ಲಂಕೆಯಿಂದ ಓಡಿ ಹೋದ ಗೊಟಬಯಗೆ ನೋ ಎಂಟ್ರಿ ಎಂದ ಮಾಲ್ಡೀವ್ಸ್, ಒಂದು ಕರೆಯಿಂದ ಎಲ್ಲವೂ ಬದಲಾಯ್ತು!
* ಶ್ರೀಲಂಕಾದಿಂದ ಓಡಿಹೋದ ಅಧ್ಯಕ್ಷ ಗೊಟಬಯ ರಾಜಪಕ್ಸೆ
* ಮಾಲ್ಡೀವ್ಸ್ ತಲುಪಿದ ರಾಜಪಕ್ಸೆಗೆ ನೋ ಎಂಟ್ರಿ ಎಂದಿದ್ದ ಸರ್ಕಾರ
* ಆ ಒಂದು ಕರೆಯಿಂದ ಎಲ್ಲವೂ ಬದಲಾಯ್ತು
ಕೊಲಂಬೋ(ಜು.13): ತೀವ್ರ ರಾಜಕೀಯ-ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡದೆ ದೇಶವನ್ನು ತೊರೆದಿದ್ದಾರೆ. ಇದರಿಂದಾಗಿ ಅಲ್ಲಿ ಮತ್ತೆ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಈಗ ರಾಜಪಕ್ಸೆ ಅವರ ರಾಜೀನಾಮೆಯ ಸುದ್ದಿಯು ಶ್ರೀಲಂಕಾದಿಂದ ಹೊರಬರಲು ಬಳಸುತ್ತಿದ್ದ ಅವರ ಯೋಜನೆಯ ಭಾಗವಾಗಿದೆ ಎಂದು ತೋರುತ್ತದೆ. ಗೊಟಬಯ ರಾಜಪಕ್ಸೆ ಇಲ್ಲಿಯವರೆಗೆ ಏಕೆ ರಾಜೀನಾಮೆ ನೀಡಿಲ್ಲ ಎಂಬುದು ಕೂಡ ನಿಧಾನವಾಗಿ ಸ್ಪಷ್ಟವಾಗುತ್ತಿದೆ.
ತಡರಾತ್ರಿ ಗೊಟಬಯ ರಾಜಪಕ್ಸೆ ಅವರು ತಮ್ಮ ಪತ್ನಿ ಸೇರಿದಂತೆ ಕೆಲವು ಕುಟುಂಬ ಸದಸ್ಯರೊಂದಿಗೆ ಮಿಲಿಟರಿ ವಿಮಾನದಲ್ಲಿ ಮಾಲ್ಡೀವ್ಸ್ ತಲುಪಿದರು. ಶ್ರೀಲಂಕಾದ ಜನತೆ ಬೆಳಗ್ಗೆ ಎದ್ದಾಗ ಅಧ್ಯಕ್ಷರು ಏಕಾಏಕಿ ದೇಶ ತೊರೆದಿರುವುದು ಗೊತ್ತಾಯಿತು. ಪ್ರತಿಭಟನಾಕಾರರು ಕೂಡ ಅದನ್ನೇ ಬಯಸಿದ್ದರು. ಆದರೆ ಗೊಟಬಯ ರಾಜೀನಾಮೆ ನೀಡದೆ ಪಲಾಯನಗೈದಿರುವುದು ಇಲ್ಲಿ ಆತಂಕಕಾರಿ ಅಂಶವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನೂತನ ಅಧ್ಯಕ್ಷ ಹಾಗೂ ನೂತನ ಸರಕಾರ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತವಾದಂತಾಗಿತ್ತು.
ಶ್ರೀಲಂಕಾ ಅಧ್ಯಕ್ಷನ ದೇಶ ಬಿಡುವ ಸ್ಥಿತಿಗೆ ತಂದಿಟ್ಟ ಬೌದ್ಧ ಭಿಕ್ಷು, ಓಮಲ್ಪೆ ಸೋಬಿತಾ ಥೇರ ಯಾರು?
ಅಧ್ಯಕ್ಷ ಸ್ಥಾನವನ್ನು ಬಳಸಿ ಪಲಾಯನ?
