ಬೀಜಿಂಗ್(ಜೂ.27): ಬಿಯರ್ ಅಥವಾ ಮದ್ಯ ಸೇವಿಸಿದ ಬಳಿಕ ಜನರು ಚಿತ್ರ ವಿಚಿತ್ರವಾಗಿ ವರ್ತಿಸುವುದನ್ನು ನೋಡಿರುತ್ತೇವೆ. ಆದರೆ ಚೀನಾದಲ್ಲಿ ಬಿಯರ್ ಕುಡಿದ ವ್ಯಕ್ತಿಯೊಬ್ಬ ತನ್ನ ವರ್ತನೆಯಿಂದ ಕೂದಲೆಳೆ ಅಂತರದಲಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿರುವ ಈತನಿಗೆ ಚಿಕಿತ್ಸೆ ಮುಂದುವರೆದಿದೆ.

ಬಿಯರ್ ಕುಡಿದು ಮೂತ್ರ ಹಿಡಿದಿಟ್ಟ 

ಲಭ್ಯವಾದ ಮಾಹಿತಿ ಅನ್ವಯ ಚೀನಾದ ಹೂ ಹೆಸರಿನ ನಲ್ವತ್ತು ವರ್ಷದ ವ್ಯಕ್ತಿ ಒಂದೇ ಬಾರಿ ಒಟ್ಟು ಹತ್ತು ಬಾಟಲ್ ಬಿಯರ್ ಕುಡಿದಿದ್ದಾನೆ. ಮೊದಲನೆಯದಾಗಿ ಈತ ಅಷ್ಟು ಪ್ರಮಾಣದ ಬಿಯರ್ ಸೇವಿಸಿದ್ದಾನೆ, ಎರಡನೆಯದ್ದಾಗಿ ಈತ ಬಲವಂತವಾಗಿ ಮೂತ್ರ ಹಿಡಿದಿಟ್ಟಿದ್ದಾನೆ. 

ಕುಡುಕರೇ ಎಚ್ಚರ: ಎಣ್ಣೆ ಗುಂಗಲ್ಲಿ ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ..!

ಸಾಮಾನ್ಯವಾಗಿ ಬಿಯರ್ ಕುಡಿದವರು ಪದದೇ ಪದೇ ಮೂರ್ತ ವಿಸರ್ಜನೆ ಮಾಡುತ್ತಾರೆ. ಹೀಗಿರುವಾಗ ಹೂಗೆ ಮೂರ್ತ ಹಿಡಿದಿಟ್ಟಿದ್ದು ಬಹಳ ದೊಡ್ಡ ಹಹೊಡೆತ ಕೊಟ್ಟಿದೆ. ಆತನ ಪರಿಸ್ಥೊತಿ ಅದೆಷ್ಟು ಹದಗೆಟ್ಟಿತು ಎಂದರೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆತನನ್ನು ಪರಿಶೀಲಿಸಿದಾಗ ಆತನ ಮೂತ್ರಕೋಶ ಒಡೆದು ಹೋಗಿರುವುದು ಬೆಳಕಿಗೆ ಬಂದಿದೆ.

ಅನೇಕ ಅಂಗಗಳಿಗೆ ಹಾನಿ

ಮತ್ತೊಂದು ವರದಿಯನ್ವಯ ಮೂತ್ರ ವಿಸತರ್ಜನೆ ತಡೆ ಹಿಡಿದ ಪರಿಣಾಮ ಹೂ ಆರೋಗ್ಯ ಅದೆಷ್ಟು ಕೆಟ್ಟಿದೆ ಎಂದರೆ ಅವಸರದಲ್ಲೇ ಆತನನ್ನು ಚೀನಾದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮೂತ್ರ ಹಿಡಿದಿಟ್ಟ ಪರಿಣಾಮ ಬಹಳಷ್ಟು ನೋವುಂಟಾಗಿತ್ತು. 

ಆಸ್ಪತ್ರೆಯಲ್ಲಿ ಆತನನ್ನು ಯುರಾಲಜಿ ವಿಭಾಗಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ಆರಂಭಿಸಲಾಗಿದೆ. ಇಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಆತನ ದೇಹದ ಅನೇಕ ಭಾಗಗಳಿಗೆ ಹಾನಿಯುಂಟಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ ಶಾಕಿಂಗ್ ವಿಚಾರವೆಂದರೆ ಆತನ ಮೂತ್ರಕೋಶವೇ ಒಡೆದು ಹೋಗಿತ್ತು. ಪ್ರಕರಣದ ಗಂಭೀರತೆ ಅರಿತ ವೈದ್ಯರು ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಆತನನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.

COVID-19 ಲಾಕ್‌ಡೌನ್; ಮಾಲೀಕನ ವಿನೂತನ ಐಡಿಯಾ, ಕುಡುಕರಿಗೆ ಮನೆಯಲ್ಲೇ ಸಿಗುತ್ತೆ ಬಾರ್ ಅನುಭವ!

ಮೂತ್ರಕೋಶ ಅತ್ಯಂತ ಸೂಕ್ಷ್ಮವಾದ ಅಂಗ, ಇದರಲ್ಲಿ ಕೇವಲಲಲ 350 ರಿಂದ 400 ಮಿಲಿ ಲೀಟರ್‌ ದ್ರವ ಹಿಡಿದಿಡುವ ಸಾಮರ್ಥ್ಯವಿರುತ್ತದೆ. ಹೆಚ್ಚು ಸಮಯ ಯಾರಾದರೂ ಮೂತ್ರ ವಿಸರ್ಜನೆ ಹಿಡಿದಿಟ್ಟರೆ ಇದಕ್ಕೆ ಹಾನಿಯಾಗುತ್ತದೆ ಎಂಬುವುದು ವೈದ್ಯರ ಮಾತಾಗಿದೆ.