Asianet Suvarna News Asianet Suvarna News

ಹಾಲಿನ ಜಾಹೀರಾತಿನಲ್ಲಿ ಮಹಿಳೆಯರನ್ನು ಹಸುಗಳಂತೆ ತೋರಿಸಿದ Korean Dairy

  • ಮಹಿಳೆಯರನ್ನು ಹಸುಗಳಂತೆ ತೋರಿಸಿದ ದಕ್ಷಿಣ ಕೊರಿಯಾದ ಹಾಲು ಡೈರಿ 
  • ಜಾಹೀರಾತಿಗೆ ವ್ಯಾಪಕ ವಿರೋಧ, ಉತ್ಪನ್ನ ಬಹಿಷ್ಕರಿಸಲು ಮುಂದಾದ ಗ್ರಾಹಕರು
  • ನಂತರ ಜಾಹೀರಾತು ಅಳಿಸಿ ಕ್ಷಮೆ ಕೇಳಿದ ಸಿಯೋಲ್ ಹಾಲು ಡೈರಿ
Korean dairy brand shows women as cows in advertisement later apologises akb
Author
Bangalore, First Published Dec 17, 2021, 4:35 PM IST

ದಕ್ಷಿಣ ಕೊರಿಯಾ(ಡಿ.17): ದಕ್ಷಿಣ ಕೊರಿಯಾದ ಹಾಲು ಡೈರಿ ಕಂಪನಿಯಾದ ಸಿಯೋಲ್ ಮಿಲ್ಕ್(Seoul Milk) ತನ್ನ ಜಾಹೀರಾತುವಿನಲ್ಲಿ ಮಹಿಳೆಯರನ್ನು ಹಸುಗಳಂತೆ ಬಿಂಬಿಸಿ ಜಾಹೀರಾತು ನಿರ್ಮಾಣ ಮಾಡಿದ್ದು, ನಂತರ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೇ ಜನ ಇದರ ಉತ್ಪನ್ನವನ್ನು ಬಹಿಷ್ಕರಿಸಲು ಶುರು ಮಾಡಿದರು. ಈ  ಹಿನ್ನೆಲೆ ಕ್ಷಮೆ ಕೇಳಿದ ಸಂಸ್ಥೆ ತನ್ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಿಂದ ಈ ಜಾಹೀರಾತನ್ನು ತೆಗೆದು ಹಾಕಿದೆ. 

ಪ್ರಸ್ತುತ ಅಳಿಸಲಾಗಿರುವ ಈ ಜಾಹೀರಾತಿನಲ್ಲಿ ಸಿಯೋಲ್ ಮಿಲ್ಕ್  ಸಂಸ್ಥೆಯೂ ವ್ಯಕ್ತಿಯೊಬ್ಬ ಹೊಲದಲ್ಲಿ ಯೋಗ ಮಾಡುತ್ತಿರುವ ಹಾಗೂ ನೀರು ಕುಡಿಯುತ್ತಿರುವ ಮಹಿಳೆಯರ ಗುಂಪನ್ನು ರಹಸ್ಯವಾಗಿ ಚಿತ್ರೀಕರಿಸುತ್ತಾನೆ. ಇದರಿಂದ ಹೆಚ್ಚೇನು ತೊಂದರೆ ಆಗಿರಲಿಲ್ಲ. ಆದರೆ ಇದೇ ಮಹಿಳೆಯರು ನಂತರದಲ್ಲಿ ಹೊಲದಲ್ಲಿ ಮೇಯುವ ಹಸುವಿನಂತೆ ಬದಲಾಗುತ್ತಾರೆ.  ಸೆಕ್ಸಿಯೆಸ್ಟ್‌ ಎಂಬ ಕಾರಣಕ್ಕಷ್ಟೇ ಈ ವಿಡಿಯೋಗೆ ವಿರೋಧ ವ್ಯಕ್ತವಾಗಿಲ್ಲ. ಇದರಿಂದ ತುಂಬಾ ಕಿರಿಕಿರಿಯಾಗಿದೆ. ಇದು ಸ್ಪೈ ಕ್ಯಾಮರಾ(ರಹಸ್ಯ ಕ್ಯಾಮರಾ) ಗಳಿಂದ ಆಗುವ ಸಮಸ್ಯೆಗಳನ್ನು ಕೂಡ ಗಮನಕ್ಕೆ ತಂದಿದೆ. ಈ ರಹಸ್ಯ ಕ್ಯಾಮರಾಗಳಿಂದಾಗಿ ಹಲವು ತಾರೆಯರು ತಮ್ಮ ಜೀವನವನ್ನು ಬಲಿ ಕೊಟ್ಟಿದ್ದಾರೆ. 

