Macron attacks Trump ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ದಂಗೆಗೆ ವಲಸಿಗರೇ ಕಾರಣ ಮತ್ತು ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ತಳ್ಳಿಹಾಕಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್, ಗಲಭೆಯ ದೃಶ್ಯಗಳು ಎಐ ಸೃಷ್ಟಿ ಎಂದಿದ್ದಾರೆ.

ವಾಷಿಂಗ್ಟನ್‌ (ಅ.22): ‘ಫ್ರಾನ್ಸ್‌ನಲ್ಲಿನ ದಂಗೆಗೆ ವಲಸಿಗರು ಕಾರಣ. ಪ್ಯಾರಿಸ್‌ ಶೀಘ್ರ ಮುಸ್ಲಿಂ ನಗರ ಆಗಲಿದೆ. ದೇಶದ ಗಡಿ ಮುಚ್ಚಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫ್ರಾನ್ಸ್ ವಿರುದ್ಧ ಕಿಡಿಕಾರಿದ್ದಾರೆ.

ದೇಶದಲ್ಲಿ ಕಳೆದ ಕೆಲವು ದಿನದಿಂದ ನಡೆಯುತ್ತಿರುವ ಜೆನ್‌ಝೀ ಹಾಗೂ ಜನತಾ ದಂಗೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಟ್ರಂಪ್‌, ‘ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಸಂಪೂರ್ಣ ವಿಭಿನ್ನವಾದ ವಿಶ್ವದ ಭಾಗಗಳಿಂದ ಬಂದ, ಹೃದಯದ ತುಂಬಾ ದ್ವೇಷವನ್ನೇ ತುಂಬಿಕೊಂಡ ವಲಸಿಗರು, ಒಂದೊಮ್ಮೆ ಅದ್ಭುತ ದೇಶವಾಗಿದ್ದ ಫ್ರಾನ್ಸ್‌ ಅನ್ನು ಧ್ವಂಸಗೊಳಿಸಿದ್ದಾರೆ. ಈಗಾಲಾದರೂ ನಿಮ್ಮ ದೇಶದ ಗಡಿ ಭಾಗವನ್ನು ಮುಚ್ಚಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ. ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ’ ಎಂದರು.

‘ಬಹಳ ಹಿಂದೆ, ನೀವು ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ನೀವು ಜಗತ್ತಿನ ಎಲ್ಲರನ್ನೂ ಒಳಗೆ ಬರಲು ಬಿಡುತ್ತಿದ್ದೀರಿ. ಎಂದು ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ಗೆ ಹೇಳಿದ್ದೆ’ ಎಂದು ಸ್ಮರಿಸಿದ ಟ್ರಂಪ್‌, ‘ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮುಸ್ಲಿಂ ದೇಶದ ಟ್ರಂಪ್ ಹೇಳಿಕೆ ಸ್ಟುಪಿಡ್ ಎಂದ ಮ್ಯಾಕ್ರಾನ್!

ಫ್ರಾನ್ಸ್ ಮುಸ್ಲಿಂ ನಗರವಾಗಲಿದೆ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಗೆ ಮ್ಯಾಕ್ರಾನ್ ಕಿಡಿಕಾರಿದ್ದು, ಇದೊಂದು ಸ್ಟುಪಿಡ್ ಹೇಳಿಕೆ ಎಂದಿದ್ದಾರೆ. ಅಲ್ಲದೆ ಫ್ರಾನ್ಸ್‌ನಲ್ಲಿ ಗಲಭೆಗಳು ಮಾಧ್ಯಮಗಳಲ್ಲಿ ತೋರಿಸಿದಂತೆ ಆಗಿಲ್ಲ ಅವೆಲ್ಲವೂ ಎಐ ಸೃಷ್ಟಿ. ಫ್ರಾನ್ಸ್ ಗೆ ಮಸಿ ಬಳಿಯಲು ವಿದೇಶಿ ಶಕ್ತಿಗಳು ಎಐ ವಿಡಿಯೋ ಸೃಷ್ಟಿಸಿ ಹರಿಬಿಡುತ್ತಿದ್ದಾರೆ ಎಂದಿದ್ದಾರೆ.

ಹಾಗಾದರೆ 2500ಕ್ಕೂ ಜನರ ಬಂಧನ ಹೇಗಾಯ್ತು?

