ರೋಮ್‌(ಮಾ.20): ಗುರುವಾರ ಇಟಲಿಯಲ್ಲಿ ಕೊರೋನಾ ಸೋಂಕು ಪೀಡಿತರಾಗಿದ್ದ 427 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕು ಪೀಡಿತರ ಪಟ್ಟಿಯಲ್ಲಿ, ಸೋಂಕಿನ ಉಗಮ ಸ್ಥಾನವಾದ ಚೀನಾವನ್ನೂ ಇಟಲಿ ಹಿಂದಿಕ್ಕಿದೆ.

ಜನವರಿ 11ಕ್ಕೆ ದೇಶದಲ್ಲಿ ಸೋಂಕಿಗೆ ಮೊದಲ ಬಲಿ ಆದ ಬಳಿಕ ಚೀನಾ ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿತ್ತು. ಇದರ ಫಲವಾಗಿ ಗುರುವಾರ ದೇಶೀಯವಾಗಿ ಸೋಂಕು ಖಚಿತಪಟ್ಟಒಂದೂ ಪ್ರಕರಣ ಪತ್ತೆಯಾಗಿಲ್ಲ. ಚೀನಾದಲ್ಲಿ ಒಟ್ಟು 80,928 ಮಂದಿಗೆ ಸೋಂಕು ತಟ್ಟಿದ್ದು ದೃಢವಾಗಿದ್ದು, 3,245 ಮಂದಿ ಸಾವನ್ನಪ್ಪಿದ್ದಾರೆ

ಇಟಲಿಯಲ್ಲಿ ಫೆ.21ರಂದು ಸೋಂಕಿನಿಂದಾಗಿ ಮೊದಲ ಸಾವು ಉಂಟಾಗಿತ್ತು. ಬಳಿಕ ತೀವ್ರವಾಗಿ ಹರಡಿದ ಸೋಂಕು ಒಟ್ಟು 3405 ಮಂದಿಯನ್ನು ಬಲಿ ಪಡೆದಿದೆ. 35,713 ಮಂದಿಗೆ ಸೋಂಕು ಭಾದಿಸಿದೆ.