Asianet Suvarna News Asianet Suvarna News

ಪುರುಷರ ಉಡುಪಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಫ್ಯಾಶನ್ ಡಿಸೈನರ್ ಇನ್ನಿಲ್ಲ

  • ಇಟಾಲಿಯನ್ ಫ್ಯಾಶನ್ ಡಿಸೈನರ್ ನಿನೋ ಸೆರುಟಿ ನಿಧನ
  • ಪುರುಷರ ಉಡುಪಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದ ಸೆರುಟಿ
Italian menswear innovator Nino Cerruti no more akb
Author
Bangalore, First Published Jan 16, 2022, 6:53 PM IST

ಇಟಲಿ(ಜ. 16) 1960ರ ದಶಕದಲ್ಲಿ ಪುರುಷರ ಉಡುಪಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಇಟಾಲಿಯನ್ ಫ್ಯಾಶನ್ ಡಿಸೈನರ್ ನಿನೋ ಸೆರುಟಿ (Nino Cerruti) ಶನಿವಾರ ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರು ಫ್ಯಾಶನ್ ಡಿಸೈನರ್ ಜಾರ್ಜಿಯೊ ಅರ್ಮಾನಿ (Giorgio Armani)ಅವರಿಗೆ ಉದ್ಯಮದಲ್ಲಿ ತನ್ನ ಮೊದಲ ಫ್ಯಾಶನ್ ಬ್ರೇಕ್ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಇಟಾಲಿಯನ್ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. 

ಸೆರುಟಿ ವಾಯುವ್ಯ ಇಟಲಿಯಲ್ಲಿ ನಿಧನರಾಗಿದ್ದಾರೆ. ಅಲ್ಲಿ ಅವರ ಕುಟುಂಬವು 1881 ರಿಂದಲೂ ಜವಳಿ ಉದ್ಯಮವನ್ನು ನಡೆಸುತ್ತಿದೆ ಎಂದು ಇಟಾಲಿಯನ್ ಸುದ್ದಿ ಸಂಸ್ಥೆ ಲಾಪ್ರೆಸ್ಸೆ ವರದಿ ಮಾಡಿದೆ. ಸೆರುಟಿ ಸೊಂಟದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಇಟಾಲಿಯನ್ ದಿನಪತ್ರಿಕೆ ವರದಿ ಮಾಡಿತ್ತು.

ಪೀಡ್‌ಮಾಂಟ್ (Piedmont) ಪ್ರದೇಶದ ಬಿಯೆಲ್ಲಾ(Biella) ನಗರದಲ್ಲಿ ನೆಲೆಗೊಂಡಿದ್ದ ಕುಟುಂಬದ ವ್ಯವಹಾರವನ್ನು1950 ರಲ್ಲಿ ತಮ್ಮ ತಂದೆಯ ಮರಣದ ನಂತರ  20ರ ಹರೆಯದ ಸೆರುಟ್ಟಿ ಅನುವಂಶಿಕವಾಗಿ ಪಡೆದರು. ಅವರು ತಮ್ಮ ಮೊದಲ ಪುರುಷರ ಉಡುಪು ಕಂಪನಿ ಹಿಟ್‌ಮ್ಯಾನ್ ಅನ್ನು 1957 ರಲ್ಲಿ ಮಿಲನ್ (Milan) ಬಳಿ ಪ್ರಾರಂಭಿಸಿದರು. ಇದು ಬಟ್ಟೆ ಉದ್ಯಮ ವಲಯದಲ್ಲಿ ಟೈಲರ್‌ನ ಸೊಬಗನ್ನು ರಚಿಸಲು ಸಹಾಯಕವಾಯಿತು ಜೊತೆಗೆ  ಪುರುಷರ ರೆಡಿ ಟು ವೇರ್ ವಲಯದ ಭಾಗವಾಯಿತು. 

Fashion Tips : ಇರುವುದರಲ್ಲೇ ಹೊಸ ರೀತಿ ಕಾಣಿಸುವುದು ಹೇಗೆ?

ಫ್ಯಾಶನ್ ಡಿಸೈನರ್ ಜಾರ್ಜಿಯೊ ಅರ್ಮಾನಿ ಅವರನ್ನು 1960 ರ ದಶಕದ ಮಧ್ಯಭಾಗದಲ್ಲಿ ಹಿಟ್‌ಮ್ಯಾನ್ ಕಾರ್ಖಾನೆಯಲ್ಲಿ ಯುವ ಪ್ರತಿಭೆಯಾಗಿ ನೇಮಿಸಲಾಯಿತು. ಅರ್ಮಾನಿ, ಸೆರುಟಿಯನ್ನು 'ತೀಕ್ಷ್ಣವಾದ ಕಣ್ಣು, ನಿಜವಾದ ಕುತೂಹಲ, ಧೈರ್ಯದ ಸಾಮರ್ಥ್ಯ ಹೊಂದಿರುವ ಸೃಜನಶೀಲ ಉದ್ಯಮಿ' ಎಂದು ನೆನಪಿಸಿಕೊಂಡರು ಮತ್ತು ಅವರ 'ಅಧಿಕೃತ, ನಿರಂಕುಶಾಧಿಕಾರದ ಸೌಮ್ಯವಾದ ಮಾರ್ಗವು ತಪ್ಪಿ ಹೋಗುತ್ತದೆ ಎಂದು ಹೇಳಿದರು. 

