ ವೀಡಿಯೊವನ್ನು ಕೇವಲ  ವೈರಲ್ ಆಗುವ ಉದ್ದೇಶದಿಂದ ಮಾತ್ರ ನಿರ್ಮಿಸಲಾಗಿದೆ ಎಂದು ಒಪ್ಪಿಕೊಳ್ಳಲು ಸೈಫುಲ್ ಮುಂದೆ ಬರುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಂತರ ಸೈಫುಲ್ಲಾ ಅವರು ಇದು ಸಂಪೂರ್ಣವಾಗಿ ನಟನೆಯಾಗಿದೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವ ಉದ್ದೇಶದಿಂದ  ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಈ ವೀಡಿಯೊ ಯಾರನ್ನೂ ಅಪರಾಧಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಮತ್ತು ಪ್ರೇಕ್ಷಕರಿಗೆ ಮನರಂಜನೆಗಾಗಿ ರಚಿಸಲಾಗಿದೆ ಎಂದು ಅವರು ಹೇಳಿದರು.

ಇದು ಅಸಹ್ಯಕರ ವಿಷಯ, ಇದು ಹಣ ಗಳಿಸಬಹುದು. ಆದರೆ ಸಾರ್ವಜನಿಕರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಆದರೆ ಮದುವೆಯಾಗುವವರನ್ನು ಮಾತ್ರ ದೂಷಿಸಬೇಡಿ. ಗ್ರಾಮದ ಮುಖ್ಯಸ್ಥರು ಮತ್ತು ಮದುವೆಯನ್ನು ಬೆಂಬಲಿಸುವ ಸುತ್ತಮುತ್ತಲಿನ ಜನರು ಹುಚ್ಚರಾಗಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಈ ಮದುವೆಯನ್ನು ನಿಷೇಧಿಸಲಿಲ್ಲ. ಪ್ರೋತ್ಸಾಹಿಸಿದರು ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಾಮಾನ್ಯವಾಗಿ ಮಳೆ ಬಾರದೇ ಇದ್ದಾಗ ಕಪ್ಪೆಯೊಂದಿಗೆ ಕತ್ತೆಯೊಂದಿಗೆ, ಮೇಕೆಯೊಂದಿಗೆ ಹಳ್ಳಿಯ ಜನ ಮಕ್ಕಳ ಅಥವಾ ಯುವಕರ ಮದುವೆಯನ್ನು ಮಾಡುವುದು, ಅಥವಾ ಕತ್ತೆ ಕತ್ತೆಗಳ ಮಧ್ಯೆಯೇ ಮದುವೆ ಮಾಡಿಸಿದ ಘಟನೆಗಳನ್ನು ಕೇಳಿದ್ದೇವೆ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕೋಸ್ಕರ ಈತ ಆಡಿನೊಂದಿಗೆ ಮದುವೆಯಾಗಿದ್ದು, ವಿಚಿತ್ರವೇ ಸರಿ.

 

Follow Us:
Download App:
  • android
  • ios