ತಮಿಳುನಾಡು ಕ್ಷೌರಿಕನ 13 ವರ್ಷದ ಮಗಳು ವಿಶ್ವಸಂಸ್ಥೆ ರಾಯಭಾರಿ!

ತ.ನಾಡು ಕ್ಷೌರಿಕನ ಮಗಳು ವಿಶ್ವಸಂಸ್ಥೆ ರಾಯಭಾರಿ!| ಲಾಕ್‌ಡೌನ್‌ ವೇಳೆ ಬಡವರ ಸೇವೆ ಮಾಡಿದ್ದಳು| ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಸಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಈಕೆ ಭಾಷಣ

Madurai girl appointed UN goodwill ambassador for corona relief activity

ಚೆನ್ನೈ(ಜೂ.06): ಸಮಾಜಸೇವೆ ಮಾಡುತ್ತಿರುವ ತಮಿಳುನಾಡಿನ ಮದುರೈನ ಕ್ಷೌರಿಕರೊಬ್ಬರ 13 ವರ್ಷದ ಮಗಳು ಬಡವರಿಗಾಗಿ ‘ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ’ ಆಗಿ ನೇಮಕಗೊಂಡಿದ್ದಾಳೆ.

ಕ್ಷೌರಿಕ ಸಿ. ಮೋಹನ್‌ ಅವರ ಪುತ್ರಿ ಎಂ. ನೇತ್ರಾ ಈ ಸಾಧನೆ ಮಾಡಿದಾಕೆ. ಈಕೆಯನ್ನು ವಿಶ್ವಸಂಸ್ಥೆಯ ವಿಭಾಗವಾದ ‘ಶಾಂತಿ ಹಾಗೂ ಅಭಿವೃದ್ಧಿ ಕುರಿತಾದ ವಿಸ್ವಸಂಸ್ಥೆ ಅಸೋಸಿಯೇಷನ್‌’, ಗುರುತಿಸಿ ಆಯ್ಕೆ ಮಾಡಿದೆ. ಇದರೊಂದಿಗೆ ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಸಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಈಕೆ ಭಾಷಣ ಮಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾಳೆ. ಈಕೆಗೆ 1 ಲಕ್ಷ ರು. ಶಿಷ್ಯವೇತನ ಸಿಗಲಿದೆ.

ಕೊರೋನಾ ಕಾಟಕ್ಕೆ ಬಳಲಿ ಬೆಂಡಾದ ಕ್ಷೌರಿಕರು: ಸಲೂನ್‌ನತ್ತ ಮುಖಮಾಡದ ಜನ..!

ಈಕೆಯ ಸೇವೆ ಏನು?:

ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದವರ ನೆರವಿಗೆ ಬಂದಿದ್ದ ನೇತ್ರಾ ಧಾವಿಸಿದ್ದಳು. ಈಕೆಯ ತಂದೆ ಮೋಹನ್‌ ತಮ್ಮ ಪುತ್ರಿಗಾಗಿ ಕೂಡಿಟ್ಟಿದ್ದ 5 ಲಕ್ಷ ರು. ಉಳಿತಾಯ ಹಣವನ್ನು 600 ಕುಟುಂಬಗಳಿಗೆ ದಿನಸಿ ಹಂಚಲು ಬಳಸಿದ್ದರು. ಇದನ್ನು ತಮ್ಮ ಮನ್‌ ಕೀ ಬಾತ್‌ ರೇಡಿಯೋ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Latest Videos
Follow Us:
Download App:
  • android
  • ios