ನವದೆಹಲಿ(ಎ.02): ಚಿತ್ರದಲ್ಲಿ ಮಾತ್ರ ನೋಡಿದ್ದ ರೈಲನ್ನು ಮೊದಲ ಬಾರಿಗೆ ನೋಡಿದ ಪುಟಾಣಿ ಬಾಲಕಿ ಸಂಭ್ರಮ ಹೇಳತೀರದು. ಬಾಲಕಿಯ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದೇಶದಲ್ಲಿನ ಈ ವಿಡಿಯೋ ಇದೀಗ ಭಾರಿ ಮೆಚ್ಚುಗೆ ಪಡೆದಿದೆ.

ಮರಿ ಜೊತೆ ರಸ್ತೆ ದಾಟಲು ಹರಸಾಹಸ ಪಟ್ಟ ತಾಯಿ ಕರಡಿ: ವಿಡೀಯೋ ವೈರಲ್!

ಬ್ರಿಯಾನ್ ರೊಮೇಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಪುಟಾಣಿ ಬಾಲಕಿಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಾಲಕಿ ರೈಲು ಬರುವುದನ್ನು ಕಾಯುತ್ತ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾಳೆ ವಿಡಿಯೋ ರೆಕಾರ್ಡ್ ಮಾಡಿದಾತ ಬರುತ್ತಿರುವುದೇನು? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರೈಲು ಎಂದು ಉತ್ತರಿಸಿದ ಬಾಲಕಿಗೆ ಅಷ್ಟೇ ಸಂತಸದಿಂದ ರೈಲು ನೋಡಿ ಸಂಭ್ರಮಿಸಿದ್ದಾಳೆ.

 

ಮಗುವಿನ ಕಣ್ಣಿನ ಮೂಲಕ ಜಗತ್ತನ್ನು ನೋಡುವುದು,ಮೊದಲ ಬಾರಿಗೆ ರೈಲು ನೋಡಿದ ಸಂಭ್ರಮ ಅವಳಿಗೆ ಎಂದು ಬ್ರಿಯಾನ್ ಟ್ವೀಟ್ ಮಾಡಿದ್ದಾರೆ. ಈ ಬಾಲಕಿ ವಿಡಿಯೋಗೆ ಭಾರಿ ಮೆಚ್ಚುಗೆ ಬಂದಿದೆ. ಮುಗ್ದ ಬಾಲಕಿಯ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.