Asianet Suvarna News Asianet Suvarna News

‘ಮಮ್ಮಿ’ಗೂ ಸಿಟಿ ಸ್ಕ್ಯಾನ್: ಶವಸಂಸ್ಕಾರ ರಹಸ್ಯ ಬೇಧಿಸಲು ಪ್ರಯೋಗ!

* ಮೊದಲ ಬಾರಿಗೆ ಸಾವಿರಾರು ವರ್ಷಗಳ ಹಿಂದೆ ಸಾವನ್ನಪ್ಪಿ, ಬಳಿಕ ಸಂರಕ್ಷಿಸಲಾದ ಶವದ ಸಿಟಿ ಸ್ಕ್ಯಾನ್

* ಇಟ​ಲಿ​ಯಲ್ಲಿ ‘ಮಮ್ಮಿ’ಗೂ ಸಿಟಿ ಸ್ಕ್ಯಾನ್

* ಪ್ರಾಚೀನ ಶವ​ಸಂಸ್ಕಾ​ರದ ರಹಸ್ಯ ಭೇದಿ​ಸಲು ಪ್ರಯೋಗ

Italian hospital uses CT scan to unveil secrets of Egyptian mummy pod
Author
Bangalore, First Published Jun 25, 2021, 7:56 AM IST

ರೋಮ್‌(ಜೂ.25): ಅನಾರೋಗ್ಯ ಪೀಡಿತರ ದೇಹದ ಭಾಗಗಳ ಅಧ್ಯಯನಕ್ಕೆ ಸಿಟಿ ಸ್ಕ್ಯಾನ್ ಮಾಡುವುದು ಗೊತ್ತು. ಆದರೆ ಇದೇ ಮೊದಲ ಬಾರಿಗೆ ಸಾವಿರಾರು ವರ್ಷಗಳ ಹಿಂದೆ ಸಾವನ್ನಪ್ಪಿ, ಬಳಿಕ ಸಂರಕ್ಷಿಸಲಾದ ಶವ (ಮಮ್ಮಿ)ವೊಂದನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗಿದೆ. ಪ್ರಾಚೀನ ಈಜಿ​ಪ್ಟ್‌​ನಲ್ಲಿ ಮೃತ​ದೇ​ಹ​ಗ​ಳ​ನ್ನು ಕೆಡ​ದಂತೆ ರಕ್ಷಿ​ಸಿಡುವ ಪದ್ಧತಿ ಇತ್ತು. ಈ ರೀತಿ ರಕ್ಷಿ​ಸ​ಲ್ಪಟ್ಟ ಶವ​ಗ​ಳಿಗೆ ಮಮ್ಮಿ ಎಂದು ಕರೆ​ಯ​ಲಾ​ಗು​ತ್ತದೆ. ಆಧು​ನಿಕ ಜಗ​ತ್ತಿಗೂ ಮಮ್ಮಿ​ಗಳು ರಹ​ಸ್ಯ​ವಾ​ಗಿಯೇ ಉಳಿ​ದಿವೆ. ಈ ರಹ​ಸ್ಯ​ವನ್ನು ಭೇದಿ​ಸುವ ನಿಟ್ಟಿ​ನಿಂದ ಇಟ​ಲಿ​ಯಲ್ಲಿ ಮೊದಲ ಬಾರಿಗೆ ಮಮ್ಮಿ​ಗ​ಳನ್ನು ಸಿಟಿ ಸ್ಕ್ಯಾನ್‌ಗೆ ಒಳ​ಪ​ಡಿ​ಸ​ಲಾ​ಗಿ​ದೆ.

ಸಿಟಿ ಸ್ಕ್ಯಾನ್ ನಡೆ​ಸಿದ್ದು ಯಾವ ಮಮ್ಮಿ​ಗೆ?

ಪ್ರಾಚೀನ ಈಜಿಪ್ಟ್‌ ಪಾದ್ರಿ ಅಂಖೆ​ಖೋನ್ಸು ಎಂಬ ಮಮ್ಮಿ​ಯನ್ನು ಇಟ​ಲಿಯ ಬೆರ್ಗಾ​ಮೊದ ಮ್ಯೂಸಿ​ಯಂನಿಂದ ಪಾಲಿ​ಕ್ಲಿ​ನಿಕೋ ಆಸ್ಪ​ತ್ರೆಗೆ ತಂದು ಸಿಟಿ ಸ್ಕಾ್ಯನ್‌ಗೆ ಒಳ​ಪ​ಡಿ​ಸ​ಲಾ​ಗಿದೆ. ಈ ಶವ ಸುಮಾರು ಹಳೆ​ಯ​ದಾ​ಗಿ​ದೆ. ಅದನ್ನು ಮೂಲತಃ ಈಜಿ​ಪ್ಟ್‌​ನಿಂದ ತಂದು ಸಂಗ್ರ​ಹಿ​ಸಿ ಇಡ​ಲಾ​ಗಿತ್ತು. ಕ್ರಿಸ್ತ​ ಪೂರ್ವ 900 ಮತ್ತು 800ರ ನಡು​ವಿನ ಮಮ್ಮಿ ಇದಾ​ಗಿದೆ ಎಂದು ಅಂದಾ​ಜಿ​ಸ​ಲಾ​ಗಿ​ದೆ.