37 ಸೆಕೆಂಡ್‌ಗಳ ಈ ಜಾಹೀರಾತಿನ, ವಾಯ್ಸ್‌ ಓವರ್‌ ಹೇಳುವಂತೆ  'ನಾವು ಅಂತಿಮವಾಗಿ ಅವುಗಳನ್ನು ಶುದ್ಧವಾದ  ಸ್ಥಳದಲ್ಲಿ ಕ್ಯಾಮರಾದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಶುದ್ಧ ಪ್ರಕೃತಿಯಿಂದ ಶುದ್ಧ ನೀರನ್ನು ಕುಡಿಯುತ್ತಿರುವ, ಸಾವಯವ ಆಹಾರವನ್ನು ಸೇವಿಸುವ ಮತ್ತು ಆಹ್ಲಾದಕರ ವಾತಾವರಣದಲ್ಲಿ ಶಾಂತಿಯುತವಾಗಿ ವಾಸಿಸುವ ಅವರನ್ನು ಎಚ್ಚರಿಕೆಯಿಂದ ಸಂಪರ್ಕಿಸಲು ನಾವು ನಿರ್ಧರಿಸಿದ್ದೇವೆ ಎಂದು ಈ ಜಾಹೀರಾತು ಹೇಳಿದೆ. ಶುದ್ಧ ನೀರು, ಸಾವಯವ ಆಹಾರ, 100% ಶುದ್ಧ ಸಿಯೋಲ್ ಹಾಲು ಎಂಬ ಪದಗಳೊಂದಿಗೆ ಈ ಜಾಹೀರಾತು ಕೊನೆಗೊಂಡಿದೆ. ಚೆಂಗ್‌ಯಾಂಗ್‌ (Cheongyang)ನ ಆಹ್ಲಾದಕರ ಪ್ರಕೃತಿಯಲ್ಲಿ ಸಾವಯವ ಹಸುಗಳಿಂದ ಸಾವಯವ ಹಾಲು ಎಂದು ಈ ವಿಡಿಯೋವನ್ನು ಬಿಬಿಸಿ ನ್ಯೂಸ್(BBC News) ಕೊರಿಯಾನ್‌ ಭಾಷೆಯಿಂದ ಅನುವಾದಿಸಿದೆ. 

Floating city: ಸಿದ್ಧವಾಗುತ್ತಿದೆ ಜಗತ್ತಿನ ಮೊದಲ ತೇಲುವ ನಗರ

ಈ ಜಾಹೀರಾತಿಗೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಸಿಯೋಲ್ ಡೈರಿ ಕ್ಷಮೆಯಾಚಿಸಿದ್ದು ಈ ಬಗ್ಗೆ ಆಂತರಿಕ ಪರಿಶೀಲನೆ ನಡೆಸುವುದಾಗಿ ಹೇಳಿದೆ. ಕಳೆದ ತಿಂಗಳ ನ. 29 ರಂದು ಸಿಯೋಲ್ ಮಿಲ್ಕ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಆದ  ಈ ಹಾಲಿನ ಜಾಹೀರಾತು ವೀಡಿಯೊದಿಂದಾಗಿ ತೊಂದರೆ ಅನುಭವಿಸಿದ ಪ್ರತಿಯೊಬ್ಬರಿಗೂ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಸಿಯೋಲ್ ಮಿಲ್ಕ್‌ನ ಮೂಲ ಕಂಪನಿ ಸಿಯೋಲ್ ಸಹಕಾರಿ ಡೈರಿ  ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ  ತಿಳಿಸಿದೆ. ಕೊರಿಯಾ ಹೆರಾಲ್ಡ್ (Korea Herald) ಪತ್ರಿಕೆ ಪ್ರಕಾರ, ಸಿಯೋಲ್ ಡೈರಿ ಕೋ ಆಪರೇಟಿವ್‌ನ ಉದ್ಯೋಗಿಯೊಬ್ಬರು ಜಾಹೀರಾತಿನ ಭಾಗವಾಗಿ ಕ್ಷೇತ್ರದಲ್ಲಿ ಕಾಣಿಸಿಕೊಂಡ ಎಂಟು ಜನರಲ್ಲಿ ಆರು ಮಂದಿ ಪುರುಷರು, ಮಹಿಳೆಯರಲ್ಲ ಎಂದಿದ್ದಾರೆ. ಆದರೆ ಜಾಹೀರಾತನ್ನು ಹತ್ತಿರದಿಂದ ಗಮನಿಸಿದಾಗ ಅವರೆಲ್ಲರೂ ಮಹಿಳೆಯರಂತೆ ಕಾಣಿಸುತ್ತಿದ್ದಾರೆ ಎಂದು ವರದಿ ಮಾಡಿದೆ.

2025ರ ಹೊತ್ತಿಗೆ Air Taxi ಸೇವೆ ಆರಂಭಿಸಲಿರುವ ದಕ್ಷಿಣ ಕೊರಿಯಾ!

ಕೊರಿಯಾದಲ್ಲಿ ರಹಸ್ಯ ಕ್ಯಾಮರಾ (Spycam) ಗಳಿಂದ ಆಗುತ್ತಿರುವ ಅಪರಾಧಗಳು  ಗಂಭೀರ ಸಾಮಾಜಿಕ ಸಮಸ್ಯೆ (social problem) ಯಾಗಿವೆ.  ಕೊರಿಯನ್ ಟೈಮ್ಸ್ (Korean Times) ಪ್ರಕಾರ 2013 ಮತ್ತು 2018 ರ ನಡುವೆ 30,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಬಹುತೇಕ ಸಂತಸ್ತರು ಮಹಿಳೆಯರಾಗಿದ್ದಾರೆ. ಅದು ಬೆತ್ತಲೆಯಾಗಿದ್ದಾಗ, ಸ್ನಾನ ಮಾಡುವಾಗ ಅಥವಾ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿದ್ದಾಗ ರಹಸ್ಯ ಕ್ಯಾಮರಾಗಳಿಂದ ನಡೆಸಿದ ಚಿತ್ರೀಕರಣವಾಗಿದೆ

Follow Us:
Download App:
  • android
  • ios