Asianet Suvarna News Asianet Suvarna News

Viral Post; ಗೆಳತಿಯೊಂದಿಗೆ ಮಾತಾಡಿದ ದೊಡ್ಡ ನಟನಿಗೆ ಅಮೆಜಾನ್ ಒಡೆಯನ ಧಮ್ಕಿ!

* ಹಾಲಿವುಡ್ ನಟನಿಗೆ ಬೆದರಿಕೆ ಹಾಕಿದ ಅಮೇಜಾನ್ ಒಡೆಯ
* ನನ್ನ ಗೆಳತಿಯ ಜತೆ ನಿನಗೇನು ಕೆಲಸ!
* ಮೆಜಾನ್ ಒಡೆಯ ಜೆಫ್ ಬೆಜೋಸ್  ನಡೆಗೆ ಪ್ರತಿಕ್ರಿಯೆ
* ಇದೆಲ್ಲ ಕೇವಲ ಒಂದು ತಮಾಷೆಯ ಪ್ರಸಂಗ 

Jeff Bezos Reacts To Viral Video Of His Girlfriend With Leonardo DiCaprio mah
Author
Bengaluru, First Published Nov 11, 2021, 12:24 AM IST

ಲಾಸ್ ಎಂಜಲೀಸ್(ನ. 10)   ಈ ಸುದ್ದಿ  ಭಾರೀ ಮಜವಾಗಿದೆ. ಅಮೆಜಾನ್ (Amazon) ಒಡೆಯ ಜೆಫ್ ಬೆಜೋಸ್ (Jeff Bezos) ಬೆದರಿಕೆ ಹಾಕಿದ್ದಾರೆ!  ತನ್ನ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಸರಿಯಾಗಿಯೇ ಧಮ್ಕಿ ಹಾಕಿದ್ದಾರೆ. ಅವರು ಬೆದರಿಕೆ ಹಾಕಿದ್ದು ಸಾಮಾನ್ಯ ವ್ಯಕ್ತಿಗೆ ಅಲ್ಲ. ಟೈಟಾನಿಕ್(Titanic) ಚಿತ್ರದ ಮೂಲಕ ಜಗತ್ತಿನಲ್ಲಿಯೇ ದೊಡ್ಡ  ಹೆಸರು ಸಂಪಾದಿಸಿಕೊಂಡಿರುವ  ಹಾಲಿವುಡ್(Hollywood) ತಾರೆ (Leonardo DiCaprio) ಲಿಯೊನಾರ್ಡೊ ಡಿಕಾಪ್ರಿಯೊಗೆ! ದೃಶ್ಯಾವಳಿಗಳು ಲಭ್ಯವಾಗಿವೆ.

ಹೌದು.. ಇದೆಲ್ಲ ಘಟನೆ ಆಗಿದೆ.. ಆದರೆ ತಮಾಷೆಗೆ ಮಾತ್ರ.. ಬೆದರಿಕೆ  ಹಾಕಿದ್ದು ತಮಾಷೆಯಿಂದಲೇ!  ಬೆಜೋಸ್ ಗೆಳತಿ ಲಾರೆನ್ ಸ್ಯಾಂಚೆಝ್ (Lauren Sanchez ) ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು, ಆಗ ಅಲ್ಲಿಗೆ ಬಂದ  ಬೆಜೋಸ್ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಲಾಸ್ ಏಂಜಲೀಸ್‌ನಲ್ಲಿ  ನಡೆದ ಕಾರ್ಯಕ್ರಮವೊಂದರ ದೃಶ್ಯಾವಳಿ.

ಸರಿತಾ ನನಗೆ ಒಪ್ಪಿಗೆಯಾಗೊಲ್ಲ, ಆಕೆ ಕಪ್ಪು: ಪುನೀತ್ ಸಂದರ್ಶನ ಪತ್ರ ವೈರಲ್

ಸ್ಯಾಂಚೆಝ್ ಅವರು ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ  ನಗುನಗುತ್ತಲೇ ಮಾತನಾಡುತ್ತಿದ್ದರು.  ಈ ವೇಳೆ ಗೆಳತಿ ಇದ್ದ ಜಾಗಕ್ಕೆ ಅಮೇಜಾನ್ ಒಡೆಯ ಬಂದಿದ್ದಾರೆ. ಇನ್ನೊಂದು ವಿಚಾರ ಇಬ್ಬರು ದಿಗ್ಗಜರು  ಚಡ್ಡಿ  ದೋಸ್ತರಂತೆ. ಅದೇ ಕಾರಣಕ್ಕೆ ಸಲುಗೆಯ ಬೈಗುಳ ಬಂದಿದೆಯೇನೋ! ತಾಕತ್ತಿದ್ದರೆ ಬಾ ಎಂದು ಸೋಶಿಯಲ್ ಮೀಡಿಯಾದಲ್ಲೇ ಆಹ್ವಾನ ಕೊಟ್ಟಿದ್ದಾರೆ. 