ಏನು ಉಪ​ಯೋ​ಗ?

ಈಜಿಪ್ಟ್‌ ಪಾದ್ರಿಯ ಜೀವನ ಮತ್ತು ಮರ​ಣ​ದ ಘಟನಾವಳಿಗಳ ಪುನರ್‌ಸೃಷ್ಟಿ, ದೇಹ​ವನ್ನು ಕೆಡ​ದಂತೆ ರಕ್ಷಿ​ಸಲು ಯಾವ ಪದಾ​ರ್ಥ​ವನ್ನು ಬಳಕೆ ಮಾಡ​ಲಾ​ಗಿ​ದೆ ಎಂಬುದನ್ನು ಅರಿ​ಯುವ ಉದ್ದೇ​ಶ​ದಿಂದ ಮಮ್ಮಿ​ಯನ್ನು ಸಿಟಿ ಸ್ಕಾ್ಯನ್‌ಗೆ ಒಳ​ಪ​ಡಿ​ಸ​ಲಾ​ಗಿದೆ. ಆಧುನಿಕ ವೈದ್ಯ​ಕೀಯ ಸಂಶೋ​ಧ​ನೆ​ಗ​ಳಿ​ಗಾಗಿ ಪ್ರಾಚೀನ ಕಾಯಿ​ಲೆ​ಗಳು ಮತ್ತು ಗಾಯವನ್ನ ಅಧ್ಯ​ಯನ ಮಾಡು​ವುದು ಮಹ​ತ್ವ​ದ್ದಾ​ಗಿದೆ. ಆಗಿನ ಕಾಲ​ದಲ್ಲಿ ಜನ​ರಿಗೆ ಯಾವ ಕಾಯಿಲೆ ಬಂದಿ​ತ್ತು. ಮೃತ​ಪ​ಟ್ಟಿದ್ದು ಹೇಗೆ ಎಂಬು​ದನ್ನು ತಳಿ​ಯಲು ಇದ​ರಿಂದ ಸಹ​ಕಾ​ರಿ​ಯಾ​ಗ​ಲಿದೆ. 3000 ವರ್ಷ​ಗ​ಳಷ್ಟುಹಳೆಯ ಇತಿ​ಹಾ​ಸ​ವನ್ನು ಹೊಂದಿ​ರುವ ಮಮ್ಮಿ​ಗಳ ಬಗ್ಗೆ ಈ ಪ್ರಯೋಗ ಬೆಳಕು ಚೆಲ್ಲ​ಲಿ​ದೆ ಎಂದು ಎಂದು ವಿಶ್ವಾ​ಸ​ವನ್ನು ವೈದ್ಯರು ವ್ಯಕ್ತ​ಡಿ​ಸಿ​ದ್ದಾ​ರೆ.

ಏನಿದು ಮಮ್ಮಿ?

ಮಮ್ಮಿ ಅಂದರೆ ಕೆಡ​ದಂತೆ ರಕ್ಷಿ​ಸ​ಲ್ಪಟ್ಟ ಶವ​ಗ​ಳಾ​ಗಿವೆ. ಮೃತ​ದೇ​ಹವನ್ನು ಸಾವಿ​ರಾರು ವರ್ಷ​ಗಳ ಹಿಂದೆ ಈಜಿ​ಫ್ಟ್‌​ನಲ್ಲಿ ಮೃತ​ದೇಹಗ​ಳನ್ನು ದೇಹದ ಆಕಾ​ರದ ಪೆಟ್ಟಿ​ಗೆ​ಯಲ್ಲಿ ಇಟ್ಟು ಅಂತ್ಯ​ಸಂಸ್ಕಾರ ಮಾಡ​ಲಾ​ಗು​ತ್ತಿತ್ತು. ಇದ​ರಲ್ಲಿ ಇಟ್ಟಿದ್ದ ಶವ​ಗಳು ಸಾವಿ​ರಾರು ವರ್ಷ​ಗ​ಳು ಕಳೆ​ದ​ರೂ ಮೃತ ದೇಹದ ಚರ್ಮ, ಕೂದಲು, ಮೂಳೆ​ಗಳು ಕೆಡದೇ ಯಥಾ​ಸ್ಥಿ​ತಿ​ಯ​ಲ್ಲಿವೆ.

Follow Us:
Download App:
  • android
  • ios