Asianet Suvarna News Asianet Suvarna News

ಅಫ್ಘಾನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಮಾಯಾ, ರೂಬಿ ಮತ್ತು ಬಾಬಿ!

* ಸುರಕ್ಷಿತವಾಗಿ ಭಾರತವ ತಲುಪಿದ ಮೂರು ಶ್ವಾನಗಳು
* ಅಫ್ಘಾ ನ್ ನಿಂದ ಏರ್ ಲಿಫ್ಟ್ ಮೂಲಕ ಬಂದಿಳಿದ ಶ್ವಾನಗಳು
* ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನಗಳು 

 

ITBP canines serving in Afghanistan return to India Airlift mah
Author
Bengaluru, First Published Aug 18, 2021, 7:03 PM IST
  • Facebook
  • Twitter
  • Whatsapp

ಬೆಂಗಳೂರು(ಆ. 18) ಅಫ್ಘಾನಿಸ್ತಾನವನ್ನು ತಾಲೀಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಷರಿಯಾ ಕಾನೂನಿನ ಮೂಲಕ ಆಡಳಿತ ಮಾಡುತ್ತೇವೆ ಎಂದು ಹೇಳಿದ್ದು
ನಾವು ಮೊದಲಿನಂತೆ ಇಲ್ಲ ಎನ್ನುತ್ತಲೂ ಇದ್ದಾರೆ.

ಎಲ್ಲ ರಾಷ್ಟ್ರಗಳು ಅಫ್ಘಾನ್ ನಲ್ಲಿ ಸಿಲುಕಿದ್ದ ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ಕೆಲಸ ಮಾಡಿವೆ. ಆಫ್ಘಾನ್ ನಿಂದ ಭಾರತೀಯ ಸೇನೆಗೆ ಸೇರಿದ
ಮೂರು ಭದ್ರತಾ ಶ್ವಾನಗಳನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆದುಕೊಂಡು ಬರಲಾಗಿದೆ.

ರೋಚಕ ಏರ್ ಲಿಫ್ಟ್ ಕಹಾನಿ.. ಹಿಂದಿನ ಹೀರೋ ಯಾರು?

ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಐಟಿಬಿಪಿ ಯೋಧರ ಜತೆ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನಗಳು ದೇಶಕ್ಕೆ ಹಿಂದಿರುಗಿವೆ. ಸ್ನೈಫರ್
ಶ್ವಾನಗಳಾದ ಮಾಯಾ, ರೂಬಿ ಮತ್ತು ಬಾಬಿಯನ್ನು ಏರ್ ಲಿಫ್ಟ್ ಮುಖೇನ ಕರೆದುಕೊಂಡು ಬರಲಾಗಿದೆ.

30 ರಾಯಭಾರ ಕಚೇರಿಯ ಅಧಿಕಾರಿಗಳು, 21 ನಾಗರಿಕರು, 99 ಯೋಧರು ಮತ್ತು ಮೂರು ಶ್ವಾನಗಳಿದ್ದ ಭಾರತೀಯ ವಾಯುಸೇನೆ ಸಿ-17  ವಿಮಾನ    ಗಜಿಯಾಬಾದ್
ವಿಮಾನ ನಿಲ್ಧಾಣಕ್ಕೆ ಮಂಗಳವಾರ ಬೆಳಗ್ಗೆ ಬಂದು ಇಳಿದಿದೆ. 

 

Follow Us:
Download App:
  • android
  • ios