ಸಿಯೋಲ್(ಏ.27): ಕಳೆದ ಕೆಲ ದಿನಗಳಿಂದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಗಂಭೀರವಾಗಿದೆ, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ ಎಂಬುವುದರಿಂದ ಹಿಡಿದು, ಅವರು ಮೃತಪಟ್ಟಿದ್ದಾರೆಂಬವರೆಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ತಕ್ಕಂತೆ ಕಿಮ್ ಕೂಡಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವುದು ಹಾಗೂ ಉತ್ತರ ಕೊರಿಯಾ ಯಾವುದೇ ಹೇಳಿಕೆ ನೀಡದಿರುವುದು ಜನರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಆದರೀಗ ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಕಿಮ್ ಆರೋಗ್ಯ ಸಂಬಂಧ ಮಹತ್ವದ ಮಾಹಿತಿ ಹೊರ ಹಾಕಿದೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ನಿಧನ?: ವೈರಲ್ ಆದ ಫೋಟೋ ಯಾರದ್ದು?

ಕಿಮ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಬ್ಬಲಾದ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿರುವ ದಕ್ಷಿಣ ಕೊರಿಯಾ ಭದ್ರತಾ ಅಧಿಕಾರಿ ಮೂನ್​ ಜೇ-ಇನ್, ಇದದೆಲ್ಲವೂ ಸುಳ್ಳು ಸುದ್ದಿ, ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ. ಅವರಿಗೇನೂ ಆಗಿಲ್ಲ ಎಂದು ಖಚಿತಪಡಿಸಿದ್ದಾರೆ. ಉತ್ತರ ಕೊರಿಯಾದ ಬದ್ಧ ವೈರಿಯಾಗಿರುವ ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯಿಂದ ಈ ಮಾಹಿತಿ ಸಿಕ್ಕಿದೆ.

ಕಿಮ್ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹೀಗ್ ಮಾಡುತ್ತಿದ್ದನಂತೆ !

ಕಳೆದ ಕೆಲ ದಿನಗಳಿಂದ ಅಮೆರಿಕಾ ಹಾಗೂ ಜಪಾನ್ ಮಾಧ್ಯಮ ಸೇರಿದಂತೆ ಅನೇಕ ಮಾಧ್ಯಮಗಳು ಕಿಮ್ ಆರೋಗ್ಯ ಹದಗಗೆಟ್ಟಿದೆ, ಹೃದಯ ಸಂಬಂಧಿ ಸರ್ಜರಿ ಯಶಸ್ವಿಯಾಗದಿರುವುದೇ ಇದಕ್ಕೆ ಕಾರಣ ಎಂದಿತ್ತು. ಇನ್ನು ಕೆಲ ಮಾಧ್ಯಮಗಳು ಅವರ ಬ್ರೇನ್ ಡೆಡ್ ಆಗಿದೆ ಎಂದಿದ್ದರೆ, ಚೀನಾದ ಮಾಧ್ಯಮಗಳು ಕಿಮ್‌ಗೆ ಕೊರೋನಾ ಅಂಟಿದೆ ಎಂದು ವರದಿ ಮಾಡಿತ್ತು. ಈ ಎಲ್ಲಾ ವದಂತಿಗಳ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ ಕಿಮ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಕಿಮ್ ಏಪ್ರಿಲ್ 15 ರಂದು ನಡೆದಿದ್ದ ತನ್ನ ಅಜ್ಜನ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಗೈರಾಗಿದ್ದೇ ಇದಕ್ಕೆ ಕಾರಣವಾಗಿತ್ತು.

ಕಿಮ್ ಉತ್ತರಾಧಿಕಾರಿ ರೇಸ್‌ನಲ್ಲಿ ಈ 'ಶಕ್ತಿಶಾಲಿ ಮಹಿಳೆ', ಯಾರೀಕೆ?

ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ. ಹೀಗಿದ್ದರೂ ಕಿಮ್ ಯಾಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ. ಅಲ್ಲದೇ ಉತ್ತರ ಕೊರಿಯಾ ಕೂಡಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.