ಫ್ರಾನ್ಸ್‌ಗೆ ಮುಸ್ಲಿಂ ವಲಸಿಗರ ಹಿಂಡುಗಳ ಆಕ್ರಮಣವಾಗಿಲ್ಲ, ಆ ಚಿತ್ರಗಳು ಸುಳ್ಳು, ಎಐ ಮತ್ತು ವಿದೇಶಿ ಕುತಂತ್ರ ಅಂತ ಹೇಳಿದ್ದಾನೆ.

ಫ್ರಾನ್ಸ್‌ನಲ್ಲಿ ಕಳೆದ ವಾರಾಂತ್ಯದಲ್ಲಿ ಜೀವನದ ವೆಚ್ಚದ ವಿರುದ್ಧ ಪ್ರತಿಭಟನೆಗಳು ಗಲಭೆ ಲೂಟಿಗೆ ತಿರುಗಿದ್ದವು. ಎರಡೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ಫ್ರಾನ್ಸ್ ಪೊಲೀಸರು ಅಧಿಕೃತವಾಗಿ ಹೇಳಿರುವಾಗ ಇದನ್ನ ಎಐ ಸೃಷ್ಟಿ ಎನ್ನಲಾಗುತ್ತಾ? ಆದರೆ ಮ್ಯಾಕ್ರಾನ್ ಎಲ್ಲವನ್ನೂ ಎಐ ಚಿತ್ರಗಳು ಮತ್ತು ವಿದೇಶಿ ಹಸ್ತಕ್ಷೇಪ ಅಂತ ಕರೆದು ತಪ್ಪಿಸಿಕೊಳ್ಳುತ್ತಿದ್ದಾರಾ? ಅಥವಾ ಮುಂದಿನ ಚುನಾವಣೆಗಾಗಿ ಇದರಲ್ಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾನಾ? ಎಂಬ ಅನುಮಾನ ಮೂಡಿದೆ. ಟ್ರಂಪ್ ಮತ್ತು ಕೆಲವರು ವಲಸೆ ಮತ್ತು ಇಸ್ಲಾಮಿಸ್ಟ್‌ಗಳನ್ನು ದೂಷಿಸಿದ್ದಾರೆ. ಆದರೆ ಇದನ್ನೆಲ್ಲ ಮ್ಯಾಕ್ರಾನ್ ಮೂರ್ಖತನದ ಹೇಳಿಕೆ ಎಂದು ಕರೆದಿದ್ದಾನೆ.

ನಿಜವಾಗಿಯೂ ಎಐ ಚಿತ್ರಗಳು ಇದ್ದವಾ?

ಫ್ರಾನ್ಸ್ ಹಿಂಸಾಚಾರದಲ್ಲಿ ಎಐ ವಿಡಿಯೋಗಳು ಸೃಷ್ಟಿಯಾಗಿರೋದು ನಿಜ ಉದಾಹರಣಗೆ ಎಫೆಲ್ ಟವರ್ ಮೇಲೆ ಪ್ಯಾಲೆಸ್ತಿನ್ ಧ್ವಜ ಹಾರಿಸಿರೋದು ಎಐ ಸೃಷ್ಟಿ. ಹಾಗಾಂತ ಫ್ರಾನ್ಸ್‌ನಲ್ಲಿ ಹಿಂಸಾಚಾರ ನಡೆದಿಲ್ಲ ಎಂಬ ಮ್ಯಾಕ್ರಾನ್ ಹೇಳಿಕೆ ಸಂಪೂರ್ಣ ಸುಳ್ಳು. ಏಕೆಂದರೆ ದಂಗೆ ಹಿಂಸಾಚಾರ ಲೂಟಿ ಮಾಡುವ ಲೈವ್ ವಿಡಿಯೋಗಳೇ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವಾಗ ಮ್ಯಾಕ್ರಾನ್ ಹೇಳಿಕೆಯನ್ನ ಜಗತ್ತು ನಂಬುತ್ತದೆಯೇ? ಮ್ಯಾಕ್ರಾನ್ ಹೇಳಿಕೆ ಬಳಿಕ ನೆಟಿಜನ್ ಕಿಡಿಕಾರಿದ್ದಲ್ಲದೆ ಇದು ಮತಬ್ಯಾಂಕ್ ರಾಜಕಾರಣದ ಪರಮಾವಧಿ, ಫ್ರಾನ್ಸ್ ನಾಗರಿಕರನ್ನ ದೇವರೇ ಕಾಪಾಡಬೇಕು. ಏಕೆಂದರೆ ಮ್ಯಾಕ್ರಾನ್‌ನ ಮಾತು ನಂಬುವಷ್ಟು ಅವರು ಮುಗ್ಧರು ಎಂದಿದ್ದಾರೆ.

Scroll to load tweet…