ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಎಲ್ಲೆಡೆ ಲಾಕ್‌ಡೌನ್ ನಿರ್ಬಂಧದ ನಡುವೆಯೂ ಕಾರಿನಲ್ಲಿ ಜೋಡಿಯ ಕಾಮಕ್ರೀಡೆ ಜೋಡಿಯನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಮಿಲನ್, ಇಟಲಿ (ಮಾ.20): ಚೀನಾದ ವುಹಾನ್‌ ಬಳಿಕ ಯೂರೋಪ್‌ನ ಇಟಲಿ ಕೋರೋನಾವೈರಸ್ ಸೋಂಕಿನ ಕೇಂದ್ರಬಿಂದುವಾಗಿದೆ. ಸೋಂಕು ಮತ್ತು ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸದೆ. ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಇಡೀ ದೇಶದಲ್ಲಿ ಸಾರ್ವಜನಿಕ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದೆ.

ಈ ಎಲ್ಲವುಗಳ ನಡುವೆ ಕೆಲವರಿಗೆ 'ಇದೇ' ಮುಖ್ಯವಾಗಿದೆ. ಕಾರಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಜೋಡಿಯನ್ನು ಇಟಲಿ ಪೊಲೀಸರು ಬಂಧಿಸಿದ್ದಾರೆಂದು ಮೇಲ್ ಆನ್‌ಲೈನ್ ವರದಿ ಮಾಡಿದೆ.

ಇದನ್ನೂ ಓದಿ | ಇಟೆಲಿಯಲ್ಲಿ ಹುಳಗಳಂತೆ ಜನ ಸತ್ತಿದ್ಯಾಕೆ? ಭಾರತದಲ್ಲೂ ಹಾಗಾಗುತ್ತಾ?...

ಕೊರೋನಾ ಹಾವಳಿ ತಡೆಗಟ್ಟಲು ಕಾರಿನಲ್ಲಿ ಇಬ್ಬರು ಮುಂದಿನ/ಹಿಂದಿನ ಸೀಟುಗಳಲ್ಲಿ ಜೊತೆಯಾಗಿ ಕೂತುಕೊಂಡು ಪ್ರಯಾಣಿಸುವುದಕ್ಕೆ ಇಟಲಿ ಸರ್ಕಾರ ನಿರ್ಬಂಧ ಹೇರಿದೆ.

ಪೊಲೀಸರು ಚೆಕಿಂಗ್ ನಡೆಸುತ್ತಿರುವಾಗ ಮಿಲನ್ ನಗರದ ಹೊರವಲಯದಲ್ಲಿ 23 ವರ್ಷದ ಈಜಿಪ್ಶಿಯನ್ ಯುವಕ ಮತ್ತು 40 ವರ್ಷದ ಟ್ಯುನಿಶಿಯನ್ ಮಹಿಳೆ ಕಾರೊಳಗಡೆ ಸೆಕ್ಸ್‌ ನಡೆಸುತ್ತಿರುವುದು ಕಂಡುಬಂದಿದೆ. ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ಅವರಿಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯು ಹೇಳಿದೆ.

ಅದೇ ರೀತಿ, ಪಾರ್ಕಿನ ಹುಲ್ಲುಹಾಸಿನ ಮೇಲೆ ರಿಲ್ಯಾಕ್ಸ್ ಮಾಡುತ್ತಿದ್ದ ಕುಟುಂಬವನ್ನೂ ಪೊಲೀಸರು ಎಚ್ಚರಿಸಿ ಮನೆಗೆ ಕಳುಹಿಸಿದ್ದಾರೆ.

ಇಟಲಿಯಲ್ಲಿ ಕೋವಿಡ್-19 ಸೋಂಕಿನಿಂದ 3 ಸಾವಿರಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದು, ಪರಿಸ್ಥಿತಿ ಬಹಳ ಗಂಭೀರವಾಗಿದೆ.