ಲೈವ್‌ಸ್ಟ್ರೀಮ್, ಹೆಚ್ಚು ವೀಕ್ಷಣೆ, ಲೈಕ್ಸ್ ಈ ಮೂಲಕ ಆದಾಯ ಬಯಸಿದ್ದ ತಾಯಿಯ ಹುಚ್ಚುತನಕ್ಕೆ ಇದೀಗ ಇಬ್ಬರು ಮಕ್ಕಳು ಅನಾಥವಾಗಿದ್ದು ಮಾತ್ರವಲ್ಲ, ಭವಿಷ್ಯವೇ ಅತಂತ್ರವಾಗಿದೆ.
ಗೌಂಗ್ಸಿ (ಜು.13) ಯೂಟ್ಯೂಬ್ ಚಾನೆಲ್ ಆರಂಭಿಸಿ ಆದಾಯ ಪಡೆಯಲು ಬಯಸುತ್ತಿರುವವ ಸಂಖ್ಯೆ ದೊಡ್ಡದಿದೆ. ಇದರಲ್ಲಿ ಹಲವರು ಯಶಸ್ವಿಯಾಗಿದ್ದಾರೆ. ಮತ್ತೆ ಒಂದಷ್ಟು ಮಂದಿ ನಷ್ಟ ಅನುಭವಿಸಿದ್ದಾರೆ. ಸತತ ಪರಿಶ್ರಮ, ತಾಳ್ಮೆ, ಆದಾಯ ಬರುವವರೆಗೆ ಕಾಯುವ ಸಾಮರ್ಥ್ಯವಿದ್ದರು ಗೆಲ್ಲುತ್ತಾರೆ. ಹೀಗೆ ತಾಯಿಯೊಬ್ಬಳು ತನಗೆ ಸಂಬಂಧವಿಲ್ಲ, ಹೆಚ್ಚಿನ ಮಾಹಿತಿ, ತಾಂತ್ರಿಕ ಪರಿಜ್ಞಾನವಿಲ್ಲದೆ ಲೈವ್‌ಸ್ಟ್ರೀಮ್ ಕೆಲಸಕ್ಕೆ ಕೈಹಾಕಿದ್ದಾಳೆ. ಲೈವ್‌ಸ್ಟ್ರೀಮ್ ಮೂಲಕ ಹಲವು ತಜ್ಞರನ್ನು ಕರೆಯಿಸಿ ಟಿಪ್ಸ್ ನೀಡಿದ್ದಾಳೆ. ಆದರೆ ಆದಾಯ ಮಾತ್ರ ಬರಲೇ ಇಲ್ಲ. ಇತ್ತ ತಜ್ಞರಿಗೆ ಪ್ರತಿ ಶೋಗೆ ಹಣ ನೀಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ ಮಹಿಳೆ ತನ್ನ ಇಬ್ಬರು ಮಕ್ಕಳು ಮಾರಾಟ ಮಾಡಿದ ಘಟನೆ ದಕ್ಷಿಣ ಚೀನಾದ ಗಾಂಗ್ಸಿ ಪ್ರಾಂತ್ಯದಲ್ಲಿ ನಡೆದಿದೆ.
