Asianet Suvarna News Asianet Suvarna News

ಹಮಾಸ್ ಉಗ್ರರಿಂದ 40 ಮಕ್ಕಳ ಶಿರಚ್ಛೇಧ, ಕಾರ್ಯಾಚರಣೆಗೆ ಇಸ್ರೇಲ್‌ಗೆ ಬಂದಿಳಿದ ಅಮೆರಿಕ ಪಡೆ!

ಹಮಾಸ್ ಉಗ್ರರ ಭೀಕರತೆ ಇಸ್ರೇಲ್ ನಲುಗಿದೆ. ಪ್ರತಿದಾಳಿ ನಡೆಸುತ್ತಿದ್ದರೂ, ಇಸ್ರೇಲ್ ನಾಗರೀಕರ ಮೇಲೆ ಉಗ್ರರು ನಡೆಸುತ್ತಿರುವ ಪೈಶಾಚಿಕ ಕೃತ್ಯಕ್ಕೆ ಮರುಗುತ್ತಿದೆ. ಇದೀಗ ಹಮಾಸ್ ಉಗ್ರರು ಬರೋಬ್ಬರಿ 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ. ಈ ವಿಡಿಯೋ ಬಹಿರಂವಾಗುತ್ತಿದ್ದಂತೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಹಮಾಸ್ ಹೆಡೆಮುರಿ ಕಟ್ಟಲು ಇದೀಗ ಅಮೆರಿಕ ಪಡೆ ಇಸ್ರೇಲ್‌ಗೆ ಬಂದಿಳಿದಿದೆ.

Israel Palestine war 40 babies killed by hamas terror during barbaric attack ckm
Author
First Published Oct 10, 2023, 10:03 PM IST

ಜೆರುಸಲೇಮ್(ಅ.10) ಹಮಾಸ್ ಉಗ್ರರ ಮೇಲೆ ಯುದ್ಧ ತೀವ್ರಗೊಳಿಸಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ನಿರಂತರ ಏರ್‌ಸ್ಟ್ರೈಕ್ ನಡೆಸುತ್ತಿದೆ. ಹಮಾಸ್ ಉಗ್ರರ ಬಿಲಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿದೆ. ಆದರೆ ಇಸ್ರೇಲ್ ಹೆಜ್ಜೆ ಹೆಜ್ಜೆಗೂ ಹಮಾಸ್ ಉಗ್ರರು ನಡೆಸುತ್ತಿರುವ ಭೀಕರತೆಗೆ ಬೆಚ್ಚಿ ಬೀಳುತ್ತಿದೆ. ಇಸ್ರೇಲ್ ಮಾತ್ರವಲ್ಲ ಜಗತ್ತೇ ಹಮಾಸ್ ಉಗ್ರರ ಕ್ರೂರಿ ವರ್ತನೆಗೆ ಮರುಗುತ್ತಿದೆ. ನಿರಂತರ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ವಿರುದ್ಧ ಪ್ರತೀಕಾರಕ್ಕೆ ಹಮಾಸ್ ಉಗ್ರರು 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಈ ಕುರಿತು ವಿಡಿಯೋಗಳು ಬಹಿರಂಗವಾಗಿದೆ.

ಇಸ್ರೇಲ್‌ ಒಳ ನುಗ್ಗಿ ಹಮಾಸ್ ಉಗ್ರರು ಶನಿವಾರದಿಂದ ನಡೆಸಿರುವ ಭೀಕರ ಹತ್ಯೆಯಲ್ಲಿ 40 ಮಕ್ಕಳ ಶಿರಚ್ಚೇಧ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಸ್ರೇಲ್ ಸೈನಿಕರು ಕಾರ್ಯಾಚರಣೆಯಲ್ಲಿ ಹಲವು ಭಾಗದಲ್ಲಿ ಮಕ್ಕಳು, ಪೋಷಕರು ಸೇರಿದಂತೆ ಕುಟುಂಬಗಳನ್ನೇ ಹತ್ಯೆ ಮಾಡಿರುವ ಘಟನೆಗಳೇ ಎದುರಾಗುತ್ತಿದೆ. ಇಸ್ರೇಲ್ ಮನೆಗಳ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳೇ ಇದ್ದಾರೆ.

ಗಾಜಾ ಗಡಿ ಮೇಲೆ ಹಿಡಿತ ಸಾಧಿಸಿದ ಇಸ್ರೇಲ್‌ಗೆ ಹಮಾಸ್ ಉಗ್ರರ ತಿರುಗೇಟು, ಒತ್ತೆಯಾಳುಗಳ ಹತ್ಯೆ ಬೆದರಿಕೆ!

ಎಳೆ ಹಸಗೂಸು, ಒಂದು ವರ್ಷದಿಂದ 14 ವರ್ಷದ ಮಕ್ಕಳನ್ನೂ ಬಿಡದೇ ಶಿರಚ್ಛೇಧ ಮಾಡಲಾಗಿದೆ. ಇನ್ನು ಹೆಣ್ಣು ಮಕ್ಕಳು, ಮಹಿಳೆಯರು ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ ತಾವೇ ಹಮಾಸ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಇನ್ನು ಈ ಮಕ್ಕಳನ್ನು ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ.

900 ಇಸ್ರೇಲ್ ನಾಗರೀಕರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆ. 2,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ ಒಳಗೆ ಹಮಾಸ್ ಉಗ್ರರು ನಡೆಸಿದ ಭೀಕರತೆ ಅಮೆರಿಕ ಕೆರಳಿದೆ. ಅಮೆರಿಕ ಆಪರೇಶನ್ ಫೋರ್ಸ್ ಇದೀಗ ಇಸ್ರೇಲ್‌ಗೆ ಬಂದಿಳಿದಿದೆ. ಕಾರ್ಯಾಚರಣೆ ತೀವ್ರಗೊಳ್ಳುತ್ತಿದೆ. ಗಾಜಾದ ಮೇಲಿನ ದಾಳಿ ಜೊತೆಗೆ ಇಸ್ರೇಲ್ ಒಳಗಿರುವ ಹಮಾಸ್ ಉಗ್ರರ ಸದೆಬಡಿಯಲು ಕಾರ್ಯಾಚರಣೆ ತೀವ್ರಗೊಂಡಿದೆ.

ಇಸ್ರೇಲ್‌ ಐರನ್‌ ಡೋಮ್‌ಗೆ ಕ್ಷಿಪಣಿಗಳು ಬಡಿದು ದೂರ ಚಿಮ್ಮುವ ವೀಡಿಯೋ ವೈರಲ್‌

Follow Us:
Download App:
  • android
  • ios