ಇಸ್ರೇಲ್(ಆ.24): ಹಳೇ ಕಾಲದ ವಸ್ತುಗಳು, ಹಳೇ ಕಾಲದ ನಾಣ್ಯಗಳು ಸೇರಿದಂತೆ ಹಲವು ಐತಿಹಾಸಿಕ ಕುರುಹುಗಳು ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ಹೇಳುತ್ತದೆ. ಇದಕ್ಕಾಗಿ ಉತ್ಖನನ ಸೇರಿದಂತೆ ಹಲವು ವಿಧಾನದ ಮೂಲಕ ಇತಿಹಾಸದ ಕುರುಹುಗಳನ್ನು ಪತ್ತೆ ಹಚ್ಚಲಾಗುತ್ತದೆ. ಇದೀಗ ಇಸ್ರೇಲ್‌ನ ಸ್ವಯಂ ಸೇವಕ ಯುವಕರ ತಂಡವೊಂದು ಬರೋಬ್ಬರಿ 1,100 ವರ್ಷಗಳ ಹಳೆಯ 24 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಪತ್ತೆ ಹಚ್ಚಿದೆ.

ಇಸ್ರೇಲ್‌, ಯುಎಇ ಐತಿಹಾಸಿಕ ಶಾಂತಿ ಒಪ್ಪಂದ

ಕಟ್ಟಡ ನಿರ್ಮಾಣಕ್ಕೂ ಮುನ್ನ ಯುವಕರ ತಂಡವೊಂದು ಉತ್ಖನನಕ್ಕೆ ಮುಂದಾಗಿದೆ. ಈ ವೇಳೆ 24 ಕ್ಯಾರೆಟ್ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಮಾಹಿತಿ ತಿಳಿದು ಇಸ್ರೇಸ್ ಆ್ಯಂಟಿಕ್ವಿಟಿ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಬಳಿಕ ಈ ಚಿನ್ನದ ನಾಣ್ಯದ ಇತಿಹಾಸವನ್ನು ಬಹಿರಂಗಪಡಿಸಿದೆ.

ವಿಶ್ವದ ದುಬಾರಿ ಮಾಸ್ಕ್: ಈ ಮೊತ್ತಕ್ಕೆ 10 ಆಡಿ ಕಾರು: ಬಂಗಲೆಯನ್ನೇ ಖರೀದಿಸ್ಬಹುದು!

1,100 ವರ್ಷಗಳ ಹಿಂದೆ  ಈ ಸ್ಥಳದಲ್ಲಿ ವ್ಯಕ್ತಿಯ ಶವವನ್ನು ಹೂಳಲಾಗಿದೆ.  ಈ ವೇಳೆ ಚಿನ್ನದ ನಾಣ್ಯಗಳನ್ನು ಇಡಲಾಗಿದೆ. ಸುಮಾರು 425ಕ್ಕೂ ಹೆಚ್ಚಿನ ಚಿನ್ನದ ನಾಣ್ಯಗಳು ಈ ಸ್ಥಳದಲ್ಲಿ ಪತ್ತೆಯಾಗಿದೆ. 1,100 ವರ್ಷಗಳ ಹಿಂದಿನ ಚಿನ್ನದ ನಾಣ್ಯ ಇದಾಗಿದೆ ಎಂದು ಆ್ಯಂಟಿಕ್ವಿಟಿ ಇಲಾಖೆ ಹೇಳಿದೆ.

ಯುವಕರ ತಂಡ ಉತ್ಖನನದ ವೇಳೆ ವಿಶೇಷ ಚೀಲವನ್ನು ಪತ್ತೆ ಹಚ್ಚಿದೆ. ಬಳಿಕ ತೆಗೆದುನೋಡಿದಾಗ ಅಚ್ಚರಿ ಕಾದಿತ್ತು. ತಕ್ಷಣವೇ ಇಸ್ರೇಲ್ ಉತ್ಖನನ ವಿಭಾಗಕ್ಕೆ ಮಾಹಿತಿ ನೀಡಿದೆ. ಸಾವಿರ ವರ್ಷಗಳ ಹಿಂದಿನ ಇತಿಹಾಸ ಈ ಚಿನ್ನದ ನಾಣ್ಯದ ಮೂಲಕ ಅನಾವರಣಗೊಂಡಿದೆ