ವರ್ಷಗಳು ಕಳೆದಂತೆ ನಮ್ಮ ಸಂಪರ್ಕಗಳು ಕಡಿಮೆಯಾಗಿದ್ದರೂ ಸಹ, ನನ್ನ ಜೀವನದ ಮೇಲೆ ನಿಜವಾದ ಮತ್ತು ಧನಾತ್ಮಕ ಪ್ರಭಾವ ಬೀರಿದ ಜನರಲ್ಲಿ ಸೆರುಟಿ ಒಬ್ಬರೆಂದು ನಾನು ಯಾವಾಗಲೂ ಪರಿಗಣಿಸಿದ್ದೇನೆ ಎಂದು ಅರ್ಮಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಿಂದ ನಾನು ದರ್ಜಿಯ ಮೃದುತ್ವದ ರುಚಿಯನ್ನು ಮಾತ್ರ ಕಲಿತಿದ್ದೇನೆ, ಆದರೆ ವಿನ್ಯಾಸಕನಾಗಿ ಮತ್ತು ಉದ್ಯಮಿಯಾಗಿ ದೂರದೃಷ್ಟಿಯ ಪ್ರಾಮುಖ್ಯತೆಯನ್ನು ಸಹ ಕಲಿತಿದ್ದೇನೆ ಎಂದು ಅರ್ಮಾನಿ ಹೇಳಿದರು.

Fashion Tips : ಪುರುಷರ ಡ್ರೆಸ್ ಧರಿಸುವ ಹುಡುಗಿಯರಿಗೆ ಇಲ್ಲಿವೆ ಬೆಸ್ಟ್ ಟಿಪ್ಸ್

1967 ರಲ್ಲಿ, ಸೆರುಟಿ ಐಷಾರಾಮಿ ಪುರುಷರ ಉಡುಪುಗಳ ಫ್ಯಾಶನ್ ಹೌಸ್  ಸೆರುಟಿ 1881 ಅನ್ನು ಪ್ಯಾರಿಸ್‌ನಲ್ಲಿ ಸ್ಥಾಪಿಸಿದರು. ನಂತರ ಅಂತಾರಾಷ್ಟ್ರೀಯ ಫ್ಯಾಷನ್ ರಾಜಧಾನಿ, ಇಟಲಿಯಲ್ಲಿ ಉತ್ಪಾದನೆಯನ್ನು ನಿರ್ವಹಿಸುತ್ತಿದ್ದರು. ಬಣ್ಣಗಳ ಮೃದುವಾದ ಸಿಲೂಯೆಟ್ ಬಳಕೆ ಮತ್ತು ನವೀನ ವಿನ್ಯಾಸ ಮತ್ತು ಸಂಪ್ರದಾಯ ಎಲ್ಲದರಿಂದಾಗಿ ಇದು ಫ್ರೆಂಚ್ ಚಲನಚಿತ್ರ ತಾರೆ ಜೀನ್‌ಪಾಲ್ ಬೆಲ್ಮೊಂಡೋ ಅವರಂತಹ ಗ್ರಾಹಕರ ಮನವನ್ನು ಗೆದ್ದಿದೆ. 

ಸೆರುಟ್ಟಿ ಅವರು ಮಹಿಳಾ ಉಡುಪುಗಳ ಉದ್ಯಮವನ್ನು ಕೂಡ ಸ್ಥಾಪಿಸಿದ್ದರು. ಅದರ ಜೊತೆಗೆ ಸುಗಂಧ ದ್ರವ್ಯಗಳ ಕೈಗಡಿಯಾರಗಳ ಪರಿಕರಗಳು ಮತ್ತು ಚರ್ಮದ ಸರಕುಗಳ ಉದ್ಯಮವನ್ನು ಸಹ ಪ್ರಾರಂಭಿಸಿದರು. ಒಂದು ಹಂತದಲ್ಲಿ ಫೆರಾರಿ ಫಾರ್ಮುಲಾ 1 ತಂಡದ ವಿನ್ಯಾಸಕರು ಕೂಡ ಆಗಿದ್ದರು. 2000ನೇ ದಶಕದ ಆರಂಭದಲ್ಲಿ ಸೆರುಟಿ ಕಂಪನಿಯನ್ನು ಮಾರಾಟ ಮಾಡಿದರು. ಜೊತೆಗೆ ವಿನ್ಯಾಸದ ಪಾತ್ರವನ್ನು ಸಹ ಬಿಟ್ಟುಕೊಟ್ಟರು. ಆದರೆ ಫ್ಯಾಶನ್ ಹೌಸ್‌ನೊಂದಿಗಿನ ಸಂಬಂಧವನ್ನು ಅವರು ಎಂದಿಗೂ ಕಡಿದುಕೊಳ್ಳಲಿಲ್ಲ.

Follow Us:
Download App:
  • android
  • ios