ವಾಷಿಂಗ್ಟನ್(ಅ.26): ಸದ್ಯ ಅಮೆರಿಕದ ಮುಂದಿನ ಅಧ್ಯಕ್ಷ ಯಾರಾಗುತ್ತಾರೆಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ. ಹೀಗಿರುವಾಗಲೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಂತಿಮ ಕ್ಷಣದಲ್ಲಿ ಮಾಡಿದ ಎಡವಟ್ಟೊಂದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು ಅಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಮತದಾನದ ವೇಳೆ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದವರ ಬಳಿ  ತೆರಳಿದ ಕಮಲಾ ಹ್ಯಾರಿಸ್ ಅವರನ್ನು ಓಲೈಸಲು ಅಂತಿಮ ಹಂತದ ಯತ್ನ ನಡೆಸಿದ್ದಾರೆ. ಈ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. 

ಮತದಾರರನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್ 'ಮತದಾನ ಮಾಡಿದ ನಿಮಗೆಲ್ಲರಿಗೂ ಧನ್ಯವಾದ. ನಿಮ್ಮ ಮತ ನಿಮ್ಮ ಧ್ವನಿ. ನಿಮ್ಮ ಹಕ್ಕನ್ನು ಕಸಿದುಕೊಳ್ಳಲು ಬೇರೆಯವರಿಗೆ ಅವಕಾಶ ನೀಡಬೇಡಿ. ನೀವೆಲ್ಲರೂ ಬಹುದೊಡ್ಡ ಬದಲಾವಣೆ ಮಾಡಲು ತೆರಳುತ್ತಿದ್ದೀರಿ' ಎಂದಿದ್ದರು. 

ಸದ್ಯ ಅವರ ಈ ನಡೆಯನ್ನು ಅನೇಕ ಮಂದಿ ಟೀಕಿಸಿದ್ದು, ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಆರಂಭವಾಗಿದೆ.