Asianet Suvarna News Asianet Suvarna News

ಗಾಜಾ ಮಹಿಳೆಯರ ಒಳಉಡುಪಿನಲ್ಲಿ ಇಸ್ರೇಲಿ ಸೈನಿಕರ ಆಟ, ವಿವಾದ ಬೆನ್ನಲ್ಲೇ IDF ಪ್ರತಿಕ್ರಿಯೆ!

ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಗಾಜಾ ಮೇಲೆ ಸಮರ ಸಾರಿದೆ. ಇಸ್ರೇಲ್ ಸೈನಿಕರು ಗಾಜಾಗೆ ನುಗ್ಗಿ ಹಮಾಸ್ ಉಗ್ರರ ಹೆಡೆಮುರಿ ಕಟ್ಟುತ್ತಿದ್ದಾರೆ. ಆದರೆ ಗಾಜಾ ನಾಗರೀಕರ ಮನೆಯಲ್ಲಿ ಇಸ್ರೇಲ್ ಸೈನಿಕರು ಗಾಜಾ ಮಹಿಳೆಯರ ಒಳಉಪುಡು ಹಿಡಿದು ಆಟವಾಡುತ್ತಿರುವ ಪೋಸ್ಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಗಾಜಾ ಮಹಿಳೆಯರ ಮೇಲೆ ಇಸ್ರೇಲ್ ಸೈನಿಕರು ದೌರ್ಜನ್ಯ ನಡೆಸುತ್ತಿದ್ದಾರೆ ಅನ್ನೋ ಆರೋಪ ಇದೀಗ ಬಲವಾಗತೊಡಗಿದೆ.
 

Israel Soldier plays Gaza women underwear video goes viral IDF investigates incidents ckm
Author
First Published Mar 29, 2024, 5:45 PM IST

ಗಾಜಾ(ಮಾ.29)  ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ಸಂಘರ್ಷಕ್ಕೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಒಮ್ಮತದ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯ ಕೈಗೊಂಡ ಕೆಲವೇ ದಿನಗಳಲ್ಲಿ ಇದೀಗ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿದೆ. ಗಾಜಾದಲ್ಲಿ ಅಡಗಿರುವ ಹಮಾಸ್ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್, ಗಾಜಾಗೆ ನುಗ್ಗಿ ಹೋರಾಟ ನಡೆಸುತ್ತಿದೆ. ಈ ಹೋರಾಟದ ನಡುವೆ ಇಸ್ರೇಲ್ ಸೈನಿಕರ ಮೇಲೆ ಪ್ಯಾಲೆಸ್ತಿನಿಯರು ಹಲವು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಗಾಜಾ ಮಹಿಳೆಯರ ಒಳಉಡುಪಿನಲ್ಲಿ ಇಸ್ರೇಲ್ ಸೈನಿಕರು ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಸಂಘರ್ಷದ ತೀವ್ರತೆ ಹೆಚ್ಚಿಸಿದೆ.

ಗಾಜಾದಲ್ಲಿ ಇಸ್ರೇಲ್ ಸೈನಿಕರು ನುಗ್ಗಿ ಹಮಾಸ್ ಉಗ್ರರ ಹುಡುಕಾಟ ನಡೆಸುತ್ತಿದ್ದಾರೆ. ಏಕಾಏಕಿ ಗಾಜಾ ಕಟ್ಟಡ, ಸುರಂಗ, ಬಂಕರ್ ಸೇರಿದಂತೆ ಹಲೆವೆಡೆ ದಾಳಿ ನಡೆಸುತ್ತಿದ್ದಾರೆ. ಹೀಗೆ ಗಾಜಾ ಜನತೆ ಹಮಾಸ್ ಉಗ್ರರಿಗೆ ನೆರವು, ಆಶ್ರಯ ನೀಡುತ್ತಿದ್ದಾರೆ ಎಂದು ನಾಗರೀಕರ ಮನೆಗೆ ನುಗ್ಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ನಡುವೆ ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಇಸ್ರೇಲ್ ಸೈನಿಕರು, ಇಸ್ರೇಲ್ ಸೇನೆಯ ಕೆಲ ಖಾತೆಗಳಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಗಾಜಾ ಮಹಿಳೆಯರ ಒಳಒಡುಪುಗಳನ್ನು ಹಿಡಿದು ಸೈನಿಕರು ಆಟವಾಡುತ್ತಿರುವ ದೃಶ್ಯ ವಿವಾದಕ್ಕೆ ಕಾರಣವಾಗಿದೆ.

ಗಾಝಾದಲ್ಲಿ ತಕ್ಷಣ ಕದನ ವಿರಾಮ ಘೋಷಣೆಗೆ ಇದೇ ಮೊದಲ ಬಾರಿ UN ಭದ್ರತಾ ಮಂಡಳಿ ನಿರ್ಣಯ!

ಈ ವಿವಾದಾತ್ಮಕ ವಿಡಿಯೋದಲ್ಲಿ ಇಸ್ರೇಲ್ ಸೈನಿಕರ ಕುರ್ಚಿಯಲ್ಲಿ ಕುಳಿತಿದ್ದಾನೆ. ಇತ್ತ ಸೋಫಾದಲ್ಲಿ ಮತ್ತೊರ್ವ ಕಾರ್ಮೆಡ್ ಮಲಗಿದ್ದಾನೆ. ಈತನ ತೆರೆದ ಬಾಯಿಗೆ ಗಾಜಾ ಮಹಿಳೆಯರ ಒಳಉಡುಪು ತುರುಕುವ ಪ್ರಯತ್ನ ಮಾಡುತ್ತಿರುವ ಹಾಸ್ಯ ವಿಡಿಯೋಗಳು ಇದಾಗಿದೆ. ಗಾಜಾ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿ ಒಳಉಡುಪುಗಳ ಜೊತೆ ಆಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದರ ಜೊತೆಗೆ ಇಸ್ರೇಲ್ ಸೈನಿಕರ ಇದೇ ರೀತಿಯ ಇತರ ವಿಡಿಯೋಗಳು ಹರಿದಾಡುತ್ತಿದೆ. ಈ ವಿಡಿಯೋಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಸೈನಿಕರ ನಡೆ, ಶಿಸ್ತಿನ ಕುರಿತು ಗಂಭೀರ ಪ್ರಶ್ನೆ ಎತ್ತಿದೆ. ಇದು ಗಾಜಾ ಮಹಿಳೆಯರು ಹಾಗೂ ಎಲ್ಲಾ ಮಹಿಳೆಯರ ಘತನೆಗೆ ಧಕ್ಕೆ ತರುವಂತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

 

ಗಾಜಾ ವಿಶ್ವವಿದ್ಯಾಲಯ ಕ್ಯಾಂಪಸ್‌ ಮೇಲೆ ಬಾಂಬ್ ದಾಳಿ ಮಾಡಿದ ಇಸ್ರೇಲ್? ಸ್ಪಷ್ಟೀಕರಣ ಕೇಳಿದ ಅಮೆರಿಕ

ವಿವಾದ ಜೋರಾಗುತ್ತಿದ್ದಂತೆ ಇಸ್ರೇಲ್ ಸೇನೆ ಪ್ರತಿಕ್ರಿಯೆ ನೀಡಿದೆ. ಈ ಕುರಿತು ತನಿಖೆಗೆ ಆದೇಶ ನೀಡಿದೆ. ಮಿಲಿಟರಿ ಪೊಲೀಸರು ಈ ಪ್ರಕರಣ ಕುರಿತು ತನಿಖೆ ನಡೆಸಲಿದ್ದಾರೆ. 
 

Follow Us:
Download App:
  • android
  • ios