ಅ. 28ರೊಳಗೆ ರಾಜೀನಾಮೆ ನೀಡಿ, ಕೆನಡಾ ಪ್ರಧಾನಿ ಟ್ರುಡೋಗೆ ಸ್ವಪಕ್ಷದಿಂದಲೇ ತಾಕೀತು!
ಭಾರತದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಇದಿಗ ತಮ್ಮ ಪಕ್ಷದಿಂದಲೇ ಸಂಕಷ್ಟ ಎದುರಾಗಿದೆ. ಅಕ್ಟೋಬರ್ 28ರೊಳಗೆ ರಾಜೀನಾಮೆ ನೀಡುವಂತೆ ಟ್ರುಡೋ ಪಕ್ಷದ ನಾಯಕರು ವಾರ್ನಿಂಗ್ ಮಾಡಿದ್ದಾರೆ.
ನವದೆಹಲಿ(ಅ.24) ಕೆನಡಾ ಹಾಗೂ ಭಾರತದ ಸಂಬಂಧ ಹಳಸಿ ಹಲವು ದಿನಗಳಾಗಿದೆ. ಕನೆಡಾದಲ್ಲಿ ಅಧಿಕಾರಕ್ಕೇರಲು ಸಿಖ್ ಸಮುದಾಯದ ಬೆಂಬಲ ಅಗತ್ಯ. ಆದರೆ ಜಸ್ಟಿನ್ ಟ್ರುಡೋ ಸಿಖ್ ಸಮುದಾಯದ ಬೆಂಬಲ ಪಡೆಯಲು ಖಲಿಸ್ತಾನಿ ಉಗ್ರ ಸಂಘಟನೆ ಪೋಷಣೆ ಮಾಡುತ್ತಿರುವುದು ಹೊಸ ವಿಚಾರವಲ್ಲ. ಇದರ ನಡುವೆ ಭಾರತದ ಮೇಲೆ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೋಲಾಹಲ ಸೃಷ್ಟಿಸಲಾಗಿತ್ತು. ಇತ್ತೀಚೆಗೆ ನಿಜ್ಜರ್ ಕೊಲೆಗೆ ಭಾರತ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಬಳಸಿಕೊಂಡಿದೆ ಅನ್ನೋ ಆರೋಪವನ್ನು ಮಾಡಿತ್ತು. ಆದರೆ ಭಾರತದ ವಿರುದ್ಧ ಆಧಾರ ರಹಿತ ಆರೋಪ ಮಾಡಿ ಮುಖಭಂಗಕ್ಕೆ ಒಳಗಾಗಿರುವ ಜಸ್ಟಿನ್ ಟ್ರುಡೋ ಅಕ್ಟೋಬರ್ 28ರೊಳಗೆ ರಾಜೀನಾಮೆ ನೀಡಬೇಕು ಎಂದು ಸ್ವಪಕ್ಷದ ನಾಯಕರೇ ವಾರ್ನಿಂಗ್ ಮಾಡಿದ್ದಾರೆ.
ಲಿಬರಲ್ ಪಕ್ಷ ನಾಯಕರು ಜಸ್ಟಿನ್ ಟ್ರುಡೋ ರಾಜೀನಾಮೆ ನೀಡಲು ತಾಕೀತು ಮಾಡಿದ್ದಾರೆ. ಜಸ್ಟಿನ್ ಟ್ರುಡೋ ತೆಗೆದುಕೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರ ಹಲವು ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗುತ್ತಿದೆ. ಪ್ರಮುಖವಾಗಿ ಭಾರತದ ವಿರುದ್ದ ನಡೆದುಕೊಳ್ಳುತ್ತಿರುವ ರೀತಿಗೆ ಲಿಬರಲ್ ಪಕ್ಷದ ನಾಯಕರು ಅಸಮಾಧಾನಗೊಂಡಿದ್ದಾರೆ. ಅಕ್ಟೋಬರ್ 28ರೊಳಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ.
ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ವಿದೇಶಿ ಉಗ್ರ: ಕೆನಡಾ ಪ್ರಧಾನಿ ಟ್ರುಡೋಗೆ ವಿಪಕ್ಷದ ತರಾಟೆ
ಮಹತ್ವದ ಸಭ ನಡೆಸಿದ ಲಿಬರಲ್ ಪಕ್ಷದ ನಾಯಕರು ಟ್ರುಡೋಗೆ ವಾರ್ನಿಂಗ್ ನೀಡಿದ್ದಾರೆ. ನಾಲ್ಕು ದಿನಗಳ ಸಮಯ ನೀಡಿರುವ ನಾಯಕರು, ಅಕ್ಟೋಬರ್ 28ರೊಳಗೆ ರಾಜೀನಾಮೆ ನೀಡದಿದ್ದರೆ ಸಭೆ ನಡೆಸಿ ಮುಂದಿನ ನಡೆ ಕುರಿತು ಸೂಚಿಸುವುದಾಗಿ ಎಚ್ಚರಿಸಲಾಗಿದೆ. ಟ್ರುಡೋ ನಿರ್ಧಾರಗಳಿಂದ ಕೆನಡಾ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಲಿಬರಲ್ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಇತ್ತೀಚೆಗೆ ಕೆನಡಾದ ವಿಪಕ್ಷಗಳು ಜಸ್ಟಿನ್ ಟ್ರುಡೋ ವಿರುದ್ದ ಆಕ್ರೋಶ ಹೊರಹಾಕಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ವಿದೇಶಿ ಉಗ್ರ ಎಂದಿರುವ ಕೆನಡಾ ವಿಪಕ್ಷಗಳು ಟ್ರುಡೋ ಪ್ಲಾನ್ ಬಟಾ ಬಯಲು ಮಾಡಿದ್ದಾರೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಟ್ರುಡೋ ಆರೋಪ ಮಾಡಿದ್ದರು. ಆದರೆ ಇದಕ್ಕೆ ಯಾವುದೇ ದಾಖಲೆಯನ್ನು ಟ್ರುಡೋ ಭಾರತಕ್ಕೆ ನೀಡಿಲ್ಲ. ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಮ್ಯಾಕ್ಸಿಮೆ ಬೆರ್ನಿಯರ್ ಹೇಳಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಕೆನಡಾ ಪ್ರವೇಶಿಸಿದ್ದ ಹರ್ದೀಪ್ ಸಿಂಗ್ ನಿಜ್ಜರ್ ವಿರುದ್ದ ಕೆನಡಾ ಕ್ರಮ ಕೈಗೊಳ್ಳಬೇಕಿತ್ತು. ಗಡೀಪಾರು ಮಾಡಬೇಕಿತ್ತು. ಆದರೆ ನಿಜ್ಜರ್ ಸತ್ತಬಳಿಕವೂ ಕೆನಡಾ ರಾಜಕೀಯ ಮಾಡುತ್ತಿದೆ ಎಂದು ಬೆರ್ನಿಯರ್ ಆರೋಪಿಸಿದ್ದರು.
ಭಾರತ ವಿರುದ್ಧ ಮಾತಾಡುವಂತೆ ಸಿಖ್ಖರಿಗೆ ಕೆನಡಾ ಪೊಲೀಸ್ ಒತ್ತಡ!