ಕೊರೋನಾ ಬಂದು ಸ್ವಲ್ಪ ಕಡಿಮೆಯಾದ ಮೇಲೆ ಅತ್ಯಧಿಕ ಪ್ರವಾಸಿಗರನ್ನು ಸೆಳೆದ ಸ್ಥಳ ಮಾಲ್ಡೀವ್ಸ್. ಬಾಲಿವುಡ್‌ ಮಂದಿಯಂತೂ ಅದೇ ತವರು ಮನೆ ಎಂಬಂತೆ ಒಬ್ಬರ ಹಿಂದೊಬ್ಬರು ಹೋಗಿ ರಿಲ್ಯಾಕ್ಸ್ ಆಗಿ ಬಂದರು.

ಬಾಲಿವುಡ್‌ ಮಂದಿ ಮಾಲ್ಡೀವ್ಸ್‌ಗೆ ಹೋಗೋದರ ಜೊತೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಮಾಲ್ಡೀವ್ಸ್‌ನಲ ಮರಳು, ನೀರಿನಲ್ಲಿ ಮಿಂದೆದ್ದು ಬಂದದ್ದಾಯ್ತು. ರಾಕಿಂಗ್ ಸ್ಟಾರ್ ರಾಧಿಕಾ ಮತ್ತು ಇಬ್ಬರು ಮುದ್ದು ಮಕ್ಕಳ ಜೊತೆ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿದ ಫೋಟೋಸ್ ಶೇರ್ ಮಾಡಿಕೊಂಡಿದ್ದರು.

ಅಭಿಮಾನಿಗಳ ಅದೊಂದು ಬೇಡಿಕೆಗೆ ಮಾಲ್ಡೀವ್ಸ್‌ನಿಂದಲೇ ಸ್ಪಂದಿಸಿದ ಯಶ್ ಕುಟುಂಬ

ಆದ್ರೆ ಇದೀಗ ದಿಢೀರ್ ಆಗಿ ಮಾಲ್ಡೀವ್ಸ್‌ನಲ್ಲಿ ಕೊರೋನಾ ಕಾರಣಗಳಿಂದ ಮತ್ತೆ ಲಾಕ್‌ಡೌನ್ ಹೇರಳು ತೀರ್ಮಾನ ಮಾಡಲಾಗಿದೆ. ಕೊರೋನಾ ಕೇಸ್‌ಗಳು ಹೆಚ್ಚಾದ ಕಾರಣ ಕರ್ಫ್ಯೂ ಹೇರುತ್ತಿರುವುದಾಗಿ ಮಾಲ್ಡೀವ್ಸ್ ಆರೋಗ್ಯ ರಕ್ಷಣಾ ಏಜೆನ್ಸಿ ತಿಳಿಸಿದೆ.

ಮಧ್ಯರಾತ್ರಿ ಮತ್ತು ಬೆಳಗ್ಗೆ 4 ಗಂಟೆಯ ಒಳಗೆ ಕರ್ಫ್ಯೂ ಇರಲಿದೆ. ವಿದೇಶದಿಂದ ಬಂದವರಿಗೂ, ಬೇರೆ ಐಲ್ಯಾಂಡ್‌ನಿಂದ ಬಂದವರಿಗೂ 10 ದಿನದ ಕ್ವಾರೆಂಟೈನ್ ವಿಧಿಸಲೂ ತೀರ್ಮಾನಿಸಲಾಗಿದೆ. ಮಾಲ್ಡೀವ್ಸ್‌ನಲ್ಲಿ ಸದ್ಯ ದಿನಕ್ಕೆ 100 ಕೇಸುಗಳು ದೃಢಪಡುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 15247 ಇದೆ.