ಇದಾದ ಮೇಲೆ ಅಭಿಮಾನಿಗಳು ಸುಮ್ಮನೆ ಕೂರಬೇಕಲ್ಲ. ಇಬ್ಬರು ದಿಗ್ಗಜರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಟೋಕ್ಕೆ ಈ ಘಟನೆಯನ್ನು ಲಿಂಕ್ ಮಾಡಿದ್ದಾರೆ. ಲಿಯೊನಾರ್ಡೊ ಡಿಕಾಪ್ರಿಯೊ ಅವರನ್ನು ಟ್ರೋಲ್ ಗೂ ಎಳೆದಿದ್ದಾರೆ. ನಿಮ್ಮ ಅಮೇಜಾನ್ ಖಾತೆ ಬಂದ್ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೆಫ್ ಬೆಜೋಸ್ ಅವರು 2019 ರಿಂದ ಅಮೇರಿಕನ್ ಸುದ್ದಿ ನಿರೂಪಕಿ ಲಾರೆನ್ ಸ್ಯಾಂಚೆಝ್ ಅವರೊಂದಿಗೆ  ರಿಲೇಶನ್ ಶಿಪ್ ನಲ್ಲಿ ಇದ್ದಾರೆ.  , 25 ವರ್ಷಗಳ ನಂತರ ಅವರು ತಮ್ಮ ಪತ್ನಿ ಮ್ಯಾಕೆಂಜಿ ಸ್ಕಾಟ್‌ಗೆ ವಿಚ್ಛೇದನ ನೀಡಿದ್ದರು. 

ವಿಶ್ವದ ನಂ.1 ಶ್ರೀಮಂತ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ತಮ್ಮ ಮೂವರು ಸಂಗಡಿಗರ ಜೊತೆಗೂಡಿ ಬೆಜೋಸ್‌ ಬಾಹ್ಯಾಕಾಶವನ್ನು ತಲುಪಿ, ಅಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲಿ ಭೂಮಿಗೆ ಯಶಸ್ವಿಯಾಗಿ ಮರಳಿದ್ದರು.. ವಾರದ ಹಿಂದಷ್ಟೇ ವರ್ಜಿನ್‌ ಗ್ಯಾಲಕ್ಟಿಕ್‌ ಮಾಲೀಕ ರಿಚರ್ಡ್‌ ಬ್ರಾನ್ಸನ್‌ ತಮ್ಮ ತಂಡದೊಂದಿಗೆ ಬಾಹ್ಯಾಕಾಶಕ್ಕೆ ತೆರಳಿ ಬಂದಿದ್ದರು. ಅದರ ಬೆನ್ನಲ್ಲೇ ನಡೆದ ಈ ಸಾಹಸ, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆದಿತ್ತು.

ಜೆಫ್‌ ಬೆಜೋಸ್‌ ತಂಡದ ಉಡ್ಡಯನ ಕೇವಲ 10 ನಿಮಿಷದ್ದಾಗಿತ್ತು. ಭೂಮಿಯಿಂದ 100 ಕಿ.ಮೀ. ಎತ್ತರದಲ್ಲಿರುವ ಕರ್ಮನ್‌ ಲೈನ್‌ (ಭೂಮಿಯ ಅಂಚು) ದಾಟಿ ಮುಂದೆ ಹೋದ ಕ್ಯಾಪ್ಸೂಲ್‌ 106 ಕಿ.ಮೀ. ಎತ್ತರವನ್ನು ತಲುಪಿದ ಬಳಿಕ ಭೂಮಿಯತ್ತ ಮರಳಿತು. ಈ ವೇಳೆ ಕ್ಯಾಪ್ಸೂಲ್‌ನಲ್ಲಿದ್ದವರು 3 ನಿಮಿಷ ಶೂನ್ಯ ಗುರುತ್ವಾಕಷಣೆಯನ್ನು ಅನುಭವಿಸಿದರು. ಇಡೀ ಉಡ್ಡಯನ ಪ್ರಕ್ರಿಯೆ ಸ್ವಯಂಚಾಲಿತವಾಗಿತ್ತು. ಇಲ್ಲಿ ಯಾವುದೇ ಪೈಲಟ್‌ ಸಹಾಯ ಇರಲಿಲ್ಲ.

 

Follow Us:
Download App:
  • android
  • ios