ಗೊಟಬಯ ರಾಜಪಕ್ಸೆ ಇಲ್ಲಿಯವರೆಗೆ ಏಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂಬುವುದೂ ನಿಧಾನವಾಗಿ ಸ್ಪಷ್ಟವಾಗುತ್ತಿದೆ. ವಾಸ್ತವವಾಗಿ, ಗೊಟಬಯ ರಾಜಪಕ್ಸೆ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಆತಂಕವನ್ನು ಈಗಾಗಲೇ ವ್ಯಕ್ತಪಡಿಸಿದ್ದರು. ಅವರು ಶ್ರೀಲಂಕಾದಿಂದ ಸುರಕ್ಷಿತವಾಗಿ ಹೊರಬರಲು ಬಯಸಿದ್ದರು. ಆದರೆ ಅವರು ಅಧ್ಯಕ್ಷ ಸ್ಥಾನವನ್ನು ತೊರೆದಿದ್ದರೆ, ಬಹುಶಃ ಇದು ಸಾಧ್ಯವಾಗುತ್ತಿರಲಿಲ್ಲ.
ಇನ್ನು ಮಿಲಿಟರಿ ವಿಮಾನವು ಗೊಟಬಯ ರಾಜಪಕ್ಸೆಯನ್ನು ಮಾಲ್ಡೀವ್ಸ್‌ಗೆ ಇಳಿಸಿದಾಗ, ಶ್ರೀಲಂಕಾದ ವಾಯುಪಡೆಯ ಮೇಲೂ ಪ್ರಶ್ನೆಗಳು ಎದ್ದವು. ಇದಾದ ಬಳಿಕ ವಾಯುಪಡೆ ವಿವರಣೆ ನೀಡಬೇಕಿತ್ತು. ರಕ್ಷಣಾ ಸಚಿವಾಲಯದ ಆದೇಶದ ಮೇರೆಗೆ ಾಧ್ಯಕ್ಷರಿಗೆ ವಿಮಾನವನ್ನು ನೀಡಲಾಯಿತು ಎಂದು ವಾಯುಪಡೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಈಗಿನ ರಾಷ್ಟ್ರಪತಿಗಳಿಗೆ ಸಂವಿಧಾನದಲ್ಲಿರುವ ಕಾನೂನು ನಿಯಮಗಳ ಪ್ರಕಾರವೇ ವಿಮಾನ ನೀಡಲಾಗಿದೆ ಎಂದರು. ಅರ್ಥಾತ್ ಗೊಟಬಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಅಷ್ಟು ಸುಲಭವಾಗಿ ಈ ಸೌಲಭ್ಯ ಸಿಗುತ್ತಿರಲಿಲ್ಲ.
ಮಾಲ್ಡೀವಿಯನ್ ಸ್ಪೀಕರ್ ಮತ್ತು ಮಾಜಿ ಅಧ್ಯಕ್ಷರ ಸಹಾಯ
73 ವರ್ಷದ ಗೊಟಬಯ ರಾಜಪಕ್ಸೆ ಮಾಲ್ಡೀವ್ಸ್‌ಗೆ ಆಗಮಿಸಿದ ಬಳಿಕ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ರಾಜಪಕ್ಸೆ ಪ್ರಸ್ತುತ ಶ್ರೀಲಂಕಾದ ಅಧ್ಯಕ್ಷರಾಗಿದ್ದಾರೆ, ಅವರು ರಾಜೀನಾಮೆ ನೀಡಿಲ್ಲ ಎಂದು ಮಾಲ್ಡೀವ್ಸ್ ಸರ್ಕಾರದಿಂದ ಹೇಳಲಾಗಿದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಅವರು ಮಾಲ್ಡೀವ್ಸ್ಗೆ ಬರಲು ಬಯಸಿದರೆ, ನಿರಾಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಗೊಟಬಯ ಅವರೊಂದಿಗೆ ಒಟ್ಟು 13 ಮಂದಿ ಮಾಲ್ಡೀವ್ಸ್ ತಲುಪಿದ್ದಾರೆ. ಇವರೆಲ್ಲರೂ ವಾಯುಪಡೆಯ ಎಎನ್ 32 ವಿಮಾನದಲ್ಲಿ ಅಲ್ಲಿಗೆ ಬಂದರು.
