Asianet Suvarna News Asianet Suvarna News

Maldives Fire: ಮಾಲೆ ಲಾಡ್ಜ್‌ನಲ್ಲಿ ಬೆಂಕಿ 9 ಭಾರತೀಯರು ಸೇರಿದಂತೆ 10 ಮಂದಿ ಬಲಿ!

ಬೆಂಕಿಯಿಂದ ಹಾನಿಗೀಡಾಗಿರುವ ವಸತಿಗೃಹದ ಮೇಲಿನ ಮಹಡಿಗಳಿಂದ ಈವರೆಗೂ 10 ಶವವನ್ನು ಹೊರತೆಗೆಯಲಾಗಿದೆ. ನೆಲಸಂತಸ್ತಿನಲ್ಲಿದ್ದ ಗ್ಯಾರೇಜ್‌ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಇದು ಇಕ್ಕಟ್ಟಾದ ವಸತಿ ಸಮುಚ್ಛಯದ ಮೇಲಿನ ಮಹಡಿಗಳಿಗೆ ವ್ಯಾಪಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Maldives Fire Male lodgings Indian workers among feared dead san
Author
First Published Nov 10, 2022, 12:46 PM IST

ಮಾಲೆ (ನ.10): ಮಾಲ್ಡೀವ್ಸ್‌ ದೇಶದ ರಾಜಧಾನಿ ಮಾಲೆಯಲ್ಲಿ ವಿದೇಶಿ ಉದ್ಯೋಗಿಗಳು ಉಳಿದುಕೊಂಡ ವಸತಿಗೃಹದ ಸಮುಚ್ಛಯದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು,  9 ಮಂದಿ ಭಾರತೀಯರು ಸೇರಿದಂತೆ ಈವರೆಗೂ 10 ಮಂದಿ ಸಾವು ಕಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಸೇವೆ ಗುರುವಾರ ತಿಳಿಸಿದೆ. ಈ ಘಟನೆಯಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ಕೂಡ ವರದಿ ಮಾಡಿದೆ. ವಸತಿ ಸಮುಚ್ಛಯದ ಮೇಲಿನ ಮಹಡಿಗಳಿಂದ ಈವರೆಗೂ 10 ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಟ್ಟಡದ ನೆಲ ಸಂತಸ್ತಿನಲ್ಲಿ ವಾಹನ ರಿಪೇರಿಯ ಗ್ಯಾರೇಜ್‌ ಇದೆ. ಇಲ್ಲಿಯೇ ಮೊದಲು ಬೆಂಕಿ ಕಾಣಿಸಿಕೊಂಡು ಬಳಿಕ ಅದರು ಮಹಡಿಗಳಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಪ್ರಕಾರ, 10 ಮೃತದೇಹಗಳಲ್ಲಿ 9 ಮಂದಿ ಭಾರತೀಯರಾಗಿದ್ದರೆ, ಒಬ್ಬ ವ್ಯಕ್ತಿ ಬಾಂಗ್ಲಾದೇಶದ ಪ್ರಜೆ ಆಗಿದ್ದಾನೆ ಎಂದಿದ್ದಾರೆ. 'ನಾವು ಈವರೆಗೂ 10 ಶವಗಳನ್ನು ಹೊರತೆಗೆದಿದ್ದೇವೆ' ಎಂದು ಅಗ್ನಿಶಾಮಕ ದಳದ ಅಧಿಕಾರಿ ಎಎಫ್‌ಪಿಗೆ ತಿಳಿಸಿದ್ದು, ಅಂದಾಜು ನಾಲ್ಕು ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲು ಹೋರಾಟ ನಡೆಸಿದ್ದೇವೆ ಎಂದಿದ್ದಾರೆ. ಪ್ರಸ್ತುತ ಬೆಂಕಿಯನ್ನು ಶಮನ ಮಾಡಲು ಸಿಬ್ಬಂದಿ ಯಶಸ್ವಿಯಾಗಿದೆ.

ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಾಂಡ್ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.“ಮಾಲೆಯಲ್ಲಿ ಸಂಭವಿಸಿದ ದುರಂತ ಬೆಂಕಿ ಘಟನೆಯಿಂದ ನಾವು ಭಾರತೀಯ ಪ್ರಜೆಗಳು ಸೇರಿದಂತೆ ಜೀವ ಹಾನಿಗೆ ಕಾರಣವಾಗಿದೆ. ಇದರಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ನಾವು ಮಾಲ್ಡೀವಿಯನ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ' ಎಂದು ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಪ್ರಕಟ ಮಾಡಿರುವ ಹೇಳಿಕೆಯಲ್ಲಿ ಭಾರತೀಯ ಹೈ ಕಮಾಂಡ್‌, ಹೆಲ್ಪ್‌ಲೈನ್‌ ನಂಬರ್‌ಗಳನ್ನು ಕೂಡ ಪ್ರಕಟಿಸಿದೆ.

Delhi Narela Footwear Factory: 100 ಜನ ಕಾರ್ಮಿಕರಿದ್ದ ದೆಹಲಿ ಕಾರ್ಖಾನೆಯಲ್ಲಿ ಭಾರಿ ಬೆಂಕಿ ದುರಂತ!

ಇನ್ನೊಂಡೆದೆ ರಾಜಧಾನಿ ಮಾಲೆಯಲ್ಲಿ ನಡೆದಿರುವ ಘಟನೆಗೆ ಮಾಲ್ಡಿವ್ಸ್‌ನ ವಿರೋಧ ಪಕ್ಷಗಳು, ಇಲ್ಲಿನ ವಿದೇಶಿ ಉದ್ಯೋಗಿಗಳ ಪರಿಸ್ಥಿತಿಗಳ ಬಗ್ಗೆ ಸರ್ಕಾರವನ್ನು ಟೀಕಿಸಿವೆ. ಮಾಲ್ಡೀವ್ಸ್‌ನಲ್ಲಿ ಅಂದಾಜು 2.50 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಹೆಚ್ಚಿನವರು ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶದವರಾಗಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕದ ಸಮಯದಲ್ಲಿಯೂ ಮಾಲ್ಡೀವ್ಸ್‌ನಲ್ಲಿರುವ ವಿದೇಶಿ ಉದ್ಯೋಗಿಗಳ ಕೆಟ್ಟ ಜೀವನಸ್ಥಿತಿಯ ಬಗ್ಗೆ ಟೀಕೆ ಮಾಡಲಾಗಿತ್ತು. ಸ್ಥಳೀಯ ಜನಗಳಿಗೆ ಹೋಲಿಸಿದರೆ, ವಿದೇಶಿ ಪ್ರಜೆಗಳು ವಾಸವಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತಿತ್ತು.

ಸ್ಟಂಟ್ ಮಾಡುವ ವೇಳೆ ಗಡ್ಡಕ್ಕೆ ಹತ್ತಿಕೊಂಡ ಬೆಂಕಿ: ವಿಡಿಯೋ ವೈರಲ್

ದ್ವೀಪಸಮೂಹದ ರಾಜಧಾನಿಯು ಉನ್ನತ ಮಾರುಕಟ್ಟೆಯ ರಜಾ ತಾಣವೆಂದು ಪ್ರಸಿದ್ಧವಾಗಿದೆ, ಇದು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಬಹುದು ಎನ್ನುವ ಆತಂಕವೂ ಇದೆ ಎಂದು ಹೇಳಲಾಗಿದೆ.
 

Follow Us:
Download App:
  • android
  • ios