ಈ ಪ್ರಪಂಚದಲ್ಲಿ ಎಂತೆಂತಾ  ಜನ ಇರ್ತಾರಪ್ಪ. ಹಲ್ಲಿ ತಿನ್ನುವವರನ್ನು, ಹುಳ ತಿನ್ನುವವರನ್ನು, ಹುಳೂ ಹುರಿದುಕೊಂಡು ತಿನ್ನುವವರನ್ನು ನೋಡಿದ್ದೇವೆ. ಆದರೆ ಇವನು ಅವರೆಲ್ಲರ ಮೀರಿ ಒಂದು ಕೈ ಮುಂದೆ ಹೋಗಿದ್ದಾನೆ. 

ಜೀವಂತ ಇರುವ ಇಲಿ ಮರಿಗಳನ್ನು ಕಚಕಚನೆ ಜಗಿದು ನುಂಗಿದ್ದಾನೆ. ಈತ ತಿನ್ನುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜತೆಗೆ ನಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಕೋಟೆ ಏರಿದ ಕೋತಿರಾಜ; ಲೈವ್ ವಿಡಿಯೋ

ಬಟ್ಟಲಿನ ಮುಂದೆ ಕುಳಿತುಕೊಂಡಿರುವ  ವ್ಯಕ್ತಿ ಇಲಿ ಮರಿಗಳನ್ನು ಇಟ್ಟುಕೊಂಡು ಕುಳಿತಿದ್ದಾನೆ. ಬಟ್ಟಲಿನಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುವ ಇಲಿ ಮರಿಗಳನ್ನು ಕಷ್ಟಪಟ್ಟು ಭಕ್ಷಿಸುತ್ತಾನೆ.

ಇಲಿಮರಿಯನ್ನು ಸಾಸ್ ನಲ್ಲಿ ಅದ್ದಿ ತಿನ್ನುವ ಪುಣ್ಯಾತ್ಮ ಅದು ಸಾಲದು ಎಂಬಂತೆ ಕೈಯಲ್ಲಿ ಮದ್ಯದ ಗ್ಲಾಸ್ ಬೇರೆ ಹಿಡಿದುಕೊಂಡಿದ್ದಾನೆ. ಇದು ಪಕ್ಕಾ ಚೀನಾದವರದ್ದೇ ಕೆಲಸ ಎಂಬುದು ಸದ್ಯದ ಸಂಶೋಧನೆಯ ಉತ್ತರ.