Sri Lanka Crisis: ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ ಸಂಸತ್ತು ವಶಕ್ಕೆ; ಪ್ರತಿಟಭನಾಕಾರರ ಬೆದರಿಕೆ
ಶ್ರೀಲಂಕಾದ ಸೇನಾ ವಿಮಾನವು ಮಾಲ್ಡೀವ್ಸ್‌ಗೆ ತಲುಪಿದಾಗ, ಮಾಲ್ಡೀವ್ಸ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರವು ಅಲ್ಲಿ ಇಳಿಯಲು ಅನುಮತಿಸಲಿಲ್ಲ. ನಂತರ ಸ್ಪೀಕರ್ ನಶೀದ್ ಅವರ ಆದೇಶದ ಮೇರೆಗೆ ವಿಮಾನವನ್ನು ಅಲ್ಲಿ ಇಳಿಸಲು ಅವಕಾಶ ನೀಡಲಾಯಿತು.
ಇದರ ನಂತರ, ಶ್ರೀಲಂಕಾ ಅಧ್ಯಕ್ಷರಿಗೆ ಸರ್ಕಾರ ಯಾಕೆ ಆಶ್ರಯ ನೀಡಿದೆ ಎಂಬುದನ್ನು ವಿವರಿಸಲು ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ನೀಡುವುದಾಗಿ ಮಾಲ್ಡೀವ್ಸ್ ನ್ಯಾಷನಲ್ ಪಾರ್ಟಿಯ ಸಂಸದೀಯ ಗುಂಪು ಹೇಳಿದೆ.
ಗೊಟಬಯಗೆ ಸಾಮಾನ್ಯ ವಿಮಾನದಲ್ಲಿ ಹೋಗಲು ಸಾಧ್ಯವಾಗಲಿಲ್ಲ
ಸೋಮವಾರದಂದು ಸಂಜೆ 6:25ರ ಸುಮಾರಿಗೆ ಅಧ್ಯಕ್ಷರು ಮತ್ತು ಅವರ ಕುಟುಂಬದ 15 ಜನರು ದುಬೈಗೆ ಹೋಗಲು ಪ್ರಯತ್ನಿಸಿದರು. ಇದಕ್ಕಾಗಿ ಗೊಟಬಯ ಅವರ ಕೆಲವು ಸಹಚರರು 15 ಪಾಸ್‌ಪೋರ್ಟ್‌ಗಳೊಂದಿಗೆ ವಿಮಾನ ನಿಲ್ದಾಣವನ್ನು ತಲುಪಿದ್ದರು. ಅದರಲ್ಲಿ ಅವರ ಪತ್ನಿ ಅಯೋಮಾ ರಾಜಪಕ್ಸೆ ಅವರ ಪಾಸ್‌ಪೋರ್ಟ್ ಕೂಡ ಇತ್ತು. ದುಬೈ ವಿಮಾನದಲ್ಲಿ ಸೀಟು ಕೂಡ ಬುಕ್ ಆಗಿತ್ತು. ಆದರೆ ಆ ಸಮಯದಲ್ಲಿ ಅವರಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಪ್ರಕ್ರಿಯೆಗೆ ವಲಸೆ ಅಧಿಕಾರಿ ನಿರಾಕರಿಸಿದರು. ನಂತರ ಅಧ್ಯಕ್ಷರು ಮತ್ತು ಅವರ ಕುಟುಂಬದೊಂದಿಗೆ ವಿಮಾನ ಹಾರಾಟ ನಡೆಸಿತು. ಇದಾದ ಬಳಿಕ ದೇಶ ತೊರೆಯಲು ಸೇನಾ ವಿಮಾನ ಬಳಸಲಾಯಿತು.
ಗೊಟಬಯ ಅವರು ತಮ್ಮ ಕೊನೆಯ ತಾಣವನ್ನು ತಲುಪಿದ ನಂತರವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಮಾಲ್ಡೀವ್ಸ್‌ನಿಂದ ದಕ್ಷಿಣ ಏಷ್ಯಾದ ಯಾವುದೋ ದೇಶಕ್ಕೆ ಹೋಗುತ್ತಾರೆ. ಅಲ್ಲಿಂದ ಎಲ್ಲಿಗೆ ಹೋಗುತ್ತಾರೆ ಈ ಬಗ್ಗೆ ಇನ್ನೂ ಏನೂ ಸ್ಪಷ್ಟವಾಗಿಲ್ಲ.