ಲೈವ್‌ಸ್ಟ್ರೀಮ್ ಆರಂಭಿಸಿ ಕೈಸುಟ್ಟುಕೊಂಡ ಮಹಿಳೆ
26 ವರ್ಷದ ಈ ಮಹಿಳೆ ಕೇವಲ ಪ್ರಾಥಮಿಕ ಶಿಕ್ಷಣ ಪಡೆದಿದ್ದಾಳೆ. ಆದರೆ ಯಾವುದೇ ಕೆಲಸದ ಕೌಶಲ್ಯ ತಿಳಿದಿಲ್ಲ. ಇದರ ನಡುವೆ ಮಗನಿಗೆ ಜನ್ಮ ನೀಡಿದ್ದಾಳೆ. ಎಲ್ಲರು ಯೂಟ್ಯೂಬ್ ಮೂಲಕ, ಲೈವ್ ಸ್ಟ್ರೀಮ್ ಮೂಲಕ ಹಣ ಗಳಿಸಲು ಮುಂದಾಗಿದ್ದಾಳೆ. ಸಾಲ ಮಾಡಿದ ಲೈವ್‌ಸ್ಟ್ರೀಮ್ ಆರಂಭಿಸಿದ್ದಾಳೆ. ಪ್ರತಿ ದಿನ ಹಲವು ತಜ್ಞರ ಕರೆಯಿಸಿ ಲೈವ್‌ಸ್ಟ್ರೀಮ್ ಮಾಡಿದ್ದಾಳೆ. ಪ್ರತಿ ಶೋಗೆ ಇಂತಿಷ್ಟು ಹಣವನ್ನು ತಜ್ಞರಿಗೆ ನೀಡಲು ಆರಂಭಿಸಿದ್ದಾಳೆ. ಆದರೆ ಖರ್ಚು ಮಾಡಿದ ರೀತಿಯ ಆದಾಯ ಮಾತ್ರ ಬರಲೇ ಇಲ್ಲ. ಆರ್ಥಿಕ ಸಂಕಷ್ಟ ಹೆಚ್ಚಾಯಿತು. ದಿನ ದೂಡುವುದು ಅಸಾಧ್ಯವಾಯಿತು. ಹೀಗಾಗಿ ಮಗನ ಮಾರಾಟ ಮಾಡಲು ಮುಂದಾಗಿದ್ದಾಳೆ.
ಮಹಿಳೆಗೆ ಮಗುವಿನ ತಂದೆ ಕುರಿತು ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಇಷ್ಟೇ ಅಲ್ಲ ಕುಟುಂಬದಿಂದ ದೂರ ಉಳಿದಿದ್ದ ಈಕೆ ಕೊನೆಗೆ ತನ್ನ ಮಗುವನ್ನು 6,300 ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದಳು. ಈ ಹಣವನ್ನು ಮತ್ತೆ ಲೈವ್‌ಸ್ಟ್ರೀಮ್‌ಗೆ ಹೂಡಿಕೆ ಮಾಡಿದ್ದಾಳೆ. ಹಳೇ ಬಾಕಿ ಮೊತ್ತವನ್ನು ಪಾವತಿ ಮಾಡಿ ಮಹಿಳೆ ಮತ್ತೆ ಲೈವ್‌ಸ್ಟ್ರೀಮ್ ಆರಂಭಿಸಿದ್ದಾಳೆ. 2020ರಲ್ಲಿ ತನ್ನ ಮೊದಲ ಮಗು ಮಾರಾಟ ಮಾಡಿದ ಬಳಿಕ ಲೈವ್ ಸ್ಟ್ರೀಮ್ ಜೊತೆಗೆ ಒಂದಿಷ್ಟು ಬೇರೆ ಕೆಲಸಗಳನ್ನು ಮಾಡಿದ್ದಾಳೆ. ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾಳೆ.
ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದ್ದಂತೆ ಉದ್ದೇಶಪೂರ್ವಕವಾಗಿ ಬಾಯ್‌ಫ್ರೆಂಡ್ ಮಾಡಿಕೊಂಡ ಈಕೆ ಗರ್ಭಿಣಿಯಾಗಿದ್ದಾಳೆ. 2022ರಲ್ಲಿ 2ನೇ ಮಗುವಿಗೆ ಜನ್ಮ ನೀಡಿದ ಆಕೆ, 14,000 ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದಾಳೆ. ಈ ಹಣವನ್ನೂ ಈಕೆ ಲೈವ್ ಸ್ಟ್ರೀಮ್‌ಗಗೆ ಹೂಡಿಕೆ ಮಾಡಿದ್ದಾಳೆ. ಕಳೆದ ಹಲವು ವರ್ಷಗಳಿಂದ ಈಕೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಇದೀಗ ಮಹಿಳೆ ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಇದೀಗ ಮಹಿಳೆ ಜೈಲು ಸೇರಿದ್ದರೆ, ಇತ್ತ ಇಬ್ಬರು ಮಕ್ಕಳು ಆಶ್ರಯ ಕೇಂದ್ರದಲ್ಲಿದ್ದಾರೆ. ಇದೀಗ ಮಕ್ಕಳಿಗೆ ಅತ್ತ ತಾಯಿಯೂ ಇಲ್ಲ ಇತ್ತ ಯಾರೂ ಇಲ್ಲದ ಸಿಗದಂತಾಗಿದೆ.
